ಮೈಸೂರು: ಜಿಲ್ಲೆ ಚಾಮರಾಜನಗರ ಯೋಜನೆ ವಿಭಾಗ, ಮೈಸೂರು ರವರ ವ್ಯಾಪ್ತಿಯಲ್ಲಿ ಎಲಮತ್ತೂರು ಗ್ರಾಮ, ಹೆಚ್.ಡಿ.ಕೋಟೆ ತಾಲ್ಲೂಕು, ಅಥವಾ ಸುತ್ತ ಮುತ್ತ ಇರುವ ಸ್ಥಳದಲ್ಲಿ 66/11 ಕೆ.ವಿ ವಿದ್ಯುತ್ ಉಪ-ಕೇಂದ್ರವನ್ನು ಸ್ಥಾಪಿಸಲು ಉದ್ದೇಶಿಸಿದ್ದು, ಈ ವಿದ್ಯುತ್ ಉಪ-ಕೇಂದ್ರಕ್ಕೆ ಕನಿಷ್ಠ 2 ಎಕರೆ ಜಮೀನು ಮುಖ್ಯ ರಸ್ತೆಗೆ ಹೊಂದಿಕೊoಡoತೆ ಜಮೀನನ್ನು ಭೂ ಮಾಲೀಕರುಗಳಿಂದ ನೇರವಾಗಿ ಸರ್ಕಾರವು ನಿಗದಿಪಡಿಸುವ ಬೆಲೆಯಲ್ಲಿ ಖರೀದಿ ಮಾಡಲು ಉದ್ದೇಶಿಸಲಾಗಿದೆ.
ಜಮೀನನ್ನು ಕ.ವಿ.ಪ್ರ.ನಿ.ನಿ ಗೆ ಮಾರಾಟ ಮಾಡಲು ಇಚ್ಚಿಸುವ ಭೂಮಾಲೀಕರು ಪ್ರೀತಮ್ ಎಮ್.ಎಮ್, ಕಾರ್ಯನಿರ್ವಾಹಕ ಇಂಜಿನಿಯರ್(ವಿ)-9448271524, ವಿನೋದ್ ಕುಮಾರ್ ಸಿಂಗ್, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿ)-9448365383, ಕಿರಣ್, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿ)-9480813912 ನ್ನು ಸಂಪರ್ಕಿಸಬಹುದು ಎಂದು ಹೆಚ್.ಡಿ.ಕೋಟೆ. ಚಾ.ವಿ.ಸ.ನಿ.ನಿ.,ಯ ಕಾರ್ಯ ಮತ್ತು ಪಾಲನೆ ಉಪವಿಭಾಗದ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್(ವಿ), ರವರಾದ ಚಂದು ಕುಮಾರ್.ಕೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.