ನ್ಯೂಸ್

ಲೋಕ ಅದಾಲತ್‍ನಲ್ಲಿ 4500 ಪ್ರಕರಣಗಳು ಇತ್ಯರ್ಥ

ಹಿರಿಯ ಸಿವಿಲ್ ನ್ಯಾಯಾಧೀಶರಾದ ಗಂಗಾಧರ್ ಸಿ.ಎಚ್., ವಕೀಲರ ಸಂಘದ ಅಧ್ಯಕ್ಷ ಶ್ರೀಧರ್ ಉಪಸ್ಥಿತರಿದ್ದರು.

ಸೈಮನ್ಸ್ ಹೆಚ್ಚಿನ ಶ್ರಮವಹಿಸಿದ್ದಾರೆ ಎಂದು ಅಭಿನಂದಿಸಿದರು.

ಲೋಕ ಅದಾಲತ್‍ಗೆ ಸ್ಥಳೀಯ ವಕೀಲರ ಸಂಘ, ತಾಲೂಕು ಸಂಘಗಳು, ವಿಮಾ ಕಂಪನಿಗಳ ಪ್ರತಿನಿಧಿಸುವ ವಕೀಲರು, ಪೊಲೀಸ್, ಅಬಕಾರಿ ಇಲಾಖೆ ಸೇರಿದಂತೆ ಜಿಲ್ಲಾಡಳಿತದ ಸಹಕಾರ ಪಡೆಯಲಾಗಿದ್ದು, ಎಲ್ಲರ ಸಕ್ರಿಯ ಭಾಗವಹಿಸುವಿಕೆಯಿಂದ ಯಶಸ್ವಿ ಕಂಡಿದೆ. ಎಲ್ಲ ತಾಲೂಕುಗಳಲ್ಲಿ ನ್ಯಾಯಾಧೀಶರು, ಸಿಬ್ಬಂದಿ ಸಹಕಾರ ನೀಡಿದ್ದಾರೆ. ವಕೀಲರಾದ ಕುಮಾರ್, ರಾಧಾಕುಮಾರ್, ನಿರಂಜನಸ್ವಾಮಿ, ವಿಲಿಯಮ್ಸ್,

ಅದಾಲತ್‍ನಲ್ಲಿ 400 ಸಿವಿಲ್‍ಕೇಸ್, 500 ಕ್ರಿಮಿನಲ್ ಕೇಸ್, ಮೋಟಾರು ವಾಹನ ಕಾಯ್ದೆಗೆ ಸಂಬಂಧಿಸಿದ ಪ್ರಕರಣಗಳಲ್ಲಿ 1.17 ಕೋಟಿರೂ ಪರಿಹಾರವನ್ನೂ ಕಲ್ಪಿಸಲಾಗಿದ್ದು, ಮರಳು ದಂಧೆಯಲ್ಲಿ 33 ಲಕ್ಷರೂ ದಂಡ ವಸೂಲಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರಕರಣಗಳು. ಉಳಿದಂತೆ ವೈವಾಹಿಕ, ವಿದ್ಯುತ್ ಸಂಪರ್ಕ, ಅಮಲ್ಜಾರಿ, ಪೊಲೀಸ್ ಕಾಯ್ದೆ ವ್ಯಾಪ್ತಿಯ ಪಿಟ್ಟಿ ಕೇಸ್, ವಾಹನ, ರಸ್ತೆ, ಮಾಸ್ಕ್ ನಿಯಮಗಳ ಉಲ್ಲಂಘನೆ ಸೇರಿದಂತೆ ಸಣ್ಣಪುಟ್ಟ 2800 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ ಎಂದರು.

ನಗರದ ಜಿಲ್ಲಾ ನ್ಯಾಯಾಲಯದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಒಟ್ಟು 41,794 ಪ್ರಕರಣಗಳು ಜಿಲ್ಲೆಯಲ್ಲಿ ಬಾಕಿಯಿದ್ದು, ಅವುಗಳಲ್ಲಿ 28,482 ಪ್ರಕರಣಗಳನ್ನು ಇತ್ಯರ್ಥಪಡಿಸುವ ಸಲುವಾಗಿ ಗುರುತಿಸಲಾಗಿತ್ತು. 400 ಸಿವಿಲ್ ಪ್ರಕರಣಗಳು, 500 ಕ್ರಿಮಿನಲ್ ಪ್ರಕರಣಗಳು, 40 ಮೋಟಾರು ವಾಹನ ಕಾಯಿದೆ ಪ್ರಕರಣಗಳು, 50 ಮರಳು ದಂಧೆ ಪ್ರಕರಣಗಳು, 138 ಬ್ಯಾಂಕ್ ಚೆಕ್

ಜಿಲ್ಲೆಯಲ್ಲಿ ಶನಿವಾರ ನಡೆದ ಲೋಕ ಅದಾಲತ್‍ನಲ್ಲಿ ಸುಮಾರು 4,500 ವಿವಿಧ ರೀತಿಯ ಪ್ರಕರಣಗಳು ಇತ್ಯರ್ಥಗೊಂಡಿದ್ದು, ಎಲ್ಲರ ಸಹಕಾರದಿಂದ ಅದಾಲತ್ ಯಶಸ್ವಿಯಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಂ.ಎಲ್.ರಘುನಾಥ್ ತಿಳಿಸಿದರು.

ವಿಜಯವಾಣಿ ಸುದ್ದಿಜಾಲ ಕೋಲಾರ