ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ  
ನ್ಯೂಸ್

ವಾರಾಣಸಿಯಲ್ಲಿ ಶೃಂಗೇರಿ ಶ್ರೀಗಳಿಂದ ಕುಂಭಾಭಿಷೇಕ

ಶೃಂಗೇರಿ: ಶೃಂಗೇರಿ ಶ್ರೀ ಶಾರದಾ ಪೀಠದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಅವರು ವಾರಾಣಸಿ ಮಹಾಕ್ಷೇತ್ರದಲ್ಲಿ ೆ.7ರಂದು ಶ್ರೀ ವಿಶ್ವನಾಥ ದೇವಾಲಯದ ಸಮೀಪದ ಭಗವತಿ ಶ್ರೀ ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ನೂತನ ಶಿಲಾಮೂರ್ತಿಯ ಪ್ರತಿಷ್ಠಾ ಮಹಾಕುಂಭಾಭಿಷೇಕ ಮತ್ತು ಶ್ರೀಮಠದಿಂದ ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರಿಗೆ ಸಮರ್ಪಿಸಿರುವ ಸ್ವರ್ಣಶಿಖರ ಗೋಪುರದ ಕುಂಭಾಭಿಷೇಕ ನೆರವೇರಿಸಲಿದ್ದಾರೆ.

ಇಂತಹ ಐತಿಹಾಸಿಕ ದಿನದಂದು ಆಸ್ತಿಕರು ತಮ್ಮ ಮನೆಗಳಲ್ಲಿ ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರ ಮೂರ್ತಿ ಅಥವಾ ಛಾಯಾಚಿತ್ರವನ್ನು ಇಟ್ಟು ದೀಪವನ್ನು ಪ್ರಜ್ವಲಿಸಿ ಶ್ರದ್ಧಾಭಕ್ತಿಯಿಂದ ಪೂಜಿಸಬೇಕು. ಜತೆಗೆ ಶ್ರೀ ಶಂಕರಾಚಾರ್ಯರಿಂದ ವಿರಚಿತಗೊಂಡ ಶ್ರೀ ಅನ್ನಪೂರ್ಣಾಷ್ಟಕ, ಶ್ರೀ ಸೌಂದರ್ಯ ಲಹರಿ, ಶ್ರೀ ಕಾಲಭೈರವಾಷ್ಟಕ, ಶ್ರೀ ಲಲಿತಾಸಹಸ್ರನಾಮ ಇತ್ಯಾದಿ ಸ್ತೋತ್ರಗಳನ್ನು ಪಠಿಸಿ ಶ್ರೀ ಅನ್ನಪೂರ್ಣೇಶ್ವರಿ ಹಾಗೂ ಶ್ರೀ ವಿಶ್ವನಾಥನ ಕೃಪೆಗೆ ಪಾತ್ರರಾಗಬೇಕೆಂದು ಜಗದ್ಗುರು ಶ್ರೀ ಭಾರತೀ ತೀರ್ಥ ಸ್ವಾಮೀಜಿ ಕರೆ ನೀಡಿದ್ದಾರೆ ಎಂದು ಆಡಳಿತಾಧಿಕಾರಿ ಪಿ.ಎ.ಮುರಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.