ನ್ಯೂಸ್

ವಿದ್ಯಾವಂತರು ಮತದಾನ ಪ್ರಕ್ರಿಯೆಯಲ್ಲಿ ಎಲ್ಲಿಯ ತನಕ ಭಾಗವಹಿಸುವುದಿಲ್ಲವೋ ಅಲ್ಲಿಯ ತನಕ ದೇಶದಲ್ಲಿ ಭ್ರಷ್ಟ ಅಧಿಕಾರಿ ಮತ್ತು ರಾಜಕಾರಣಿಗಳು ಅಧಿಕಾರ ನಡೆಸುತ್ತಾರೆ / ನಿರಂಜನ ವಾನಳ್ಳಿ

ವಿಜಯವಾಣಿ ಸುದ್ದಿಜಾಲ ಕೋಲಾರ
ವಿದ್ಯಾವಂತರು ಸಾರ್ವತ್ರಿಕ ಮತದಾನದಲ್ಲಿ ಎಲ್ಲಿಯ ತನಕ ಭಾಗವಹಿಸುವುದಿಲ್ಲವೋ ಅಲ್ಲಿಯ ತನಕ ಈ ದೇಶದಲ್ಲಿ ಭ್ರಷ್ಟ ಅಧಿಕಾರಿಗಳು, ಭ್ರಷ್ಟ ರಾಜಕಾರಣಿಗಳು ರಾಜ್ಯದಲ್ಲಿ ಅಧಿಕಾರ ನಡೆಸುತ್ತಾರೆ ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ನಿರಂಜನ ವಾನಳ್ಳಿ ತಿಳಿಸಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಲಾಗಿದ್ದ ೨೦೨೩ ಮತ್ತು ೨೦೨೪ನೇ ಸಾಲಿನ ವಾರ್ಷಿಕ ಸಾಂಸ್ಕೃತಿಕ ಕ್ರೀಡಾ ಎನ್.ಎಸ್.ಎಸ್. ಮತ್ತು ಗೈಡ್ಸ್ ಯುವ ರೆಡ್ ಕ್ರಾಸ್ ಎನ್ ಸಿ ಸಿ ಚಟುವಟಿಕೆಗಳ ಸಮಾರೋಪ ಸಮಾರಂಭ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಭಾರತದಲ್ಲಿ ಮಾತ್ರ ಅತ್ಯಂತ ಕಡಿಮೆ ಹಣದಲ್ಲಿ ಬಡವರಿಗೆ ಶಿಕ್ಷಣ ದೊರೆಯುತ್ತಿದೆ. ಸರ್ಕಾರಿ ಕಾಲೇಜಿನಲ್ಲಿ ಪ್ರಾಧ್ಯಾಪಕರು ಪಾಠ ಮಾಡುವುದೇ ಅವರ ಕೆಲಸವಲ್ಲ. ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಅನ್ನದ ದಾರಿಯನ್ನ ಹುಡುಕಿ ಕೊಡುವ ಕೆಲಸ ಮಾಡಬೇಕು. ಕೇವಲ ನಾಲ್ಕು ಗೋಡೆ ಮಧ್ಯೆ ಮಾತ್ರ ವಿದ್ಯಾರ್ಥಿಗಳು ಆಲೋಚನೆ ಮಾಡದೆ ಆಚೆ ಕೂಡ ಸಮಾಜ ಇದೇ ಎಂಬುದನ್ನು ಮನಗಂಡು ತಮ್ಮ ತಂದೆ ತಾಯಿಗಳಿಗೆ ಕೀರ್ತಿ ತರಬೇಕೆಂದು ತಿಳಿಸಿದರು.

ಕಲಿತ ವಿದ್ಯೆ ತನಗೆ ಅಲ್ಲದೆ ತನ್ನ ಸುತ್ತಮುತ್ತಲಿನ ಮಂದಿಯನ್ನು ಸಹ ವೈಜ್ಞಾನಿಕ ಪ್ರಜ್ಞೆ ಮೂಡಿಸುವಲ್ಲಿ ಅವರಿಗೆ ಮಾರ್ಗದರ್ಶನ ಆಗುವಲ್ಲಿ ಮನವರಿಕೆ ಮಾಡಿಕೊಡಬೇಕು. ಗಂಡ ಬೇರುಂಡ ಪಕ್ಷಿ ವಿಶೇಷವಾಗಿ ಅದಕ್ಕೆ ಎರಡು ಕೊಕ್ಕಿರುತ್ತದೆ. ಆದರೆ ಆಹಾರ ಸೇರುವುದು ಒಂದೇ ದೇಹಕ್ಕೆ. ಹಾಗೆಯೇ ಭಾರತ ಕೂಡ ವಿವಿಧತೆಯಿಂದ ಕೂಡಿರುವ ಐಕ್ಯತೆಯ ಬಲಿಷ್ಠ ಭಾರತ ಕಟ್ಟಲು ಯುವ ಜನಾಂಗ ಅದರಲ್ಲೂ ವಿದ್ಯಾರ್ಥಿಗಳು ಮುಂದಾಗಬೇಕೆAದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಕೆ ಶ್ರೀನಿವಾಸಗೌಡ, ಸರ್ಕಾರಿ ಕಾಲೇಜುಗಳಲ್ಲಿ ಸಾಮಾನ್ಯವಾಗಿ ಎಲ್ಲ ಮಕ್ಕಳು ಬಡ ಮಧ್ಯಮದ ವರ್ಗದ ಕುಟುಂಬಗಳಿAದ ಬಂದಿರುವ ವಿದ್ಯಾರ್ಥಿಗಳು. ನಿಮ್ಮ ತಂದೆ ತಾಯಿಗಳಿಗೆ ಒಳ್ಳೆ ಕೀರ್ತಿಯನ್ನು ಮತ್ತು ನಿಮ್ಮ ಭವಿಷ್ಯತ್ತಿನ ಬಗ್ಗೆ ಸದಾ ಕಾಳಜಿ ವಹಿಸಿ, ಸಮಾಜದಲ್ಲಿ ಶಿಕ್ಷಣದಲ್ಲಿ ಪೈಪೋಟಿ ಹೆಚ್ಚು ಹೆಚ್ಚಾಗಿ ಇರುವುದರಿಂದ ಅದನ್ನು ಹೇಗೆ ಎದುರಿಸಬೇಕು ಎಂಬುವುದನ್ನು ಅರಿಯಬೇಕು ಎಂದರು.

ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

ಕಾರ್ಯಕ್ರಮದಲ್ಲಿ ಪ್ರಾಧ್ಯಪಕರಾದ ಡಾ. ರಾಮಕೃಷ್ಣ, ಡಾ. ಅನಂತಮೂರ್ತಿ, ಡಾ. ಶಂಕರಪ್ಪ, ಕೆ ವಿ ಸತೀಶ್, ಡಾ. ಮುರುಳಿಧರ್, ಎಸ್ ತ್ಯಾಗರಾಜ್ ಸಮಾಜಕಾರ್ಯ ಮುಖ್ಯಸ್ಥರಾದ ಮುರಳಿ, ಕಾಲೇಜಿನ ಮ್ಯಾನೇಜರ್ ಮಂಜುನಾಥ, ಪ್ರಸನ್ನ ಕುಮಾರಿ, ಪ್ರೊ. ಮಹೇಶ್, ಡಾ. ವಿಜಯ್, ಇತಿಹಾಸ ವಿಭಾಗದ ಮುನಿರಾಜು, ರತ್ನಪ್ರಭಾ ಮುಂತಾದವರು ಹಾಜರಿದ್ದರು.

ಚಿತ್ರ ೧೦ ಕೆ.ಎಲ್.ಆರ್. ೦೩ : ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ೨೦೨೩ ಮತ್ತು ೨೦೨೪ನೆ ಸಾಲಿನ ವಾರ್ಷಿಕ ಸಾಂಸ್ಕೃತಿಕ ಕ್ರೀಡಾ ಎನ್.ಎಸ್.ಎಸ್. ಮತ್ತು ಗೈಡ್ಸ್ ಯುವ ರೆಡ್ ಕ್ರಾಸ್ ಎನ್ ಸಿ ಸಿ ಚಟುವಟಿಕೆಗಳ ಸಮಾರೋಪ ಸಮಾರಂಭ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿದ ಬೆಂಗಳೂರು ಉತ್ತರ ವಿವಿ ಕುಲಪತಿ ನಿರಂಜನ ವಾನಳ್ಳಿ, ಪ್ರಾಂಶುಪಾಲ ಶ್ರೀನಿವಾಸಗೌಡ ಮುಂತಾದವರಿದ್ದರು.