ನ್ಯೂಸ್

ವಿವಿಧ ಕ್ಷೇತ್ರದ ಸಾಧಕರಿಗೆ ನಾಲ್ವಡಿ ಪ್ರಶಸ್ತಿ ಪ್ರಕಟ

ವಿವಿಧ ಕ್ಷೇತ್ರದ ಸಾಧಕರಿಗೆ ನಾಲ್ವಡಿ ಪ್ರಶಸ್ತಿ ಪ್ರಕಟ

ಸಮಾಜ ಸೇವೆ ಶಿಕ್ಷಣ, ಪತ್ರಿಕೋದ್ಯಮ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ‘ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್’ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.

ಅಹಿಂದ ಜವರಪ್ಪ, ರೇಖಾ ಶ್ರೀನಿವಾಸ್(ಸಮಾಜ ಸೇವೆ), ಡಾ.ಮೀರಾ ಶಿವಲಿಂಗಯ್ಯ(ಶಿಕ್ಷಣ), ಲಕ್ಷ್ಮೀನಾರಾಯಣ ಯಾದವ್, ಎಂ.ಎಸ್.ಬಸವಣ್ಣ (ಪತ್ರಿಕಾ ಛಾಯಾಗ್ರಹಣ), ಎಂ.ಮೋಹನ್‌ಕುಮಾರ್ ಗೌಡ (ಕನ್ನಡಪರ ಹೋರಾಟಗಾರ), ಪಿ.ಮಹದೇವಸ್ವಾಮಿ (ಜನಪದ ಪ್ರದರ್ಶನ ಕಲಾವಿದರು), ಕೆ.ಪಿ.ದಿವಾಕರ (ನಿವೃತ್ತ ಸೈನಿಕರು), ಮಂಜುನಾಥ್ ಸಿ.ಕೆ.ಚುಂಚನಕಟ್ಟೆ (ಡೋಲುವಾದ್ಯ ಕಲಾವಿದರು), ಜೆ.ಮೂರ್ತಿ ಮುಡಿಗುಂಡ (ಚಿತ್ರಕಲೆ), ಅಮ್ಮ ರಾಮಚಂದ್ರ (ಸಂಗೀತ ಕ್ಷೇತ್ರ), ಗಂಗಾಧರ ಸೋಸಲೆ (ಕಲಾವಿದ), ಎಸ್.ಸಿ.ಜಯಶಂಕರ (ಜನಪದ ಗಾಯನ), ಅರವಿಂದ ಶರ್ಮ (ಸಾಮಾಜಿಕ ಚಳವಳಿ) ಹಾಗೂ ಸಂಸ್ಥೆಗಳ ವಿಭಾಗದಲ್ಲಿ ಸಮತಾ (ಮಹಿಳಾ ಸಬಲೀಕರಣ), ಕಸ್ತೂರಬಾ ಗಾಂಧಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅರಸೀಕೆರೆ (ಸಮಾಜ ಸೇವೆ) ಪ್ರಶಸ್ತಿ ಪ್ರಕಟಿಸಲಾಗಿದೆ.