ವಿರಾಜಪೇಟೆ ಪಟ್ಟಣದ ಮಹಿಳಾ ಸಮಾಜದಿಂದ ಬೇಟೋಳಿ ಅಂಗನವಾಡಿವರೆಗೆ ತೆರಳುವ ರಸ್ತೆಗೆ ಮಾಜಿ ಮಂತ್ರಿ ಹಾಗೂ ಶಿಕ್ಷಣ ತಜ್ಞ ಪಟ್ಟಡ ಸಿ.ಉತ್ತಯ್ಯ ಎಂದು ನಾಮಕರಣ ಮಾಡಲಾಯಿತು. ಶಾಸಕ ಎ.ಎಸ್.ಪೊನ್ನಣ್ಣ, ದೇಚಮ್ಮ ಕಾಳಪ್ಪ, ಪೂವಣ್ಣ, ರಂಜಿ ಪೂಣಚ್ಚ ಇದ್ದರು. 
ನ್ಯೂಸ್

ವಿರಾಜಪೇಟೆ ಮಹಿಳಾ ಸಮಾಜ ರಸ್ತೆಗೆ ನಾಮಕರಣ

ವಿರಾಜಪೇಟೆ: ಪಟ್ಟಣದ ಮಹಿಳಾ ಸಮಾಜದಿಂದ ಬೇಟೋಳಿ ಅಂಗನವಾಡಿವರೆಗೆ ತೆರಳುವ ರಸ್ತೆಗೆ ಮಾಜಿ ಮಂತ್ರಿ ಹಾಗೂ ಶಿಕ್ಷಣ ತಜ್ಞ ಪಟ್ಟಡ ಸಿ.ಉತ್ತಯ್ಯ ಅವರ ಹೆಸರನ್ನು ಇಡಲಾಗಿದ್ದು, ನಾಮಫಲಕವನ್ನು ಭಾನುವಾರ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅನಾವರಣಗೊಳಿಸಿದರು.

ಬಳಿಕ ಬೇಟೋಳಿ ಗ್ರಾಮದ ಪಟ್ಟಡ ಐನ್‌ಮನೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಐನ್‌ಮನೆ ಎಂಬುದು ಕೊಡವ ಸಂಸ್ಕೃತಿಯಲ್ಲಿ ಪ್ರತಿಷ್ಠೆಯ ವಿಷಯವಾಗಿದೆ. ಪ್ರತಿ ಕುಟುಂಬಕ್ಕೂ ಅವರದ್ದೇ ಆದ ಐನ್‌ಮನೆ ಇದ್ದು, ಕುಟುಂಬದಲ್ಲಿ ಯಾವುದೇ ಕಾರ್ಯಕ್ರಮ ಆದರೂ ಐನ್‌ಮನೆಯಲ್ಲಿ ನಡೆಯುವುದು ಸಂಪ್ರದಾಯ. ಕ್ಷೇತ್ರದ ಒಳಗಿನ ಎಲ್ಲ ಐನ್‌ಮನೆಗಳ ಅಭಿವೃದ್ಧಿಗಾಗಿ ಅನುದಾನವನ್ನು ಒದಗಿಸುತ್ತಿದ್ದು, ಸದುಪಯೋಗವನ್ನು ಎಲ್ಲರೂ ಪಡೆದುಕೊಂಡು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಬೇಕೆಂದು ಕರೆ ನೀಡಿದರು.

ವೇದಿಕೆ ಕಾರ್ಯಕ್ರಮದ ನಂತರ ಪಟ್ಟಡ ಕುಟುಂಬದ ಸಾಧಕರನ್ನು ಸನ್ಮಾನಿಸಲಾಯಿತು. ಪಟ್ಟಡ ಕುಟುಂಬ ಅಧ್ಯಕ್ಷ ಪಟ್ಟಡ ಪೂವಣ್ಣ, ಪಟ್ಟಡ ಸತೀಶ್, ಮನು ರಾಮಚಂದ್ರ,,ಪಟ್ಟಡ ಬೇಬಿ, ಪಟ್ಟಡ ರೀನಾ ಪ್ರಕಾಶ್, ವಿರಾಜಪೇಟೆ ಪುರಸಭೆ ಅಧ್ಯಕ್ಷೆ ಮನೆಯಪಂಡ ದೇಚಮ್ಮ ಕಾಳಪ್ಪ, ಪುರಸಭಾ ಸದಸ್ಯೆ ಸುನೀತಾ ಜೂನ, ಮುಕ್ಕಾಟೀರ ಚೋಟು ಅಪ್ಪಯ್ಯ, ಪಟ್ಟಡ ರಂಜಿ ಪೂಣಚ್ಚ ಇತರರಿದ್ದರು.