ನ್ಯೂಸ್

ವಾಂತಿ-ಭೇದಿ ಪ್ರಕರಣ;ರೋಗಿಗಳ ಆರೋಗ್ಯ ವಿಚಾರಿಸಿದ ಸಚಿವ ದರ್ಶನಾಪುರ

ಯಾದಗಿರಿ: ಕಲುಷಿತ ನೀರು ಸೇವನೆಯಿಂದ ವಾಂತಿ-ಭೇದಿಯಾಗಿ ಸುಮಾರು 40 ಜನ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ ಘಟನೆ ಗುರಮಠಕಲ್ ತಾಲೂಕಿನ ಇಮ್ಲಾಪುರ ಗ್ರಾಮದಲ್ಲಿ ನಡೆದಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಆರೋಗ್ಯವನ್ನು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಬುಧವಾರ ವಿಚಾರಿಸಿದರು.

ಶನಿವಾರದಿಂದ ಗ್ರಾಮದಲ್ಲಿರುವ ಜನರ ಆರೋಗ್ಯದಲ್ಲಿ ಏರುಪೇರಾಗಿದ್ದು, ಮಂಗಳವಾರ ಇದ್ದಕ್ಕಿದ್ದಂತೆ ಉಲ್ಬಣಗೊಂಡಿತ್ತು. ಗುರಮಠಕಲ್ ಮತ್ತು ಯಾದಗಿರಿಯಲ್ಲಿ ಹಲವರು ಚಿಕಿತ್ಸೆಗೆ ದಾಖಲಿಸಲಾಗಿದೆ.

ಸುದ್ದಿಗಾರರೊಡನೆ ಮಾತನಾಡಿದ ಸಚಿವ ದರ್ಶನಾಪುರ, ಘಟನೆ ಕುರಿತು ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅಲ್ಲದೆ, ಗ್ರಾಮಕ್ಕೆ‌ ನಾನೇ ಖುದ್ದಾಗಿ ಭೇಡುತ್ತಿದ್ದೇನೆ ಎಂದರು.