ಎನ್.ಆರ್.ಪುರ ವರ್ತಕರ ಸಂಘದಿಂದ ಪಪಂ ಅಧ್ಯಕ್ಷೆ ಜುಬೇದಾಗೆ ಮನವಿ ಸಲ್ಲಿಸಲಾಯಿತು. ಎಸ್.ಎಸ್.ಜಗದೀಶ್, ಎನ್.ಆರ್.ಸತ್ಯನಾರಾಯಣ ಶ್ರೇಷ್ಠಿ, ವಾಸಪ್ಪಗೌಡ, ನವೀದ್ ಹುಸೇನ್, ಶ್ರೀನಿವಾಸ್, ಟಿ.ಎಂ.ನಾಗರಾಜ್, ಚಂದ್ರಯ್ಯಶಾಸಿ ಇದ್ದರು. 
ನ್ಯೂಸ್

ವರ್ತಕರ ಭವನ ನಿರ್ಮಿಸಲು ನಿವೇಶನ ನೀಡಿ

ಎನ್.ಆರ್.ಪುರ: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ವರ್ತಕರ ಭವನ ನಿರ್ಮಿಸಲು ನಿವೇಶನ ನೀಡುವಂತೆ ಪಪಂ ಅಧ್ಯಕ್ಷೆ ಜುಬೇದಾ ಅವರಿಗೆ ವರ್ತಕರ ಸಂಘದಿಂದ ಮನವಿ ನೀಡಲಾಯಿತು.

ವರ್ತಕರ ಸಂಘದ ಎಸ್.ಎಸ್.ಜಗದೀಶ್ ಮಾತನಾಡಿ, ಎನ್.ಆರ್.ಪುರ ವರ್ತಕರ ಸಂಘ 1988ರಲ್ಲಿ ಸ್ಥಾಪನೆಗೊಂಡಿದ್ದು 37 ವಷರ್ದಿಂದ ಪಟ್ಟಣದಲ್ಲಿ ಹಲವು ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತ ಬಂದಿದ್ದೇವೆ. ಸಂಘದಲ್ಲಿ ಸಣ್ಣ ವ್ಯಾಪಾರಸ್ಥರಿಂದ ಹಿಡಿದು ವಿವಿಧ ಧರ್ಮದ ವರ್ತಕರು ಸೇರಿ 92 ಸದಸ್ಯರಿದ್ದೇವೆ. ಇಷ್ಟು ವರ್ಷವಾದರೂ ಸಂಘಕ್ಕೆ ಸ್ವಂತ ಕಚೇರಿ ಇರುವುದಿಲ್ಲ ಎಂದು ಹೇಳಿದರು.

ಸಭೆ, ಸಮಾರಂಭ ಮಾಡಲು ಬಾಡಿಗೆ ಕಟ್ಟಡ ಅವಲಂಬನೆ ಮಾಡಬೇಕಾಗಿದೆ. ಆದ್ದರಿಂದ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನಿವೇಶನ ನೀಡಿದರೆ ವರ್ತಕರ ಸಂಘಕ್ಕೆ ಅನುಕೂಲವಾಗಲಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ವರ್ತಕರ ಸಂಘದ ಗೌರವಾಧ್ಯಕ್ಷ ಎನ್.ಆರ್.ಸತ್ಯನಾರಾಯಣ ಶ್ರೇಷ್ಠಿ, ಖಜಾಂಚಿ ವಾಸಪ್ಪಗೌಡ, ಸಹ ಕಾರ್ಯದರ್ಶಿ ನವೀದ್ ಹುಸೇನ್, ನಿರ್ದೇಶಕರಾದ ಶ್ರೀನಿವಾಸ್, ಟಿ.ಎಂ.ನಾಗರಾಜ್, ನರೇಶ್ ವಿ.ಲಾಡ್, ಟಿ.ಎಂ.ನಾಗರಾಜ್, ಚಂದ್ರಯ್ಯ ಶಾಸ್ತ್ರಿ ಇದ್ದರು.