ಕೆ.ಆರ್.ನಗರದ ಲಯನ್ಸ್ ವಿದ್ಯಾ ಸಂಸ್ಥೆಯಲ್ಲಿ ಗುರುನಮನ ಕಾರ್ಯಕ್ರಮದಲ್ಲಿ ಶಿಕ್ಷಕರನ್ನು ಸನ್ಮಾನಿಸಲಾಯಿತು. ಅಂಶಿ ಪ್ರಸನ್ನಕುಮಾರ್, ಬುದ್ಧಿ ಸಾಗರ್ ಇತರರು ಇದ್ದರು. 
ನ್ಯೂಸ್

ವಿದ್ಯೆ ನೀಡಿದ ಶಿಕ್ಷಕರನ್ನು ಮರೆಯದಿರಿ

ಕೆ.ಆರ್.ನಗರ: ಸಾಕಿ ಸಲುಹಿದ ತಂದೆ, ತಾಯಿ ಹಾಗೂ ವಿದ್ಯೆ ನೀಡಿದ ಶಿಕ್ಷಕರನ್ನು ಮರೆಯಬಾರದು ಎಂದು ಪತ್ರಕರ್ತ ಅಂಶಿಪ್ರಸನ್ನ ಕುಮಾರ್ ಹೇಳಿದರು.


ಪಟ್ಟಣದ ಲಯನ್ಸ್ ವಿದ್ಯಾಸಂಸ್ಥೆಯಿಂದ ಶಿಕ್ಷಕರ ದಿನಾಚರಣೆ ಪ್ರಯುಕ್ತ ಗುರುವಾರ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರುನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಗುರುವಿನ ತ್ಯಾಗ ಅಪಾರವಾದದ್ದು. ತನ್ನ ಶಿಷ್ಯ, ತನಗಿಂತ ಎತ್ತರಕ್ಕೆ ಬೆಳೆಯಬೇಕೆಂಬ ಆಸೆ ಏನಾದರೂ ಇದ್ದರೆ ಅದು ಗುರುವಿಗೆ ಮಾತ್ರ. ಅಂಥ ತ್ಯಾಗವನ್ನು ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಮಾಡಿದ್ದಾರೆ ಎಂದು ತಿಳಿಸಿದರು.


ಲಯನ್ಸ್ ವಿದ್ಯಾ ಸಂಸ್ಥೆ ಅಧ್ಯಕ್ಷ ಬುದ್ಧಿ ಸಾಗರ್, ಕಾರ್ಯದರ್ಶಿ ಕೆ.ಸಿ.ಲೋಕೇಶ್, ಆಡಳಿತಾಧಿಕಾರಿ ಎಸ್.ಸದಾಶಿವ, ಮುಖ್ಯ ಶಿಕ್ಷಕರಾದ ಟಿ.ಪಿ.ನಂದೀಶ್ ಕುಮಾರ್, ಎಲ್.ಎಸ್.ಲೋಕೇಶ್, ಜಿ.ರಮೇಶ್, ಶಿಕ್ಷಕ ಗಂಗಾಧರ್ ಮಾತನಾಡಿದರು.


ಜಿಲ್ಲಾ ಪತ್ರಕರ್ತರ ಸಂಘದ ಗ್ರಾಮಾಂತರ ಉಪಾಧ್ಯಕ್ಷ ಧರ್ಮಾಪುರ ನಾರಾಯಣ್, ಶಿಕ್ಷಕರಾದ ಯೋಗಾನಂದ್, ದಿವಾಕರ್, ಸುಜಾತಾ, ಸತ್ಯವತಿ, ಆಶಾ, ರೂಪಾ, ಅಶ್ವಿನಿ, ರುಕ್ಮಿಣಿ, ತುಂಗೇಶ್, ಹರೀಶ್, ಕೆ.ಆರ್.ವಿನೂತ್, ಗಾಯತ್ರಿ, ಪಾರ್ವತಿ, ನಂದಿನಿ, ಬೇಬಿ ಜಾನ್, ರಾಮೇಗೌಡ, ಸುರೇಂದ್ರ, ವಿಜಯ ಲಕ್ಷ್ಮೀ ಇತರರು ಇದ್ದರು.