ನ್ಯೂಸ್

ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆ ಬಹಿಷ್ಕಾರ

ಸಂಡೂರು: ಪಟ್ಟಣದ ತಹಸಿಲ್ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ವಾಲ್ಮೀಕಿ ಜಯಂತಿ ಪೂರ್ವಭಾವಿ ಸಭೆಯನ್ನು ಸಮುದಾಯದ ಪ್ರಮುಖರು ಮಂಗಳವಾರ ಬಹಿಷ್ಕರಿಸಿದರು.

ಬೆಳಗ್ಗೆ 10.30ಕ್ಕೆ ಸಭೆ ನಿಗದಿಯಾಗಿದ್ದು, ಒಂದು ತಾಸು ಮೇಲಾದರೂ ಅಧಿಕಾರಿಗಳು ಬರಲಿಲ್ಲ. ಇದರಿಂದ ಅಸಮಾಧಾನಗೊಂಡ ವಾಲ್ಮೀಕಿ ಸಮುದಾಯದ ಪ್ರಮುಖರು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ತಹಸೀಲ್ದಾರ್ ಡಿಸಿ ಅವರ ವೀಡಿಯೋ ಸಂವಾದದಲ್ಲಿ ಪಾಲ್ಗೊಂಡಿದ್ದು ಸೌಜನ್ಯಕ್ಕಾದರೂ ಸ್ವಲ್ಪ ತಡವಾಗಲಿದೆ ಎಂದು ಹೇಳಲಿಲ್ಲ. ಬೆಳಗ್ಗೆ 11.30ಕ್ಕೆ ಸಭೆ ಕರೆಯಬೇಕಾಗಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಸ್ಟಿ ಕಲ್ಯಾಣಾಧಿಕಾರಿ ರಂಗನಾಥ್, ವಾಲ್ಮೀಕಿ ಮಹಾಸಭಾ ತಾಲೂಕು ಅಧ್ಯಕ್ಷ ವದ್ದಟ್ಟಿ ಅಂಬರೀಷ್, ಉಪಾಧ್ಯಕ್ಷ ಎನ್.ಚಂದ್ರು, ಪ್ರಮುಖರಾದ ಡಿ.ಕೃಷ್ಣಪ್ಪ, ನವಲೂಟಿ ಜಯಣ್ಣ, ವಸಂತಕುಮಾರ್, ಗಂಡಿ ಮಾರೆಪ್ಪ, ಪರುಶರಾಮ್, ಷಾಮಿಯಾನ ಅಂಜಿನಪ್ಪ, ನಿಂಗಪ್ಪ, ವಿ.ಎಸ್.ಶಂಕರ್, ಆರ್.ಪಕ್ಕಿರಪ್ಪ, ಡಿ.ಪ್ರಹ್ಲಾದ, ಮೂರ್ತಿ, ಚೋರನೂರು ಯರ‌್ರಿಸ್ವಾಮಿ, ಅಡಿವಿಸ್ವಾಮಿ, ಮಹಿಳಾ ಘಟಕದ ಅಧ್ಯಕ್ಷೆ ಎನ್.ಪೂರ್ಣಿಮಾ ಇತರರಿದ್ದರು.