ನ್ಯೂಸ್

ವಾಯು ಮಾಲಿನ್ಯ ತಡೆಗೆ ಎಲೆಕ್ಟ್ರಿಕ್​ ವಾಹನ ಬಳಸಿ

ಜಾಥಾದಲ್ಲಿ ಬಿಬಿಎಂಪಿ ಆಯುಕ್ತ ಮಂಜುನಾಥ್​ ಪ್ರಸಾದ್​, ರಾಷ್ಟ್ರೀಯ ಬ್ಯಾಡ್ಮಿಂಟನ್​ ಕ್ರೀಡಾಪಟು ಅವಂತಿಕಾ, ಸಾರಿಗೆ ಇಲಾಖೆ ಆಯುಕ್ತ ಶಿವಕುಮಾರ್​ ಇನ್ನಿತರರಿದ್ದರು.

ಚಿತ್ರ ನಿರ್ದೇಶಕ ಜೋಗಿ ಪ್ರೇಮ್​ ಮಾತನಾಡಿ, ಬೆಂಗಳೂರಿನ ನಿವಾಸಿಗಳು ಕಾರು, ಬೈಕ್​, ಬಸ್ಸುಗಳಿಗೆ ಪರ್ಯಾಯವಾಗಿ ಹೆಚ್ಚಿನ ಪ್ರಮಾಣದಲ್ಲಿ ಸೈಕಲ್​ ಬಳಕೆ ಮಾಡಿದರೆ ದೇಹದ ಆರೋಗ್ಯದ ಜತೆಗೆ, ಪರಿಸರ ಸಂರಕ್ಷಣೆಯಾಗುತ್ತದೆ. ನಗರದಲ್ಲಿ ಹೆಚ್ಚಾಗಿ ಗಿಡಗಳನ್ನು ನೆಡುವ ಕೆಲಸವಾದರೆ, ವಾಯುಮಾಲಿನ್ಯ ಪ್ರಮಾಣ ಕಡಿಮೆಯಾಗಲಿದೆ ಎಂದು ಹೇಳಿದರು.

ದೆಹಲಿಯ ಮಾಲಿನ್ಯ ಪ್ರಮಾಣವು ಅಲ್ಲಿನ ಜನರ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವಂತಾಗಿದೆ. ಬೆಂಗಳೂರಿನಲ್ಲಿ ಆ ಪರಿಸ್ಥಿತಿ ಉಂಟಾಗದಂತೆ ಮಾಡಲು ವಾಯುಮಾಲಿನ್ಯ ನಿಯಂತ್ರಣಕ್ಕೆ ಎಲ್ಲ ಇಲಾಖೆಯ ಅಧಿಕಾರಿಗಳು ಒಟ್ಟಾಗಿ ಕೆಲಸ ಮಾಡಬೇಕು. ಬಿಎಂಟಿಸಿ, ಕೆಎಸ್ಸಾಟಿರ್ಸಿಗಳಿಗೆ ಎಲೆಕ್ಟ್ರಿಕ್​ ಬಸ್​ಗಳನ್ನು ಸೇರ್ಪಡೆ ಮಾಡಲಾಗುತ್ತಿದೆ. ಅದಕ್ಕೆ ಬೇಕಾದ ಪ್ರಕ್ರಿಯೆಗೆ ಈಗಾಗಲೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ಶೇ. 42 ಮಾಲಿನ್ಯ ವಾಹನಗಳು ಹೊರಸೂಸುವ ಹೊಗೆಯಿಂದ ಉಂಟಾಗುತ್ತಿದೆ. ಈ ಬಗ್ಗೆ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಯನವನ್ನೂ ಮಾಡಿದೆ. ಮಾಲಿನ್ಯದಿಂದ ಅಸ್ತಮಾ, ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತಿವೆ. ಹೀಗಾಗಿ ಜನರು ಪೆಟ್ರೋಲಿಯಂ ಉತ್ಪನ್ನಗಳಿಂದ ಸಂಚರಿಸುವ ವಾಹನಗಳ ಬದಲಿಗೆ ವಿದ್ಯುತ್​ ಚಾಲಿತ ವಾಹನಗಳನ್ನು ಬಳಸಬೇಕು ಎಂದರು.

ವಾಯುಮಾಲಿನ್ಯ ತಡೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಬುಧವಾರ ಸಾರಿಗೆ ಇಲಾಖೆ ವತಿಯಿಂದ ಕಂಠೀರವ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ "ಹೊಗೆ ರಹಿತ ವಾಹನ ಸುಖೀ ಕುಟುಂಬದ ಜೀವನ' ಹೆಸರಿನ ಕಾಲ್ನಡಿಗೆ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಬೆಂಗಳೂರು: ವಾಯುಮಾಲಿನ್ಯ ತಡೆಗೆ ಜನರು ಪೆಟ್ರೋಲ್​, ಡೀಸೆಲ್​ ಮೂಲಕ ಚಲಾಯಿಸುವ ವಾಹನಗಳ ಬದಲು ವಿದ್ಯುತ್​ ಚಾಲಿತ ವಾಹನಗಳನ್ನು ಹೆಚ್ಚಾಗಿ ಬಳಸಬೇಕು ಎಂದು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.