ನ್ಯೂಸ್

ವಿವಿಧ ವೃತ್ತಿ ಪ್ರವೇಶ ಪಡೆಯಲು ಸೂಚನೆ


ಅಫಜಲಪುರ: ಚೌಡಾಪುರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಎನ್‌ಸಿವಿಟಿ ಸಂಯೋಜನೆಯಡಿ ಸಿಟಿಎಸ್ ಮೂರು ವೃತ್ತಿ ಘಟಕ ಮತ್ತು ಟಾಟಾ ಎರಡು ವೃತ್ತಿ ಘಟಕಗಳಲ್ಲಿ ಖಾಲಿಯಿರುವ ವೃತ್ತಿಗಳಿಗೆ ಅರ್ಹ ಅಭ್ಯರ್ಥಿಗಳು ಆ.೩೧ ರೊಳಗಾಗಿ ಖುದ್ದಾಗಿ ಅರ್ಜಿ ಸಲ್ಲಿಸಿ ಪ್ರವೇಶ ಪಡೆಯಬೇಕು ಎಂದು ತರಬೇತಿ ಸಂಸ್ಥೆಯ ಪ್ರಾಚಾರ್ಯರ ಕಚೇರಿ ಪ್ರಕಟಣೆ ತಿಳಿಸಿದೆ. ಸಿಟಿಎಸ್ ವೃತ್ತಿ ಘಟಕಗಳಾದ ಮೆಕಾನಿಕ್ ಮೋಟಾರ್ ವಹಿಕಲ್, ಮೆಕಾನಿಕ್ ರೆಫ್ರಿಜಿರೇಟರ್ ಆ್ಯಂಡ್ ಏರ್ ಕಂಡಿಶನಿAಗ್ (ಎಂಆರ್ ಆಂಡ್ ಎಸಿ) ಮತ್ತು ಟರ್ನರ್, ಟಾಟಾ ವೃತ್ತಿ ಘಟಕಗಳಾದ ಮೆಕಾನಿಕ್ ಎಲೆಕ್ಟಿçಕ್ ವೆಹಿಕಲ್ ಸೀಟಿಗೆ ಪ್ರವೇಶ ಪಡೆಯಬಹುದು. ಮೆರಿಟ್ ಆಧಾರದ ಮೇಲೆ ಪ್ರವೇಶ ಸಿಗಲಿದೆ. ಮಾಹಿತಿಗೆ ಪ್ರಥಮ ದರ್ಜೆ ಸಹಾಯಕ ಆನಂದ-೯೮೮೦೫೪೧೩೩೧, ತರಬೇತಿ ಅಧಿಕಾರಿ ಭೀಮಪ್ಪ ತಳವಾರ-೯೯೦೨೬೦೨೭೦೬ ಅವರನ್ನು ಸಂಪರ್ಕಿಸಬಹುದು.