ನವದೆಹಲಿ: ದೆಹಲಿಯಲ್ಲಿ ವಾಯುಮಾಲಿನ್ಯ ನಿಯಂತ್ರಣ ಮಾರ್ಗಗಳನ್ನು ರ್ಚಚಿಸಲು ಸುಪ್ರೀಂಕೋರ್ಟ್ ನೀಡಿದ್ದ ಸೂಚನೆ ಮೇರೆಗೆ ಮಂಗಳವಾರ ನಡೆದ ಮಹತ್ವದ ಸಭೆಯೊಂದರಲ್ಲಿ ಸರ್ಕಾರಿ ಮತ್ತು ಖಾಸಗಿ ಕಚೇರಿಗಳ ನೌಕರರು ಮನೆಯಿಂದಲೇ ಕೆಲಸ ಮಾಡುವ (ಡಬ್ಲ್ಯುಎಚ್ಎಫ್) ಅವಕಾಶವನ್ನು ಕಲ್ಪಿಸು ವಂತೆ ದೆಹಲಿ ಸರ್ಕಾರ ಸಲಹೆ ಮಾಡಿದೆ. ವಾರಾಂತ್ಯ ಲಾಕ್ಡೌನ್ ಹೇರುವ ಪ್ರಸ್ತಾಪವನ್ನೂ ಅದು ಮುಂದಿಟ್ಟಿದೆ. ಕೇಂದ್ರ ಸರ್ಕಾರದ ಪ್ರತಿನಿಧಿಗಳಲ್ಲದೆ ದೆಹಲಿ, ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶ ರಾಜ್ಯಗಳ ಸಚಿವರು ಹಾಗೂ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಡಬ್ಲ್ಯುಎಚ್ಎಫ್ ನಿಯಮವನ್ನು ಸಂಪೂರ್ಣ ರಾಷ್ಟ್ರ ರಾಜಧಾನಿ ವಲಯದಲ್ಲಿ (ಎನ್ಸಿಆರ್) ಅನುಷ್ಠಾನಗೊಳಿಸಬೇಕು ಎಂದು ದೆಹಲಿಯ ಪರಿಸರ ಸಚಿವ ಗೋಪಾಲ್ ರಾಯ್ ಹೇಳಿದರು.
ಎನ್ಸಿಆರ್ನಲ್ಲಿ ನಿರ್ಮಾಣ ಕಾಮಗಾರಿಗಳನ್ನು ನಿಷೇಧಿಸಬೇಕು ಹಾಗೂ ಕೈಗಾರಿಕೆಗಳನ್ನು ಮುಚ್ಚಬೇಕು ಎಂಬ ಸಲಹೆಯನ್ನೂ ದೆಹಲಿ ಮಂಡಿಸಿದೆ. ‘ಲಾಕ್ಡೌನ್ಗೆ ನಾವು ಸಿದ್ಧ. ಆದರೆ, ಸುಪ್ರೀಂಕೋರ್ಟ್ ಮಾರ್ಗದರ್ಶನದನ್ವಯ ಲಾಕ್ಡೌನ್ ಜಾರಿ ಮಾಡುವುದು ಉತ್ತಮ’ ಎಂದು ರಾಯ್ ಅಭಿಪ್ರಾಯಪಟ್ಟರು.
ಪೂಜಾ ಕೈಂಕರ್ಯದಲ್ಲಿ ಹಸ್ತಕ್ಷೇಪ ಸಲ್ಲ: ಯಾವುದೇ ಒಂದು ದೇವಸ್ಥಾನದ ದೈನಿಕ ವ್ಯವಹಾರಗಳಲ್ಲಿ ಸಾಂವಿಧಾನಿಕ ಕೋರ್ಟ್ ಮಧ್ಯಪ್ರವೇಶ ಮಾಡಲಾಗದು ಎಂದು ಸುಪ್ರೀಂಕೋರ್ಟ್ ಮಂಗಳವಾರ ಸ್ಪಷ್ಟಪಡಿಸಿದೆ. ದೇವಸ್ಥಾನದ ಆಡಳಿತ ಮಂಡಳಿ ಬೇಕಾಬಿಟ್ಟಿಯಾಗಿ ವರ್ತಿಸಬಹುದು ಎಂಬುದು ಸುಪ್ರೀಂಕೋರ್ಟ್ ಅಭಿಪ್ರಾಯವಲ್ಲ. ಅರ್ಜಿದಾರರಿಗೆ ಎಂಟು ವಾರದೊಳಗೆ ಸೂಕ್ತ ವಿವರಣೆ ನೀಡಬೇಕೆಂದು ಸಿಜೆಐ ಎನ್.ವಿ. ರಮಣ ನೇತೃತ್ವದ ಪೀಠ ಟಿಟಿಡಿಗೆ ಸೂಚಿಸಿದೆ. ತಿರುಮಲ ತಿರುಪತಿ ದೇವಸ್ಥಾನದಲ್ಲಿ ‘ತಪು್ಪ ಹಾಗೂ ಅನಿಯಮಿತ ಆಚರಣೆಗಳನ್ನು ಅನುಸರಿಸಲಾಗುತ್ತಿದೆ’ ಎಂದು ಆರೋಪಿಸಿ ಭಕ್ತರೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಇತ್ಯರ್ಥಪಡಿಸುವ ಸಂದರ್ಭದಲ್ಲಿ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಆಂಧ್ರ ಪ್ರದೇಶ ಹೈಕೋರ್ಟ್ ನೀಡಿದ್ದ ತೀರ್ಪು ಪ್ರಶ್ನಿಸಿ ಅರ್ಜಿದಾರ ಸುಪ್ರೀಂಕೋಟ್ ಮೊರೆ ಹೋಗಿದ್ದರು. ಬಿಐ ಮತ್ತು ಜಾರಿ ನಿರ್ದೇಶನಾಯಲದ ಮುಖಸ್ಥರ ಸೇವಾ ಅವಧಿಯನ್ನು 5 ವರ್ಷಕ್ಕೆ ಹೆಚ್ಚಿಸುವ ಸುಗ್ರೀವಾಜ್ಞೆ ಪ್ರಶ್ನಿಸಿ ವಕೀಲ ಎಂ.ಎಲ್. ಶರ್ಮಾ ಸುಪ್ರೀಂಕೋರ್ಟ್ಗೆ ಪಿಐಎಲ್ ಸಲ್ಲಿಸಿದ್ದಾರೆ.
ಹಸಿವಿನಿಂದ ಸಾವು ತಡೆಗೆ ಯೋಜನೆ ರೂಪಿಸಿ: ಹಸಿವಿನಿಂದ ಜನರು ಸಾಯುತ್ತಿದ್ದಾರೆ ಎಂದು ಮಂಗಳವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ಹಸಿವು ನಿವಾರಣೆಗೆ ಸೂಕ್ತ ಯೋಜನೆ ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದೆ. ಜನರು ಹಸಿವಿನಿಂದ ಸಾಯುವುದು ಹಾಗೂ ಅಪೌಷ್ಟಿಕತೆ ಬೇರೆ ಬೇರೆ ವಿಚಾರಗಳು. ಅವೆರಡನ್ನು ಬೆರೆಸಬೇಡಿ ಎಂದು ಕೇಂದ್ರಕ್ಕೆ ತಾಕೀತು ಮಾಡಿದೆ. ಹಸಿವು ಮತ್ತು ಅಪೌಷ್ಟಿಕತೆಯನ್ನು ನಿಭಾಯಿಸಲು ದೇಶದಾದ್ಯಂತ ಸಾಮೂಹಿಕ ಅಡುಗೆಮನೆಗಳನ್ನು ಸ್ಥಾಪಿಸಲು ನಿರ್ದೇಶನ ಕೋರಿದ ಅರ್ಜಿ ವಿಚಾರಣೆ ನಡೆಸಿದ ಪೀಠ, ರಾಜ್ಯಗಳೊಂದಿಗೆ ಸಮಾಲೋಚಿಸಿ ಸೂಕ್ತ ಯೋಜನೆ ರೂಪಿಸಲು ಸೂಚಿಸಿದೆ.