ನ್ಯೂಸ್

ವಕೀಲರಿಗೆ ಗೇಟ್ ಹೌಟ್ ಎಂದು ಅಪಮಾನಿಸಿದ ಎ.ಸಿ.ಕ್ಷೆಮೆಯಾಚಿಸಲು ಒತ್ತಾಯಿಸಿ ವಕೀಲರ ಪ್ರತಿಭಟನೆ / ಎ.ಸಿ. ವರ್ಗಾವಣೆ ಮಾಡುವ ತನಕ ಕಲಾಪಗಳಲ್ಲಿ ಭಾಗವಹಿಸುವುದಿಲ್ಲ / ವಕೀಲರ ಸಂಘ ತೀರ್ಮಾನ

ವಿಜಯವಾಣಿ ಸುದ್ದಿಜಾಲ ಕೋಲಾರ

ಕಂದಾಯ ನ್ಯಾಯಾಲದಿಂದ ಹೊರ ನಡೆಯಿರಿ ಗೆಟ್‌ಔಟ್ ಎಂದು ವಕೀಲರಿಗೆ ಸಹಾಯಕ ಕಮೀಷನರ್ ಡಾ.ಮೈತ್ರಿ ಅಗೌರವ ತೋರಿಸಿದ್ದಾರೆ. ಇವರು ಹೈಟೆಕ್ ಎ.ಸಿ.ಯಾಗಿ ಕೆಲಸ ಮಾಡುತ್ತಿದ್ದಾರೆ. ನಗರದ ಎ.ಸಿ.ಕಛೇರಿ ಮುಂಭಾಗ ಶುಕ್ರವಾರ ವಕೀಲರ ಸಂಘದಿAದ ಪ್ರತಿಭಟನೆ ನಡೆಸಲಾಯಿತು.

ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕರಿಸಿದ ವಕೀಲರು ಮೆರವಣಿಗೆ ಮೂಲಕ ಎ.ಸಿ.ಕಛೆರಿಗೆ ಬಂದು ಅಧಿಕಾರಿ ವಿರುದ್ಧ ಘೋಷಣೆಗಳನ್ನು ಕೂಗಿ ಕೂಡಲೇ ಕ್ಷಮೆಯಾಚಿಸಬೇಕೆಂದು ನೂರಾರು ವಕೀಲರು ಆಕ್ರೋಶ ವ್ಯಕ್ತಪಡಿಸಿದರು.

ವಕೀಲರ ಸಂಘದ ಅಧ್ಯಕ್ಷ ಮುನೇಗೌಡ ಮಾತನಾಡಿ, ಕಂದಾಯ ನ್ಯಾಯಾಲಯದಲ್ಲಿ ಕಲಾಪ ನಡೆಸುವ ಸಮಯದಲ್ಲಿ ಉಪವಿಭಾಗಾಧಿಕಾರಿ ಡಾ.ಮೈತ್ರಿ ಯವರು ನ್ಯಾಯಾಲಯದಿಂದ ಹೊರ ನಡೆಯಿರಿ ಎಂದು ಏಕವಚನದಲ್ಲಿ ಗದರಿದ್ದಾರೆ. ಅಧಿಕಾರಿಯಾಗಿ ಈ ರೀತಿ ನಡೆದುಕೊಳ್ಳುವುದು ಇವರಿಗೆ ಶೋಭೆ ತರುವುದಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.

ವಕೀಲರಿಗೆ ಗೌರವ ನೀಡುವುದನ್ನು ಕಲಿಯಬೇಕು. ನಾವು ಸಹ ಜನಪರ ಕರ್ತವ್ಯ ನಿರ್ವಹಿಸುವವರು. ಇಲ್ಲಿಯವರೇ ಆದ ಕಂದಾಯ ಸಚಿವ ಕೃಷ್ಣಬೈರೇಗೌಡ ರವರಿಗೆ ಅಧಿಕಾರಿ ಮೈತ್ರಿ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಪಡಿಸಲಾಗುವುದು. ಹಾಗೂ ಎ.ಸಿ.ಡಾ.ಮೈತ್ರಿ ವಕೀಲರಿಗೆ ಕ್ಷಮೆಯಾಚಿಸಬೇಕು. ಇಲ್ಲವಾದರೆ ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ವಕೀಲರಾದ ರತ್ಮಮ್ಮ ಮಾತನಾಡಿ, ಎ.ಸಿ.ಅವರು ನೂರಾರು ಕೋಟಿ ಆಸ್ತಿಯ ಶ್ರೀಮಂತರಾಗಿರುವುದಾಗಿ ಹೇಳಿ ಕೊಂಡು ಇಂಥ ಹುದ್ದೆಗಳು ತಮಗೆ ಬೇಕಾಗಿಲ್ಲ ಎಂದು ಉಡಾಫೆ ಮಾತುಗಳನ್ನಾಡುವವರು ಹಣದ ಅಮಿಷಕ್ಕೆ ಬಲಿಯಾಗುತ್ತಿರುವುದು ಏಕೆ? ಎಂದು ಪ್ರಶ್ನಿಸಿದ ಅವರು ಎ.ಸಿ.ಅವರು ಗೇಟ್‌ಔಟ್ ಎಂದಿರುವುದು ವಾಪಸ್ ಪಡೆಯುತ್ತೇನೆ ಅದರೆ ಕ್ಷಮೆಯಾಚಿಸುವುದು ಸಾಧ್ಯವಿಲ್ಲ ಎಂದಿದ್ದಾರೆ. ಹಾಗಾಗಿ ಅವರು ವಕೀಲರನ್ನು ಕ್ಷೆಮಯಾಚಿಸಬೇಕು. ನ್ಯಾಯಾಲಯದಲ್ಲಿನ ಶಿಷ್ಠಚಾರಗಳನ್ನು ಪಾಲಿಸಬೇಕು. ವಕೀಲರಿಗೆ ಗೌರವ, ಕಕ್ಷಿದಾರರ ಬಳಿ ಸೌಜನ್ಯದಿಂದ ವರ್ತಿಸಬೇಕು. ಇಲ್ಲವಾದರೆ ವರ್ಗಾಯಿಸಿಕೊಂಡು ಹೋಗ ಬೇಕೆಂದು ಒತ್ತಾಯಿಸಿದರು,

ಪ್ರತಿಭಟಣೆಯಲ್ಲಿ ವಕೀಲರ ಸಂಘದ ಮಾಜಿ ಅಧ್ಯಕ್ಷ ಟಿ.ಆರ್. ಜಯರಾಮ್, ಕುಡುವನಹಳ್ಳಿ ಮಂಜುನಾಥ್, ಶ್ರೀಧರ್, ಉಪಾಧ್ಯಕ್ಷ ರವೀಂದ್ರಬಾಬು, ಪದಾಧಿಕಾರಿಗಳಾದ ಜಯರಾಮ್, ಚಲಪತಿ, ಎಂ.ಕೃಷ್ಣಮೂರ್ತಿ, ರವಿಕುಮಾರ್, ಬೈರಾರೆಡ್ಡಿ, ಶ್ರೀಧರ್, ಚೌಡೇಗೌಡ, ಲಕ್ಷಿö್ಮÃನರಸಿಂಹಯ್ಯ ಸೇರಿದಂತೆ ನೂರಾರು ವಕೀಲರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಎಸಿ ಕ್ಷಮೆಯಾಚಿಸಬೇಕು ಇಲ್ಲವೇ ವರ್ಗಾವಣೆ ಮಾಡಿಸಿಕೊಳ್ಳಲಿ ವಕೀಲರ ಸಂಘ ಆಗ್ರಹ :

ನ್ಯಾಯಾಲಯದ ಶಿಷ್ಟಚಾರಗಳನ್ನು ಸಹಾಯಕ ಕಮೀಷನರ್ ಡಾ.ಮೈತ್ರಿ ಪಾಲಿಸುವಂತಾಗಬೇಕು, ವಕೀಲರಿಗೆ ಗೌರವ ನೀಡಬೇಕು, ಕಚೇರಿಯಲ್ಲಿ ನಡೆಯುವಂತ ಭ್ರಷ್ಟಾಚರಗಳಿಗೆ ಕಡಿವಾಣ ಹಾಕಿಬೇಕು. ಕಕ್ಷಿದಾರರ ಬಳಿ ಗೌರವದಿಂದ ನಡೆದುಕೊಳ್ಳಬೇಕು, ನ್ಯಾಯಲಯದ ಅವಧಿಯಲ್ಲಿ ನಿಗಧಿತ ಅವಧಿಗೆ ಬರಬೇಕು, ಶುಕ್ರವಾರ ನಡೆದ ಪ್ರಕರಣಕ್ಕೆ ಸಂಬAಧಿಸಿದAತೆ ಕ್ಷಮೆಯಾಚಿಸಬೇಕು. ಇದಕ್ಕೆಲ್ಲಾ ಬದ್ದರಾಗಿದ್ದರೆ ಮಾತ್ರ ಎ.ಸಿ ಹುದ್ದೆಯಲ್ಲಿ ಮುಂದೆವರೆಯಲಿ ಇಲ್ಲವಾದರೆ ವರ್ಗಾವನೆ ಮಾಡಿಕೊಂಡು ಹೋಗಬೇಕು. ಅಲ್ಲಿಯವರೆಗೆ ನಾವು ಎ.ಸಿ.ನ್ಯಾಯಾಲಯದ ಕಲಾಪಗಳಲ್ಲಿ ಭಾಗವಹಿಸುವುದಿಲ್ಲ ಎಂದು ಶನಿವಾರ ವಕೀಲರ ಸಂಘದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಿರುವುದಾಗಿ ವಕೀಲರ ಸಂಘದ ಅಧ್ಯಕ್ಷ ಮುನೇಗೌಡ ತಿಳಿಸಿದ್ದಾರೆ.

ಸಹಾಯಕ ಕಮೀಷನರ್ ಆಗಿ ಕಾರ್ಯನಿರ್ವಹಿಸುತ್ತಿರುವ ಡಾ.ಮೈತ್ರಿ ತಮ್ಮ ಉದ್ದಾಟತನದ ಅಮಾನುಷ ವರ್ತನೆ ಬದಲಾಯಿಸಿಕೊಳ್ಳಬೇಕು, ಉನ್ನತ ದರ್ಜೆಯ "ಎ" ವರ್ಗದ ಅಧಿಕಾರಿಯಾಗಿದ್ದು ಅ ಹುದ್ದೆಗೆ ತಕ್ಕಂತೆ ನಡುವಳಿಕೆ ಅಳವಡಿಸಕೊಳ್ಳಬೇಕು, ಹಿರಿಯರಿಗೆ ಗೌರವ ಕೊಡುವಂತ ಸಂಸ್ಕಾರ ಕಲಿಯಬೇಕು ಎಂದು ಸಭೆಯಲ್ಲಿ ವಕೀಲರು ಆಗ್ರಹ ಪಡಿಸಿದ್ದಾರೆ.

ವಕೀಲರ ಮೇಲೆ ದಬ್ಬಾಳಿಕೆಯ ಹಿಟ್ಲರ್ ಸಂಸ್ಕೃತಿ ಬಿಡಬೇಕು, ನ್ಯಾಯಾಲಯದ ಕಾರ್ಯಕಲಾಪ ನಡೆಯುವ ಸಂದರ್ಭಧಲ್ಲಿ ನಾವು ಹೇಳಿದಂತೆ ನ್ಯಾಯವಾದಿಗಳು ನಡೆಯಬೇಕು, ನ್ಯಾಯಾಲಯದಿಂದ ಹೊರಗೆ ಇರಬೇಕು, ನಾನು ಕರೆದಾಗಬರಬೇಕು. ಒಳಗೆ ಅಸೀನರಾಗಬಾರದು ಎಂಬ ಧೋರಣೆ ಬಿಡಬೇಕು, ಅಕ್ಷಸ್ಥರಂತೆ ವರ್ತಿಸಬೇಕು, ಇದೇ ನ್ಯಾಯಾಲಯಕ್ಕೆ ಬರುವ ಇನ್ನಿಬ್ಬರು ಸಹಾಯಕ ಕಮೀಷನರ್‌ರಂತೆ ಇವರು ಸಹ ಉತ್ತಮ ನ್ಯಾಯಾಧೀಶರಂತೆ ನಡೆದುಕೊಳ್ಳಬೇಕು, ಈ ಎಲ್ಲಾ ಸಲಹೆಗಳನ್ನು ಪಾಲಿಸಬೇಕು, ಈ ಹಿಂದೆ ನಡೆದ ಅಹಿತಕರ ಘಟನೆಗೆ ಕ್ಷೆಮೆಯಾಚನೆ ಮಾಡಬೇಕು. ಇಲ್ಲವಾದರೆ ಇಂತಹ ಸಹಾಯಕ ಕಮೀಷನರ್ ನಮಗೆ ಬೇಡ ಬೇರೆ ಕಡೆ ವರ್ಗಾಯಿಸಿಕೊಂಡು ಹೋಗಲಿ ಎಂದು ಆಗ್ರಹಪಡಿಸಿದರು.

ಚಿತ್ರ ೨೫ ಕೆ.ಎಲ್.ಆರ್. ೦೬ : ಉಪ ವಿಭಾಗಾಧಿಕಾರಿ ಡಾ.ಮೈತ್ರಿ ವಿರುದ್ಧ ವಕೀಲರು ಶುಕ್ರವಾರ ಪ್ರತಿಭಟನೆ ನಡೆಸುತ್ತಿರುವುದು.

ಚಿತ್ರ ೨೫ ಕೆ.ಎಲ್.ಆರ್. ೦೨ಎ : ಉಪವಿಭಾಗಾಧಿಕಾರಿ ವರ್ತನೆಯನ್ನು ಖಂಡಿಸಿ ಶನಿವಾರ ಸಭೆ ನಡೆಸಿದ ವಕೀಲರ ಸಂಘದ ಅಧ್ಯಕ್ಷರು ಮಾತನಾಡುತ್ತಿರುವುದು.