ನ್ಯೂಸ್

ವಿದ್ಯುನ್ಮಾನ ಮತಯಂತ್ರ ಜಾಗೃತಿ ಕಾರ್ಯಕ್ಕೆ ಚಾಲನೆ

ವಿದ್ಯುನ್ಮಾನ ಮತಯಂತ್ರದಲ್ಲಿ ಮತದಾನ ಮಾಡುವ ಕುರಿತು ಎಚ್.ಡಿ.ಕೋಟೆ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಮಂಗಳವಾರ ಜಾಗೃತಿ ಮೂಡಿಸುವ ಕಾರ್ಯಕ್ಕೆ ತಹಸೀಲ್ದಾರ್ ಪಿ.ಎಸ್.ಮಹೇಶ್ ಚಾಲನೆ ನೀಡಿದರು. ಜೆರಾಲ್ಡ್ ರಾಜೇಶ್, ಸಣ್ಣರಾಮಪ್ಪ, ಮಹೇಶ್ ಮತ್ತಿತರರಿದ್ದರು.

ಎಚ್.ಡಿ.ಕೋಟೆ: ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆ ಮತದಾರರಿಗೆ ವಿದ್ಯುನ್ಮಾನ ಮತಯಂತ್ರದ ಬಗೆಗೆ ಜಾಗೃತಿ ಮೂಡಿಸಲು ಮಂಗಳವಾರ ತಹಸೀಲ್ದಾರ್ ಪಿ.ಎಸ್. ಮಹೇಶ್ ಚಾಲನೆ ನೀಡಿದರು.

ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಚಾಲನೆ ನೀಡಿದ ತಹಸೀಲ್ದಾರ್, ಎಚ್.ಡಿ.ಕೋಟೆ ವಿಧಾನಸಭಾ ಕ್ಷೇತ್ರಗಳಲ್ಲಿ 282 ಮತಗಟ್ಟೆಗಳಿದ್ದು, 10 ಮತಗಟ್ಟೆಗೆ ಒಬ್ಬರು ಸೆಕ್ಟರ್ ಅಧಿಕಾರಿಯಂತೆ, 28 ಸೆಕ್ಟರ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ತಿಳಿಸಿದರು.

ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ವಿದ್ಯುನ್ಮಾನ ಮತಯಂತ್ರ ಹೇಗೆ ಕಾರ್ಯ ನಿರ್ವಹಿಲಿದೆ ಎಂಬುದು ಸೇರಿದಂತೆ ಬ್ಯಾಲೆಟ್ ಯೂನಿಟ್, ವಿವಿ ಫ್ಯಾಟ್, ಕಂಟ್ರೋಲ್ ಯೂನಿಟ್ಗಳ ಬಗ್ಗೆಯೂ ಮತದಾರರಿಗೆ ತಿಳಿಸಿ ಕೊಡಲಾಗುತ್ತದೆ ಎಂದರು.

ಮತದಾರರು ಯಾರಿಗೆ ಮತ ಚಲಾಯಿಸಿದ್ದಾರೆ ಎಂಬುದರ ಬಗ್ಗೆ ವಿವಿ ಫ್ಯಾಟ್‌ನಲ್ಲಿ ಅಭ್ಯರ್ಥಿ ಹೆಸರು, ಚಿಹ್ನೆ ಬಗ್ಗೆ ಖಾತರಿ ಪಡಿಸಿಕೊಳ್ಳಬಹುದು ಎಂದರು.
ಈ ಬಾರಿ ವಿಧಾನಸಭಾ ಕ್ಷೇತ್ರದಲ್ಲಿ ಶೇಕಡವಾರು ಮತದಾನವಾಗುವಂತೆ ಅಧಿಕಾರಿಗಳು ಹಾಗೂ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಜನರಿಗೆ ಜಾಗೃತಿ ಮೂಡಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ಇಒ ಜೆರಾಲ್ಡ್ ರಾಜೇಶ್, ಗ್ರೇಡ್ 2 ತಹಸೀಲ್ದಾರ್ ಸಣ್ಣರಾಮಪ್ಪ, ಉಪ ತಹಸೀಲ್ದಾರ್ ಮಹೇಶ್, ಕಂದಾಯ ಅಧಿಕಾರಿ ಮಹೇಶ್, ಸೆಕ್ಟರ್ ಅಧಿಕಾರಿಗಳಾದ ನಾರಾಯಣಸ್ವಾಮಿ, ರಾಮಸ್ವಾಮಿ, ರಾಮ ಪ್ರಸಾದ್, ರೇಣುಕಾ ಸ್ವಾಮಿ, ಬಸವರಾಜು, ಲಿಂಗರಾಜು, ಕುಮಾರ್, ತಸ್ಮೀಯಾ ಇದ್ದರು.