ನ್ಯೂಸ್

ವಿದ್ಯಾರ್ಥಿ ಉದ್ಯೋಗ ಮಿತ್ರದಿಂದ ಜ್ಞಾನವೃದ್ಧಿ

ಅಥಣಿ ಗ್ರಾಮೀಣ: ವಿದ್ಯಾರ್ಥಿಗಳ ಶಿಕ್ಷಣ ಗುಣಮಟ್ಟ ಹೆಚ್ಚಿಸಲು ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರದಲ್ಲಿ ಎಲ್ಲ ವಿಷಯಗಳ ಜತೆಗೆ ಉನ್ನತ ವ್ಯಾಸಂಗ ಮತ್ತು ಉದ್ಯೋಗದ ಬಗ್ಗೆ ಸವಿಸ್ತಾರವಾದ ಮಾಹಿತಿ ನೀಡುತ್ತಿದೆ ಎಂದು ಹುಬ್ಬಳ್ಳಿ ಎಕ್ಷೀಡ್ ಕ್ರಾಪ್ ಸೈನ್ಸ್ ಪ್ರೈ.ಲಿ ಕಂಪನಿಯ ಅಥಣಿ ಏರಿಯಾ ವ್ಯವಸ್ಥಾಪಕ ಭಗವಂತ ಮೇತ್ರಿ ಹೇಳಿದರು.

ಅಥಣಿ ತಾಲೂಕಿನ ಕಟಗೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿಗಳಿಗೆ ಗುರುವಾರ ವಿಜಯವಾಣಿ ಪತ್ರಿಕೆಯ ವಿದ್ಯಾರ್ಥಿ ಉದ್ಯೋಗ ಮಿತ್ರ ಪತ್ರಿಕೆಗಳನ್ನು ವಿತರಿಸಿ ಅವರು ಮಾತನಾಡಿದರು. ಉದ್ಯೋಗ ಮಿತ್ರನನ್ನು ಪ್ರತಿಯೊಬ್ಬ ವಿದ್ಯಾರ್ಥಿಗೆ ತಲುಪಿಸುವ ಉದ್ದೇಶದಿಂದ ನಮ್ಮ ಕಂಪನಿಯಿಂದ ಹಳ್ಳಿಯಲ್ಲಿನ ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳ ಶಿಕ್ಷಣ ಗುಣಮಟ್ಟ ಹೆಚ್ಚಿಸಲು ಉಚಿತವಾಗಿ ಪತ್ರಿಕೆ ವಿತರಿಸಲಾಗುತ್ತಿದೆ ಎಂದರು.

ಪ್ರತಿಯೊಬ್ಬ ವಿದ್ಯಾರ್ಥಿ ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರದ ಸದುಪಯೋಗ ಪಡೆದು ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದು ಉನ್ನತ ಹುದ್ದೆ ಅಲಂಕರಿಸಬೇಕು ಎಂದು ತಿಳಿಸಿದರು. ಮುಖ್ಯ ಶಿಕ್ಷಕ ಎ.ಎಂ.ದೀಪಂಕರ ಮಾತನಾಡಿ, ಹಳ್ಳಿಯ ಮಕ್ಕಳ ಶಿಕ್ಷಣ ಗುಣಮಟ್ಟ ಹೆಚ್ಚಿಸಲು ಎಕ್ಷೀಡ್ ಕ್ರಾಪ್ ಸೈನ್ಸ್ ಪ್ರೈ.ಲಿ ಕಂಪನಿ ಅವರು ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರವನ್ನು ಉಚಿತವಾಗಿ ನೀಡುತ್ತಿರುವುದು ಶ್ಲಾಘನೀಯವಾದದ್ದು. ಇದೇ ತರಹ ದೊಡ್ಡ-ದೊಡ್ಡ ಕಂಪನಿಯವರು ಕಾರ್ಯಚಟುವಟಿಕೆ ಕೈಗೊಂಡು ಗ್ರಾಮೀಣ ಭಾಗದ ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕು ಎಂದರು. ವಿಜಯವಾಣಿ ಬೆಳಗಾವಿ ಆವೃತ್ತಿ ಪ್ರಸಾರಾಂಗ ವಿಭಾಗದ ವ್ಯವಸ್ಥಾಪಕ ರಘುವೀರ ಕುಲಕರ್ಣಿ, ಆರ್.ಆರ್.ಕಾಂಬಳೆ, ಡಿ.ಎಸ್.ಖಟ್ಟೆ, ಎಚ್.ಎಸ್.ಬಾಗೆನ್ನವರ, ಎಸ್.ಎಸ್.ನಿರಾಳೆ, ಯು.ಎಸ್.ಮೇಲಕೇರಿ, ಎನ್.ಡಿ.ಬಿರಾದಾರಪಾಟೀಲ, ವಿ.ಎಸ್.ವಣಜೋಳ ಇದ್ದರು.