ನ್ಯೂಸ್

ವಿದ್ಯುತ್ ತಂತಿ ತಗುಲಿ‌ ಆನೆ‌‌ ಸಾವು

ಹನೂರು: ಕಾಡಂಚಿನ ಗ್ರಾಮದ ಜಮೀನಿನಲ್ಲಿ ಬೆಳೆದಿದ್ದ ಜೋಳ‌ದ ಬೆಳೆ ತಿನ್ನಲು ಬಂದ ಆನೆ ವಿದ್ಯುತ್ ತಂತಿ‌ ತಗುಲಿ ಹಸುನೀಗಿದೆ.ಮಲೆಮಹದೇಶ್ವರ ಹಾಗೂ ಕಾವೇರಿ ವನ್ಯಧಾಮದ ಅಂಚಿನಲ್ಲಿರುವ ತಾಲೂಕಿನ ಗುಳ್ಯ ಗ್ರಾಮದಲ್ಲಿ ಚಿಕ್ಕಮಲ್ಲಯ್ಯ ಎಂಬ ರೈತ ಬೆಳೆದಿದ್ದ ಜೋಳದ ಫಸಲಿನ ರಕ್ಷಣೆಗಾಗಿ ಜಮೀನಿನ ಸುತ್ತಲು ತಂತಿ ಅಳವಡಿಸಿದ್ದ.

ಸೋಮವಾರ ರಾತ್ರಿ‌ ಜೋಳದ ಬೆಳೆ ತಿನ್ನಲು ಜಮೀನಿಗೆ ಬಂದ ಸುಮಾರು ‌25 ವರ್ಷದ ಆನೆ ತಂತಿ ತಗುಲಿ ಮೃತಪಟ್ಟಿದೆ. ರೈತ ಚುಕ್ಕಿಮಲ್ಲಯ್ಯ ಪರಾರಿಯಾಗಿದ್ದಾನೆ.ಸ್ಥಳಕ್ಕೆ ಮಲೆ‌ಮಹದೇಶ್ವರ ವನ್ಯಜೀವಿ ಧಾಮದ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿ ಸೆರೆಗೆ ಬಲೆ‌ಬೀಸಿದ್ದಾರೆ.