ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ನ್ಯೂ ಸಯ್ಯಾಜಿರಾವ್ ರಸ್ತೆ, ವಿಶ್ವೇಶ್ವರಯ್ಯ ವೃತ್ತ, ಮೈಸೂರು ಇಲ್ಲಿನ ಪಂಚಕರ್ಮ ಹೊರರೋಗಿ ವಿಭಾಗದಲ್ಲಿ ರೂಂ ನಂ-14 ಅಕ್ಟೋಬರ್ 31 ರವರೆಗೆ ತಜ್ಞ ವೈದ್ಯರಿಂದ ಈ ಕೆಳಕಂಡ ಖಾಯಿಲೆಗಳಿಗೆ ಉಚಿತ ತಪಾಸಣೆ ಮತ್ತು ವಿಶೇಷ ಚಿಕಿತ್ಸಾ ಶಿಬಿರವನ್ನು ಬೆಳಗ್ಗೆ 9 ಗಂಟೆಯಿoದ ಮಧ್ಯಾಹ್ನ 01 ಗಂಟೆಯವರೆಗೆ ನಡೆಸಲಾಗುವುದು, ಹಾಗೂ ಈ ಶಿಬಿರವನ್ನು ಉಚಿತ ಆಯುರ್ವೇದ ಚಿಕಿತ್ಸೆಯನ್ನು ನೀಡಲಾಗುವುದು.
ಅಲ್ಪ ವಿರ್ಯಾಣು (ಪುರುಷ ಬಂಜೆತನ) ಕಾಯಿಲೆಗೆ ಚಿಕಿತ್ಸೆ ನೀಡುವ ವೈದ್ಯರು ಡಾ. ಶ್ರವಣ್ ಕುಮಾರ್ ಮದ್ದಿ ಇವರ ದೂ.ಸಂ: 8073963348, ಭುಜ ಸಂದಿ ನೋವು ಕಾಯಿಲೆಗೆ ಚಿಕಿತ್ಸೆ ನೀಡುವ ವೈದ್ಯರು ಡಾ. ರಿಷಬ್ ಇವರ ದೂ.ಸಂ: 8076891463, ಮೂತ್ರಕೋಶದ ಕಲ್ಲು ಕಾಯಿಲೆಗೆ ಚಿಕಿತ್ಸೆ ನೀಡುವ ವೈದ್ಯರು ಡಾ. ಶಾರದ ಎಂ ಇವರ ದೂ.ಸಂ: 7996048943, ರಕ್ತನಾಳಗಳ ಉಬ್ಬುವಿಕೆ ಕಾಯಿಲೆಗೆ ಚಿಕಿತ್ಸೆ ನೀಡುವ ವೈದ್ಯರು ಡಾ. ಮೇಘಶ್ರೀ ಜೆ.ಎಸ್ ಇವರ ದೂ.ಸಂ: 9148247571, ಕಿಟಿಬ ಚರ್ಮ ರೋಗ ಕಾಯಿಲೆಗೆ ಚಿಕಿತ್ಸೆ ನೀಡುವ ವೈದ್ಯರು ಡಾ. ಸೌಮ್ಯ ಇವರ ದೂ.ಸಂ: 9663256892 ನ್ನು ಸಂಪರ್ಕಿಸಬಹುದು ಎಂದು ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.