ನ್ಯೂಸ್

ವಿವಿಧ ಮಹನೀಯರ ಜಯಂತಿಗಳ ಆಚರಣೆಗೆ ಪೂರ್ವಭಾವಿ ಸಭೆ

ವಿಜಯವಾಣಿ ಸುದ್ದಿಜಾಲ ಕೋಲಾರ

ಕೋಲಾರ ಜಿಲ್ಲೆಯಲ್ಲಿ ಫೆ.೧೦ ರಂದು ಕಾಯಕ ಯೋಗಿ ಶಿವಶರಣರ ಜಯಂತಿ, ಫೆ.೧೫ ರಂದು ಸಂತ ಸೇವಾಲಾಲ್ ಜಯಂತಿ, ಫೆ.೧೯ ರಂದು ಛತ್ರಪತಿ ಶಿವಾಜಿ ಜಯಂತಿ ಹಾಗೂ ಫೆ.೨೦ ರಂದು ಸರ್ವಜ್ಞ ಜಯಂತಿಗಳ ಆಚರಣೆ ಮತ್ತು ಕುರಿತು ವಿವಿಧ ಸಮುದಾಯದ ಮುಖಂಡರ ಜೊತೆ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಮಂಗಳವಾರ ಪೂರ್ವಭಾವಿ ಸಭೆಯನ್ನು ನಡೆಸಿದರು.

ಅಪರ ಜಿಲ್ಲಾಧಿಕಾರಿ ಮಂಗಳ ಅವರು ಮಾತನಾಡಿ, ಆಯಾ ಜಯಂತಿಯ ದಿನದಂದು ಸಂಬAಧಿತ ಮಹನೀಯರ ಸ್ಥಬ್ದಚಿತ್ರಗಳನ್ನು ಮೆರವಣಿಗೆ ನಡೆಸಿ, ನಂತರ ನಗರದ ಟಿ.ಚೆನ್ನಯ್ಯ ರಂಗಮAದಿರದಲ್ಲಿ ವೇದಿಕೆ ಕಾರ್ಯಕ್ರಮಗಳನ್ನು ಮಾಡಲಾಗುವುದು ಮತ್ತು ಕಾರ್ಯಕ್ರಮ ಕುರಿತು ಆಹ್ವಾನ ಪತ್ರಿಕೆಗಳನ್ನು ಮುದ್ರಿಸಿ ಎಲ್ಲರಿಗೂ ವಿತರಿಸಲಾಗುವುದು ಎಂದು ತಿಳಿಸಿದರು.

ಸಮುದಾಯದ ಮುಖಂಡರು ಮಾತನಾಡಿ, ಪ್ರತಿಯೊಂದು ಶಾಲಾ ಕಾಲೇಜು ಸರ್ಕಾರಿ ಕಛೇರಿಗಳಲ್ಲಿ ಮಹನೀಯರ ಜಯಂತಿಗಳನ್ನು ತಪ್ಪದೆ ಆಚರಣೆ ಮಾಡಿ ಮತ್ತು ವಿದ್ಯಾರ್ಥಿಗಳಿಗೆ ಮಹನೀಯರ ಬಗ್ಗೆ ಉಪನ್ಯಾಸವನ್ನು ನೀಡಬೇಕಾಗಿದೆ ಎಂದು ತಿಳಿಸಿದರು.

ಉಪ ವಿಭಾಗಾಧಿಕಾರಿ ಡಾ.ಮೈತ್ರಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ವಿಜಯಲಕ್ಷ್ಮಿ ಸೇರಿದಂತೆ ಎಲ್ಲಾ ಸಮುದಾಯದ ಮುಖಂಡರು ಇದ್ದರು.

ಚಿತ್ರ ೦೪ ಕೆ.ಎಲ್.ಆರ್. ೦೩ : ಮಹನೀಯರ ಜಯಂತಿಗಳ ಪೂರ್ವಭಾವಿ ಸಭೆಯನ್ನು ಅಪರ ಜಿಲ್ಲಾಧಿಕಾರಿ ಮಂಗಳ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಉಪ ವಿಭಾಗಾಧಿಕಾರಿ ಡಾ.ಮೈತ್ರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ವಿಜಯಲಕ್ಷಿö್ಮÃ ಇದ್ದರು.