ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ 2025-26ನೇ ಸಾಲಿನಲ್ಲಿ ಕ್ರೀಡಾ ವಸತಿ ಶಾಲೆ/ನಿಲಯಗಳಿಗೆ 8ನೇ ತರಗತಿ ಮತ್ತು ಪ್ರಥಮ ಪಿ.ಯು.ಸಿ. ತರಗತಿಗೆ ಪ್ರವೇಶ ನೀಡುವ ಸಂಬoಧ ಅವಕಾಶ ವಂಚಿತ ಮತ್ತು ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗದ ಕ್ರೀಡಾಪಟುಗಳಿಗಾಗಿ ಈ ಕೆಳಕಂಡAತೆ ವಿಶೇಷ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಗುವುದು.
ಕ್ರೀಡೆಗಳು ವರದಿ ಮಾಡಿಕೊಳ್ಳುವ ಸ್ಥಳ ವರದಿ ಮಾಡಿಕೊಳ್ಳುವ ದಿನಾಂಕ ಹಾಗೂ ಸಮಯ: 06-06-2025 ಬೆಳಿಗ್ಗೆ 9.30 ಕ್ಕೆ ಬಾಸ್ಕೆಟ್‌ಬಾಲ್, ಕಬಡ್ಡಿ ಹಾಗೂ ವಾಲಿಬಾಲ್ ಶ್ರೀಕಂಠೀರವ ಕ್ರೀಡಾಂಗಣ, ಬೆಂಗಳೂರು ನಗರ ಜಿಲ್ಲೆ, ಹಾಕಿ ಅಕ್ಕಿತಿಮ್ಮನಹಳ್ಳಿ ಹಾಕಿ ಕ್ರೀಡಾಂಗಣ, ಬೆಂಗಳೂರು ನಗರ ಜಿಲ್ಲೆ, ಸೈಕ್ಲಿಂಗ್ ಡಾ. ಬಿ. ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ವಿಜಯಪುರ ಜಿಲ್ಲೆ, ಜುಡೋ ಹಾಗೂ ಕುಸ್ತಿ, ಉಪ ನಿರ್ದೇಶಕರ ಕಛೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕ್ರೀಡಾಂಗಣ, ಬೆಳಗಾವಿ ಜಿಲ್ಲೆ, ಅಥ್ಲೆಟಿಕ್ಸ್ ಹಾಗೂ ಫುಟ್ಬಾಲ್ ಸರ್ಕಾರಿ ಕ್ರೀಡಾ ಪ್ರೌಢಶಾಲೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶ್ರೀ ಜಯಪ್ರಕಾಶ ನಾರಾಯಣ ರಾಷ್ಟ್ರೀಯ ಯುವ ತರಬೇತಿ ಕೇಂದ್ರ ವಿದ್ಯಾನಗರ, ಬೆಂಗಳೂರು ಉತ್ತರ, ಖೋ-ಖೋ ಸಹಾಯಕ ನಿರ್ದೇಶಕರ ಕಛೇರಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕ್ರೀಡಾಂಗಣ, ದಾವಣಗೆರೆ ಜಿಲ್ಲೆಯಲ್ಲಿ ಮಾಡಲಾಗುವುದು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ರಾಜ್ಯದಲ್ಲಿ ನಡೆಸುತ್ತಿರುವ ಕ್ರೀಡಾಶಾಲೆ/ನಿಲಯಗಳಿಗೆ 14 ವರ್ಷದೊಳಗಿನ (01-06-2011ರ ನಂತರ ಜನಿಸಿದವರು) ಮತ್ತು 2025-26ನೇ ಸಾಲಿಗೆ 8ನೇ ತರಗತಿಗೆ ಪ್ರವೇಶ ಪಡೆಯಲು ಅರ್ಹತೆ ಹೊಂದಿರುವ ಹಿರಿಯರ ವಿಭಾಗದ ಆಸಕ್ತ ಯುವಕ/ಯುವತಿಯರು ವಿಶೇಷ ಆಯ್ಕೆ ಪ್ರಕ್ರಿಯೆಗೆ ಬರುವಾಗ ಇತ್ತಿಚ್ಛಿನ ಭಾವಚಿತ್ರ, ವೈದ್ಯಕೀಯ ದೃಢೀಕರಣ ಪತ್ರ ಮತ್ತು ಆಧಾರ್ ಕಾರ್ಡ್ನ್ನು ತರವುದು ಕಡ್ಡಾಯವಾಗಿರುತ್ತದೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖಾ ವತಿಯಿಂದ ರಾಜ್ಯದಲ್ಲಿ ನಡೆಸುತ್ತಿರುವ ಕ್ರೀಡಾಶಾಲೆ/ನಿಲಯಗಳಿಗೆ 18 ವರ್ಷದೊಳಗಿನ (01-06-2007 ರ ನಂತರ ಜನಿಸಿದವರು) ಮತ್ತು 2025-26ನೇ ಸಾಲಿಗೆ ಪ್ರಥಮ ಪಿ.ಯು.ಸಿ. ತರಗತಿಗೆ ಪ್ರವೇಶ ಪಡೆಯಲು ಅರ್ಹತೆ ಹೊಂದಿರುವ ಹಿರಿಯರ ವಿಭಾಗದ ಆಸಕ್ತ ಯುವಕ/ಯುವತಿಯರು ಆಯ್ಕೆ ಪ್ರಕ್ರಿಯೆಗೆ ಬರುವಾಗ ಇತ್ತಿಚ್ಛಿನ ಭಾವಚಿತ್ರ, ವೈದ್ಯಕೀಯ ದೃಢೀಕರಣ ಪತ್ರ ಮತ್ತು ಆಧಾರ್ ಕಾರ್ಡ್ನ್ನು ತರುವುದು ಕಡ್ಡಾಯವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮೈಸೂರು ಇಲ್ಲಿನ ದೂ.ಸಂ: 0821-2564179 ರ ಮೂಲಕ ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ, ಸಹಾಯಕ ನಿರ್ದೇಶಕರಾದ ಭಾಸ್ಕರ್ ನಾಯಕ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.