ಡಿಪಿಎನ್ ಶ್ರೇಷ್ಠಿ,ಚಿತ್ರದುರ್ಗ
ಮಹಾತ್ಮಗಾಂಧಿ ನರೇಗಾ ಯೋಜನೆ ಪರಿಣಾಮಕಾರಿ ಅನುಷ್ಠಾನದೊಂದಿಗೆ ಗ್ರಾಮೀಣ ಜನರು ನಗರ ಪ್ರದೇಶಗಳಿಗೆ ವಲಸೆ ನಿಯಂತ್ರಿಸಲು ಗ್ರಾಮೀಣಾವೃದ್ಧಿ ಮತ್ತು ಪಂ.ರಾಜ್ ಇಲಾಖೆ‘ದುಡಿಯೋಣ ಬಾ’ಅಭಿಯಾನವನ್ನು ಮೇ 1ರಿಂದ ರಾಜ್ಯಾದ್ಯಂತ ಎಲ್ಲ ಗ್ರಾಪಂ ಗಳಲ್ಲಿ ಹಮ್ಮಿಕೊಳ್ಳಲಾಗಿದೆ.
ಬೇಸಿಗೆ ಈ ಸಂದರ್ಭದಲ್ಲಿ ಜಿಲ್ಲೆಗಳಲ್ಲಿ ಸ್ಥಳೀಯ ಕೂಲಿಕಾರರಿಗೆ ಅಕುಶಲ ಕೆಲಸ ಒದಗಿಸಲು ಕಳೆದ ಏಪ್ರಿಲ್ ಒಂದರಿಂದ ಜಿಲ್ಲೆಗಳಲ್ಲಿ ಹಲವು ಕಾರ‌್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದರೂ ಜನರು ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿರುವ ಪ್ರಕರಣಗಳ ಮರುಕಳಿಸುತ್ತಿ ರುವುದರಿಂದ ಆತಂಕಗೊಂಡಿರುವ ಇಲಾಖೆ,ವಲಸೆ ತಡೆಗಾಗಿ ಗ್ರಾಮೀಣರಲ್ಲಿ ಜಾಗೃತಿ ಮೂಡಿಸುವ ಮೂಲಕ ನರೇಗಾದಡಿ ನಿರಂತರ ಕೆಲಸವೊದಗಿಸುವ ಗುರಿಯೊಂದಿಗೆ ಒಂದು ತಿಂಗಳ ಕಾಲ ಈ ಅಭಿಯಾನವನ್ನು ಹಮ್ಮಿಕೊಂಡಿದೆ.
ನರೇಗಾ ಯೋಜನೆಯಡಿ ಒಳಗೊಳ್ಳದ ಕುಟುಂಬಗಳನ್ನು ಗುರುತಿಸಿ ಅಕುಶಲ ಕೆಲಸಕ್ಕೆ ನೋಂದಾಯಿಸುವುದು. ನೋಂದಾಯಿಸಿದ ಕೂಲಿಕಾರರಿಗೆ ಕೆಲಸ ಒದಗಿಸಿ ವಲಸೆ ಪ್ರವೃತ್ತಿ ತಗ್ಗಿಸುವುದು. ದುರ್ಬಲ ವರ್ಗದ ಕುಟುಂಬಗಳು,ಅಂಗವಿಕಲರು,ಮಹಿಳೆಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರು ಭಾಗವಹಿಸುವಿಕೆಯನ್ನು ಹೆಚ್ಚಿಸುವುದು.
ಜನ ಜಾಗೃತಿಗಾಗಿ ಪರಿಣಾಮಕಾರಿಯಾಗಿ ಐಇಸಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು. ಅಗತ್ಯ ಪರಿಕರಗಳನ್ನು ಜಿಪಂ,ತಾಪಂ ಗ ಳಿಂದ ಒದಗಿಸುವಂತೆ ಇಲಾಖೆ ಆಯುಕ್ತರು,ಎಲ್ಲ ಜಿಪಂ ಸಿಇಒಗಳಿಗೆ ನಿರ್ದೇಶಿಸಿದ್ದಾರೆ. ಗ್ರಾಪಂಮಟ್ಟದಲ್ಲಿ ಉದ್ಯೋಗ ಚೀಟಿ ಮತ್ತು ಅಕುಶಲ ಕೆಲಸಕ್ಕಾಗಿ ಬೇಡಿಕೆ ಸ್ವೀಕರಿಸಲು ತಂಡಗಳನ್ನು ರಚಿಸುವುದರೊಂದಿಗೆ,ಈ ತಂಡಗಳು ಮನೆ,ಮನೆಗೆ ಭೇಟಿ ನೀಡಬೇಕು. ರೋ ಜ್ಗಾರ್ ದಿನವನ್ನು ಆಚರಿಸಬೇಕು.
ಕೆಲಸಕ್ಕೆ ಬೇಡಿಕೆ ಸಲ್ಲಿಸಿದ ಕೂಲಿಕಾರರಿಗೆ ನಿರಂತರ ಕೆಲಸ ಒದಗಿಸುವುದು,ಬೇಡಿಕೆ ಸಲ್ಲಿಸಿದ ಎಲ್ಲ ಕೆಲಸಗಾರರಿಗೆ ವಿಶೇಷವಾಗಿ ಮಹಿಳೆ ಯರಿಗೆ ಕೆಲಸ ಒದಗಿಸಲು ಅಗತ್ಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳ ಬೇಕಿದೆ. ಕೂಲಿಕಾರರಿಗೆ ನಿರಂತರವಾಗಿ ಕೆಲಸ ಒದಗಿಸುತ್ತಿರುವ ಕುರಿತ ಂತೆ ನಿತ್ಯ ತಾಲೂಕು ಮಟ್ಟದ ಮೇಲ್ವಿಚಾರಣೆಗೆ ಹಾಗೂ ಜಿಲ್ಲಾಮಟ್ಟದಲ್ಲಿ ವಾರಕ್ಕೆ ಒಮ್ಮೆ ಪ್ರಗತಿ ಪರಿಶೀಲನೆಯನ್ನು ಅಧಿಕಾರಿಗಳು ಮಾಡ ಬೇಕಿದೆ. ಅಭಿಯಾನ ಯಶಸ್ಸಿಗೆ ಹಾಗೂ ನಿರಂತರ ಕೆಲಸ ಒದಗಿಸಲು ವಹಿಸಿರುವ ವಿಶೇಷ ಕಾಳಜಿ,ಕಾರ‌್ಯತಂತ್ರ ರೂಪಿಸಿರುವ ಕುರಿತಂತೆ ತಾಲೂಕುಗಳಿಂದ ರಾಜ್ಯಮಟ್ಟದಲ್ಲಿ ನಡೆಯು ವ ವಿಡಿಯೊ ಸಂವಾದದಲ್ಲಿ‘ಬೆಸ್ಟ್ ಪ್ರಾಕ್ಟಿಸ್’ಪ್ರಸ್ತುತ ಪಡಿಸಲು ಇಲಾಖೆ ಅವಕಾಶ ಕಲ್ಪಿಸಿದೆ.
1.80 ಕೋಟಿ ಜನರ ನೋಂದಣಿ
ಕಳೆದ ಮಾರ್ಚ್ ಅಂತ್ಯಕ್ಕೆ ರಾಜ್ಯದಲ್ಲಿ ನರೇಗಾದಡಿ 18088793 ಕೂಲಿಕಾರರು ನೋಂದಾಯಿಸಿಕೊಂಡಿದ್ದಾರೆ.ಇವರಲ್ಲಿ 7348172 ಜನರನ್ನು ಆಕ್ಟಿವ್ ವರ್ಕರೆಂದು ಗುರುತಿಸಲಾಗಿದೆ. ನೋಂದಾಯಿತ ಒಟ್ಟು ಕೂಲಿ ಕಾರ್ಮಿಕರಲ್ಲಿ 8940023 ಮಹಿಳೆಯರು ಇದ್ದಾರೆ. ನರೇಗಾದಡಿ ಚಿತ್ರದುರ್ಗ ಜಿಲ್ಲೆಯಲ್ಲಿ ನೋಂದಾಯಿತ 783481 ಜನರಿದ್ದಾರೆ. ಇವರಲ್ಲಿ ಮಹಿಳೆಯರ ಸಂಖ್ಯೆ(381632)ಅಧಿಕವಿದೆ.
---
ಕೋಟ್
ನರೇಗಾದಡಿ ಪ್ರಸಕ್ತ ವರ್ಷದಿಂದ ಯೋಜನೆ ಕೂಲಿಯನ್ನು 370 ರೂ.ಗೆ ಹೆಚ್ಚಿಸಲಾಗಿದೆ. ಗ್ರಾಮೀಣರ ವಲಸೆ ನಿಯಂತ್ರಣಕ್ಕಾಗಿ ದುಡಿಯೋಣ ಬಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಸ್ಥಳೀಯವಾಗಿ ಆಯಾ ಗ್ರಾಪಂಗಳು ಅಗತ್ಯ ಕಾಮಗಾರಿಗಳನ್ನು ಕೈಗೊಂಡು ಜನರಿಗೆ ಕೆಲಸ ಕೊಡಬೇಕಿದೆ.
ಎಸ್.ಜೆ.ಸೋಮಶೇಖರ್,ಸಿಇಒ,ಜಿಪಂ,ಚಿತ್ರದುರ್ಗ.
---