ರಿಪ್ಪನ್‌ಪೇಟೆ ವಿನಾಯಕ ವೃತ್ತದಲ್ಲಿ ಸಹಿ ಸಂಗ್ರಹ ಅಭಿಯಾನ ಕಾರ್ಯಕ್ರಮದಲ್ಲಿ ಶ್ವೇತಾ ಬಂಡಿ ಮಾತನಾಡಿದರು. ಬಿ.ಜಿ.ಚಂದ್ರಮೌಳಿ, ಗಣಪತಿ, ಧನಲಕ್ಷ್ಮೀ, ಬಂಡಿ ರಾಮಚಂದ್ರ, ಈಶ್ವರಪ್ಪಗೌಡ ಇತರರಿದ್ದರು.  
ನ್ಯೂಸ್

ವಾಮಮಾರ್ಗ ಬಿಜೆಪಿ ಅಧಿಕಾರ

ರಿಪ್ಪನ್‌ಪೇಟೆ: ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಂಬಿಕೆಯಿಲ್ಲದ ಬಿಜೆಪಿ ವಾಮಮಾರ್ಗದಿಂದಲೇ ತನ್ನ ಅಧಿಕಾರ ದಾಹವನ್ನು ತೀರಿಸಿಕೊಳ್ಳುತ್ತಿದೆ ಎಂದು ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಶ್ವೇತಾ ಬಂಡಿ ಆರೋಪಿಸಿದರು.

ಪಟ್ಟಣದ ವಿನಾಯಕ ವೃತ್ತದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಓಟ್ ಚೋರಿ, ಗದ್ದಿ ಚೋಡ್ ಸಹಿ ಸಂಗ್ರಹ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿ, ರಾಷ್ಟ್ರದ ಸಂವಿಧಾನವನ್ನು ಗೌರವಿಸದ ಬಿಜೆಪಿ ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡಿಕೊಂಡು ಮತಗಳ್ಳತನದಲ್ಲಿ ನಿರತವಾಗಿದೆ. ಮತದಾರರ ಪಟ್ಟಿಗಳಲ್ಲಿ ಅಕ್ರಮ ಹೆಸರುಗಳನ್ನು ಸೇರಿಸಿ ಗೆಲುವು ಸಾಧಿಸಿ ಪ್ರಜಾಪ್ರಭುತ್ವವನ್ನು ಅವಮಾನಿಸಿದೆ. ಇವರ ಸರ್ವಾಧಿಕಾರಿ ವರ್ತನೆಯನ್ನು ತಡೆಯದಿದ್ದರೆ ದೇಶ ಬಹುದೊಡ್ಡ ಗಂಡಾಂತರವನ್ನು ಎದುರಿಸಲಿದೆ ಎಂದರು.

ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ಚಂದ್ರಮೌಳಿ, ಸ್ಥಳೀಯ ಬ್ಲಾಕ್ ಅಧ್ಯಕ್ಷ ಗಣಪತಿ, ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮೀ, ಜಿಪಂ ಮಾಜಿ ಸದಸ್ಯ ಬಂಡಿ ರಾಮಚಂದ್ರ, ಈಶ್ವರಪ್ಪಗೌಡ, ಮಧುಸೂದನ, ಉಬೇದುಲ್ಲಾ ಶರ್ೀ, ಸಾಕಮ್ಮ ಹರತಾಳು, ಪ್ರಕಾಶ್ ಪಾಲೇಕರ್, ಆಸ್ೀ, ಮಹೇಂದ್ರ ಬುಕ್ಕಿವರೆ, ನಿರುಪಮಾ, ವಾಣಿ ಇತರರಿದ್ದರು