ನ್ಯೂಸ್

ವಾಟ್ಸ್‌ಆ್ಯಪ್ ಚಾನಲ್ ತೆರೆದ ನಗರ ಪೊಲೀಸರು


ಬೆಂಗಳೂರು: ನಗರ ಸಂಚಾರ ದಟ್ಟಣೆ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಹಾಗೂ ಅಪರಾಧ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಮುಖ್ಯ. ಈ ನಿಟ್ಟನಲ್ಲಿ ನಗರ ಪೊಲೀಸ್ ಇಲಾಖೆ ನೂತನವಾಗಿ ವಾಟ್ಸ್‌ಆ್ಯಪ್ ಚಾನಲ್ ತೆರೆದಿದೆ. ಇದರಿಂದ ನಗರದ ನಾಗಕರಿಕರಿಗೆ ನಿರಂತರ ಸಂಪರ್ಕ ಸಾಧಿಸಬಹುದು. ಜತೆಗೆ ಸಂಚಾರ ದಟ್ಟಣೆ, ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಅಪರಾಧ ನಿಯಂತ್ರಣ ಕುರಿತು ಕೆಲವೊಂದು ಮಾಹಿತಿಯನ್ನು ಸಾರ್ವಜನಿಕರಿಗೆ ಮೊದಲೇ ನೀಡಲು ಈ ಚಾನಲ್ ಅನುಕೂಲವಾಗಲಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ತಿಳಿಸಿದ್ದಾರೆ. ‘ಬೆಂಗಳೂರು ಸಿಟಿ ಪೊಲೀಸ್’ ಎಂಬ ಹೆಸರಿನಡಿ ಅಧಿಕೃತವಾದ ವಾಟ್ಸ್‌ಆ್ಯಪ್ ಚಾನಲ್ ಕಾರ್ಯನಿರ್ವಹಿಸಲಿದೆ. http://whatsapp.com/channel/0029Va9CxUzISTkEb62NsN2z ವೀಕ್ಷಿಸಬಹುದು ಎಂದು ತಿಳಿಸಿದ್ದಾರೆ.