ಬಾಳೆಹೊನ್ನೂರು: ಗಣರಾಜ್ಯೋತ್ಸವದ ಅಂಗವಾಗಿ ಇಲ್ಲಿನ ಜೆಸಿಐ ಬಾಳೆಹೊನ್ನೂರು ಕ್ಲಾಸಿಕ್ ಸಂಸ್ಥೆ, ವನಶ್ರೀಯಿಂದ ಒಂದು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ತಂಪು ಪಾನೀಯ ನೀಡುವ ಮೂಲಕ ವಿಶಿಷ್ಟವಾಗಿ ಗಣರಾಜ್ಯೋತ್ಸವ ಆಚರಿಸಲಾಯತು.
ಪಾನೀಯ ವಿತರಿಸಿದ ಬಳಿಕ ಉಪಯೋಗಿಸಿದ್ದ ಎಲ್ಲ ಲೋಟಗಳನ್ನು ಸಂಸ್ಥೆಯ ಸದಸ್ಯರು ಕ್ರೀಡಾಂಗಣದಲ್ಲಿ ಸ್ವಚ್ಛಗೊಳಿಸಿ ಸ್ವಚ್ಛ ಭಾರತ ಕುರಿತು ಜಾಗೃತಿ ಮೂಡಿಸಿದರು. ಜೇಸಿ ಸಂಸ್ಥೆಯು ಹಲವಾರು ವರ್ಷಗಳಿಂದ ಪ್ರತಿವರ್ಷವೂ ಸಹ ಸಾವಿರಾರು ವಿದ್ಯಾರ್ಥಿಗಳಿಗೆ ಪಾನೀಯ ವಿತರಿಸುತ್ತಿರುವುದು ಗಮನಾರ್ಹವಾಗಿದೆ. ಜೇಸಿ ಅಧ್ಯಕ್ಷ ಇಬ್ರಾಹಿಂ ಶಾಫಿ, ನಿಕಟಪೂರ್ವ ಅಧ್ಯಕ್ಷ ಎನ್.ಶಶಿಧರ್, ಕಾರ್ಯದರ್ಶಿ ವಿ.ಅಶೋಕ್, ಪೂರ್ವಾಧ್ಯಕ್ಷ ಚೈತನ್ಯ ವೆಂಕಿ, ಸುಧಾಕರ್, ಸುರೇಂದ್ರ ಮಾಸ್ತರ್, ಸದಸ್ಯರಾದ ದೀಪಕ್ ವನಶ್ರೀ, ಮಂಜು ಕೂಡಿಗೆ, ಶಾಹಿದ್, ರಂಜಿತ್, ಸಿ.ವಿ.ಸುನೀಲ್ ಮತ್ತಿತರರಿದ್ದರು.