ನ್ಯೂಸ್

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಚಾಲನೆ

ಚಿತ್ರದುರ್ಗ: ಚಿತ್ರದುರ್ಗ ನಗರಸಭೆ ಘನತ್ಯಾಜ್ಯ ವಸ್ತು ವಿಲೇವಾರಿ ಘಟಕ ನಿರ್ಮಾಣ ಹಾಗೂ ವಾರ್ಡ್ ನಂ.35 ರಲ್ಲಿ ವಿವಿಧ ಮೂಲ ಸೌಕರ‌್ಯಗಳ ಕಾಮ ಗಾರಿಗಳಿಗೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಶನಿವಾರ ಚಾಲನೆ ನೀಡಿದರು.

ನಗರಸಭೆ ಘನತ್ಯಾಜ್ಯ ವಸ್ತು ವಿಲೇವಾರಿ ಘಟಕದಲ್ಲಿ 3.22 ಕೋಟಿ ರೂ.ವೆಚ್ಚದೊಂದಿಗೆ ನಿರ್ಮಿಸುತ್ತಿರುವ ಒಣ ತ್ಯಾಜ್ಯ ಸಂಸ್ಕರಣಾ ಘಟಕದ ಋ್ಕಿಊ(ಠಿಛ್ಟಿಜಿಚ್ಝ ್ಕಛ್ಚಿಟಛ್ಟಿ ಊಠ್ಚಜ್ಝಿಜಿಠಿ)ಕಾಮಗಾರಿಗೆ ಶಾಸಕರು ಗುದ್ದಲಿ ಪೂಜೆ ನೆರವೇರಿಸಿದರು. ಒಣ ತ್ಯಾಜ್ಯ ವಸ್ತು ಸಂಸ್ಕರಣೆ ಘಟಕ ನಿರ್ಮಾಣ ನಂತರ,ನಿತ್ಯ ನಗರ ವ್ಯಾಪ್ತಿಯ ಒಣ ತ್ಯಾಜ್ಯದಲ್ಲಿ ಮರು ಬಳಕೆ ವಸ್ತುಗಳಾದ ಪ್ಲಾಸ್ಟಿಕ್ ಕವರ್, ನ್ಯೂಸ್ ಪೇಪರ್, ಪ್ಲಾಸ್ಟಿಕ್ ಬಾಟಲ್,ರಟ್ಟು, ಕ್ಯಾನ್,ಲೋಹದ ವಸ್ತು ಇತ್ಯಾದಿ 20 ಹೆಚ್ಚು ವಿಧವಾಗಿ ಇಲ್ಲಿ ವಿಂಗಡಿಸಲಾಗುವುದು. ಘಟಕದಲ್ಲಿ 20 ವರ್ಷಗಳಿಂದ ಶೇಖರಣೆಯಾಗಿರುವ ಅಂದಾಜು 90 ಸಾವಿರ ಟನ್ ಗಳಷ್ಟು ತ್ಯಾಜ್ಯವನ್ನು ಸಂಸ್ಕರಿಸಿ ವಿಲೇವಾರಿ ಮಾಡಲು 755 ಲಕ್ಷ ರೂ.ವೆಚ್ಚಕ್ಕೆ ಟೆಂಡರ್ ಕರೆಯಲಾಗಿದೆ. ಈಗಾಗಲೇ ಸಂಗ್ರಹವಾಗಿರುವ ಘನತ್ಯಾಜ್ಯವನ್ನು ಒಂದು ವರ್ಷದಲ್ಲಿ ವಿಲೇವಾರಿ ಮಾಡಲಾಗುವುದು. ಇದರಿಂದ ತ್ಯಾಜ್ಯವಿರುವ 10 ಎಕರೆ ಜಾಗ ಮರು ಬಳಕೆಗೆ ಲಭ್ಯವಾಗದೆ.ಒಣ ತ್ಯಾಜ್ಯವಸ್ತು ವಿಲೇವಾರಿ ಘಟಕ ಪ್ರಾರಂಭವಾದ ನಂತರ ತ್ಯಾಜ್ಯ ಶೇಖರಣೆ ಯಾಗದಂತೆ ವಿಂಗಡಿಸಿ,ಸಂಸ್ಕರಿಸಿ ವಿಲೇವಾರಿ ಮಾಡಲಾಗುವುದು ಎಂದು ಸಹಾಯಕ ಕಾರ್ಯಪಾಲಕ ಅಭಿಯಂತರ(ಪರಿಸರ) ಜೆ. ಜಾಫರ್ ಸಾಬ್ ಶಾಸಕರಿಗೆ ಮಾಹಿತಿ ನೀಡಿದರು.

2023- 24 ನೇ ಸಾಲಿನ ಮುಖ್ಯಮಂತ್ರಿ ವಿಶೇಷ ಅನುದಾನ 50 ಲಕ್ಷ ರೂ.ವೆಚ್ಚದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗೆ ವಾರ್ಡ್‌ನಂಬರ್ 35ರಲ್ಲಿ ಶಾಸಕರು ಗುದ್ದಲಿ ಪೂಜೆ ನೆರವೇರಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಸೈಯದ್ ನಸ್ರುಲ್ಲಾ, ಪೌರಾಯುಕ್ತೆ ಎಂ. ರೇ ಣುಕಾ,ಸದಸ್ಯರಾದ ಎಚ್.ಎನ್.ಮಂಜುನಾಥ,ಎಸ್.ಭಾಸ್ಕರ್,ತಾರಕೇಶ್ವರಿ,ಗೊಪ್ಪೆ ಮಂಜುನಾಥ, ಮೊಹಮ್ಮದ್‌ದಾವುದ್,ಎಸ್.ಜಯಪ್ಪ ನಾಮ ನಿರ್ದೇಶಿತ ಸದಸ್ಯ ಶಬ್ಬೀರ್,ಎಇ ರಾಜು ಇತರರು ಇದ್ದರು.