ಬಾಗಲಕೋಟೆ: ಸದನದಲ್ಲಿ ನಡೆದಿದ್ದ ಗದ್ದಲದ ವೇಳೆ ಪರಿಷತ್ ಸದಸ್ಯ ಸಿ.ಟಿ.ರವಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಅಸಭ್ಯವಾಗಿ ಮಾತನಾಡಿದ್ದಾರೆಂದು ಅವರ ವಿರುದ್ಧ ಪ್ರಕರಣ ದಾಖಲಿಸಿ, ಅವರನ್ನು ಬಂಽಸಿದ್ದ ಪೊಲೀಸರು ಇಡೀ ರಾತ್ರಿ ಅವರನ್ನು ವಿವಿಧ ಜಿಲ್ಲೆಗಳ ವ್ಯಾಪ್ತಿಯಲ್ಲಿ ಅವರನ್ನು ವಾಹನದಲ್ಲಿ ಕೂಡಿಸಿಕೊಂಡು ಸಂಚಿಸಿದ್ದ ಪೊಲೀಸರು ಜಿಲ್ಲೆಯ ಲೋಕಾಪುರಕ್ಕೆ ಕರೆತಂದಿದ್ದು ಬೆಳಕಿಗೆ ಬಂದಿದೆ.
ಸಿ.ಟಿ.ರವಿ ಅವರನ್ನು ಬೆಂಗಳೂರಗೆ ಕರೆದುಕೊಂಡು ಹೋಗುವುದಾಗಿ ಹೇಳಿದ್ದ ಪೊಲೀಸರು ಬೆಳಗಾವಿ ಜಿಲ್ಲೆಯಿಂದ ರಾತ್ರಿ ದಿಢೀರನೇ ಬಾಗಲಕೋಟೆ ಜಿಲ್ಲೆ ಲೋಕಾಪುರಕ್ಕೆ ಕರೆದುಕೊಂಡು ಬಂದಿದ್ದರು. ಈ ವೇಳೆ ಸಿ.ಟಿ.ರವಿ ಅವರ ಜೊತೆಗೆ ಇದ್ದ ಮತ್ತೊಮ್ಮ ಎಂಎಲ್‌ಸಿ ಕೇಶವ ಪ್ರಸಾದ್ ಅವರನ್ನು ಲೋಕಾಪುರ-ಯರಗಟ್ಟಿ ಮಧ್ಯ ರಸ್ತೆಯಲ್ಲಿ ಇಳಿಸಿ ಮುಂದೆ ತೆರಳಿದ್ದಾರಂತೆ.
ಬೆಂಗಳೂರಗೆ ಹೋಗಬೇಕಿದ್ದ ಪೊಲೀಸ್ ವಾಹನ ಲೋಕಾಪುರಕ್ಕೆ ಬರುತ್ತಿದೆ ಎನ್ನುವ ಮಾಹಿತಿ ತಿಳಿದು ಲೋಕಾಪುರ ಪೊಲೀಸ್ ಠಾಣೆ ಹತ್ತಿರ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರ ಸೇರಿದ್ದರು. ಕಾರ್ಯಕರ್ತರ ದಂಡು ಕಂಡ ಪೊಲೀಸರು ವಾಹನ ನಿಲ್ಲಿಸಿದೇ ಅಲ್ಲಿಂದ ವಾಪಸ್ಸು ಹಿಂತಿರುಗಿದ್ದಾರೆ.
ಸಿ.ಟಿ.ರವಿ ಅವರ ಜೊತೆ ಪೊಲೀಸರು ಇಡೀ ರಾತ್ರಿ ನಡೆದುಕೊಂಡ ರೀತಿ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಪರಿಷತ್ ಸದಸ್ಯ ಕೇಶವ ಪ್ರಸಾದ್, ರಾಜ್ಯದಲ್ಲಿ ಗೂಂಡಾ ರಾಜ್ಯ ನಡೆಯುತ್ತಿದೆ. ರಾಜ್ಯಭಾರ ಮಾಡುವವರಿಗೆ ಜನಪ್ರತಿನಿಽಗಳ ಹೇಗೆ ನಡೆಸಿಕೊಳ್ಳಬೇಕು ಎಂದು ಕಿಂಚಿತ್ತು ಗಮನ ಇಲ್ಲ. ಸದನದ ಒಳಗೆ ನಡೆದ ಘಟನೆ ಇಟ್ಟುಕೊಂಡು ಇವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ರವಿ ಅವರನ್ನು ಕಾನೂನಾತ್ಮಕವಾಗಿ ಬಂಽಸಿದೇ ಸುಮ್ಮನೆ ಎತ್ತಾಕಿಕೊಂಡು ಹೋಗಿ ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳ ಸುತ್ತ ಸುತ್ತಾಡಿಸಿದ್ದಾರೆ. ಅವರ ಜೊತೆ ಇದ್ದ ನನ್ನನ್ನು ಲೋಕಾಪುರ ಬಳಿ ನನ್ನ ಪ್ರತ್ಯೇಕಗೊಳಿಸಿ ರವಿ ಅವರನ್ನು ಇನ್ನೊಂದು ದಿಕ್ಕಿಗೆ ಕರೆದುಕೊಂಡು ಹೋಗಿದ್ದರು.
ಸಿ.ಟಿ.ರವಿ ಏನು ಕೊಲೆಗಡುಕರಲ್ಲ, ಭಯೋತ್ಪಾದಕರಲ್ಲ, ಅವರ ಬಳಿಯೇನು ಗನ್ನು ಸಿಕ್ಕಿಲ್ಲ. ಈ ರೀತಿ ಜನಪ್ರತಿನಿಽಯನ್ನು ಅವಮಾನಕರವಾಗಿ ಕಂಡಿದ್ದು, ಇಡೀ ರಾಜ್ಯ ತಲೆ ತೆಗ್ಗಿಸುವಂತಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರ ಕ್ಷಮೆ ಕೇಳಬೇಕು. ಅವರ ಮೇಲಿನ ಕೇಸ್ ವಾಪಸ್ಸು ಪಡೆಯಬೇಕು. ಅವರನ್ನು ಬಿಡುಗಡೆ ಮಾಡಿ, ಮುಖ್ಯಮಂತ್ರಿಗಳು ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.