ವಿಜಯವಾಣಿ ಸುದ್ದಿಜಾಲ ಕೋಲಾರ
ಮುಖ್ಯಮಂತ್ರಿಗಳು ಕರ್ನಾಟಕ ಲೋಕ ಸೇವಾ ಆಯೋಗಕ್ಕೆ ತಿದ್ದುಪಡಿ ಜಾರಿಗೆ ತಂದಿರುವುದನ್ನು ಗುರುವಾರ ವಿಧಾನಪರಿಷತ್ತಿನಲ್ಲಿ ಸ್ವಾಗತಿಸಿರುವ ಎಂ.ಎಲ್.ಸಿ. ಅನಿಲ್‌ಕುಮಾರ್ ತಿದ್ದುಪಡಿ ಪ್ರಥಮ ಹೆಜ್ಜೆಯಾಗಿದ್ದು, ಕೆಪಿಎಸ್‌ಸಿ ಇತ್ತೀಚೆಗೆ ನಡೆಯುತ್ತಿರುವ ಹಗರಣಗಳನ್ನು ಸುಧಾರಣೆ ಮಾಡುವ ಸಲುವಾಗಿ ಈ ತಿದ್ದುಪಡಿಯನ್ನು ಜಾರಿಗೆ ತರಲಾಗಿರುವುದನ್ನು ಸ್ವಾಗತಿಸಿ ಮಾತನಾಡಿದರು.
ಕೆ.ಪಿ.ಎಸ್.ಸಿ.ಗೆ ಸದಸ್ಯರನ್ನು ನೇಮಕ ಮಾಡುವಲ್ಲಿಯೇ ಸುಧಾರಣೆ ಮಾಡಬೇಕಾಗಿದೆ. ಸದಸ್ಯರ ಹೆಚ್ಚಿಗೆ ಮಾಡುವುದು, ಜಾತಿ ಆಧಾರದ ಮೇಲೆ ಸದಸ್ಯರನ್ನು ನೇಮಕ ಮಾಡುವುದು, ರಾಜಕೀಯ ಹಿನ್ನಲೆಯಿರುವವರನ್ನು ನೇಮಕ ಮಾಡುವುದರಿಂದ ಮೊದಲನೇ ಹೆಜ್ಜೆಯಲ್ಲಿ ಹಿನ್ನಡೆಯನ್ನು ಅನುಭವಿಸಬೇಕಾಗುತ್ತದೆ.
ಯಾವ ರೀತಿ ಪರೀಕ್ಷೆ ನಡೆಸಬೇಕು. ಪರೀಕ್ಷೆಯ ಸುಧಾರಣೆಯ ಕ್ರಮಗಳನ್ನು ಯಾವ ರೀತಿ ಮಾಡಬೇಕು ಎಂಬುದರ ಬಗ್ಗೆಯೂ ಚರ್ಚೆಯ ಅವಶ್ಯಕತೆ ಇದೆ. ಪರೀಕ್ಷೆ ನಡೆಸುವ ಅನೇಕ ವೈಜ್ಞಾನಿಕ ಕ್ರಮಗಳು ಬಂದಿವೆ. ೧೫ ರಿಂದ ೨೦ ವರ್ಷಗಳಿಂದ ನಡೆಸುವ ಪರೀಕ್ಷೆಗಳ ವಿದ್ಯಾರ್ಥಿಗಳು ಕೋರ್ಟ್ ಮೆಟ್ಟಿಲತ್ತಿ ತಡೆಯಾಜ್ಞೆಯನ್ನು ತಂದಿದ್ದಾರೆ.
ಪ್ರತಿವರ್ಷ ಯುಪಿಎ ಪರೀಕ್ಷೆ ನಡೆಯುತ್ತಿವೆ. ಆದರೆ ಯಾರೂ ಕೋರ್ಟ್ ಮೆಟ್ಟಿಲು ಹತ್ತುತ್ತಿಲ್ಲ. ಪರೀಕ್ಷೆ ನಡೆಸಲು ಅನೇಕ ಮಾಡೆಲ್‌ಗಳು ಇವೆ. ಅವುಗಳನ್ನು ಬಳಸಿ ಪರೀಕ್ಷೆಗಳನ್ನು ನಡೆಸಬೇಕಾಗುತ್ತದೆ. ಕೆಪಿಎಸ್.ಸಿ. ಪರೀಕ್ಷೆಗಳು ನಡೆಸುವಲ್ಲಿ ಯುಪಿಎ ಪರೀಕ್ಷೆಯ ಮಾಡೆಲ್‌ನ್ನು ನಾವು ಯಾಕೆ ಬಳಸಬಾರದು ಎಂಬುದರ ಬಗ್ಗೆ ಚಿಂತನೆ ನಡೆಸಬೇಕಾಗುತ್ತದೆ ಎಂದರು.
ಯುಪಿಎ ಪರೀಕ್ಷೆ ಪ್ರಾರಂಭ ಮತ್ತು ಸಿದ್ಧತೆಗಳು ಎಲ್ಲವೂ ಸುಸೂತ್ರವಾಗಿ ನಡೆಸಲಾಗುತ್ತದೆ. ಆದ್ದರಿಂದ ಅಲ್ಲಿ ಯಾವುದೇ ರೀತಿಯ ಗೊಂದಲಗಳು ಸೃಷ್ಟಿಯಾಗುವುದಿಲ್ಲ. ಆದ್ದರಿಂದ ಕೆಪಿಎಸ್.ಸಿ ಪರೀಕ್ಷೆಗಳು ಸುಧಾರಣೆಯಾಗಬೇಕಾಗಿದೆ. ಕೆಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಉದ್ಯೋಗ ಪಡೆದಿರುವವರ ಕೈಗೆ ಕರ್ನಾಟಿಕ ಆಡಳಿತವನ್ನು ನೀಡಬೇಕಾಗುತ್ತದೆ. ಆದ್ದರಿಂದ ಅರ್ಹರ ಆಯ್ಕೆ ಇದರಲ್ಲಿ ಮುಖ್ಯ.ಸರ್ಕಾರದ ಅನುಷ್ಠಾನಗಳು ಇವರ ಕೈಗೆ ಸೇರುತ್ತವೆ. ಅರ್ಹರು ಆಯ್ಕೆ ಆಗದಿದ್ದರೆ ಅಂತಹವರ ಕೈಯಿಂದ ನಾವು ನಿರೀಕ್ಷೆ ಮಾಡುವುದಾದರೂ ಏನು. ಆಗ ಸರ್ಕಾರಕ್ಕೂ ಕೆಟ್ಟ ಹೆಸರು ಬರುತ್ತದೆ ಎಂದರು.
ಕೆಪಿಎಸ್‌ಸಿ ಸುಧಾರಣೆ ಎಂದರೆ ಅದು ಪಾರದರ್ಶಕವಾಗಿ ಇರಬೇಕು. ಕೆಪಿಎಸ್‌ಸಿ ಪರೀಕ್ಷೆಗೆ ಕಾನೂನು ತಿದ್ದುಪಡಿ ತರುವುದು ಕಠಿಣವಾಗಿರಬೇಕು. ಆಗ ಸುಧಾರಣೆಯು ಆಗುತ್ತದೆ ಎಂದರು.
ಚಿತ್ರ ೨೦ ಕೆ.ಎಲ್.ಆರ್. ೦೪ : ಎಂ.ಎಲ್.ಸಿ.ಅನಿಲ್‌ಕುಮಾರ್ ರವರ ಭಾವಚಿತ್ರ