ನ್ಯೂಸ್

ವಿವಿಧ ಕಾಮಗಾರಿಗಳಿಗೆ ಚನ್ನರಾಜ ಹಟ್ಟಿಹೊಳಿ ಚಾಲನೆ

ಬೆಳಗಾವಿ: ತಾಲೂಕಿನ ಶಿಂದೋಳಿ ಗ್ರಾಮದಲ್ಲಿ ಏಪ್ರಿಲ್ನಲ್ಲಿ ನಡೆಯಲಿರುವ ಮಹಾಲಕ್ಷ್ಮೀದೇವಿ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಗ್ರಾಮದ ಒಳಾಂಗಣ ರಸ್ತೆ ಹಾಗೂ ಚರಂಡಿ ನಿರ್ಮಾಣದ ಕಾಮಗಾರಿಗಳಿಗೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಶನಿವಾರ ಚಾಲನೆ ನೀಡಿದರು.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿಶೇಷ ಪ್ರಯತ್ನದಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಮಂಜೂರು ಮಾಡಿಸಲಾಗಿದೆ. ಸುಮಾರು 15 ವರ್ಷಗಳ ಬಳಿಕ ಜಾತ್ರೆ ನಡೆಯುತ್ತಿದೆ. ಕಾರಣ ನಿಗದಿತ ಸಮಯದಲ್ಲಿ ಗುಣಮಟ್ಟದ ರಸ್ತೆ ಹಾಗೂ ಚರಂಡಿ ನಿರ್ಮಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಗ್ರಾಮದ ಮುಖಂಡರೊಂದಿಗೆ ಈಗಾಗಲೆ 2-3 ಸುತ್ತಿನ ಸಭೆ ನಡೆಸಲಾಗಿದೆ ಎಂದರು.

ಪಿಡಿಒ ಶ್ರೀದೇವಿ ಹಿರೇಮಠ, ಸುರೇಶ ಪಾಟೀಲ, ರಾಕೇಶಗೌಡ ಪಾಟೀಲ, ಶಿವು ಸೈಬಣ್ಣವರ, ಶೈಲಾ ತಿಪ್ಪಣ್ಣಗೋಳ, ರಾಜು ಪಾಟೀಲ, ಕೃಷ್ಣ ಅನಗೋಳ್ಕರ್, ಸುರೇಶ ಮುಚ್ಚಂಡಿ, ಲಕ್ಷ್ಮಣ ಹಲಗೇಕರ, ಭರಮಾ ಶಹಾಪೂರಕರ, ಯಲ್ಲಪ್ಪ ಶಹಾಪೂರಕರ, ಲಕ್ಷ್ಮಣ ಅಗಸಿಮನಿ, ನಾಗೇಶ ದೇಸಾಯಿ, ಮಲ್ಲಾರ್ದ ಮುಚ್ಚಂಡಿ, ಪಿಂಟು ಮಲ್ಲವ್ವಗೋಳ, ಗಜು ಕಣಬರ್ಕರ, ನಿಂಗಪ್ಪ ಮೊದಗೇಕರ, ಗುಂಡು ತಳವಾರ, ಮಲ್ಲಪ್ಪ ತಿಪಣ್ಣಗೋಳ, ನಾಗೇಂದ್ರ ಕುರುಬರ, ಲಕ್ಷ್ಮಣ ಪೂಜೇರಿ ಇತರರಿದ್ದರು.