ನ್ಯೂಸ್

ಲೈಂಗಿಕ ಕಿರುಕುಳ, ಬಲತ್ಕಾರ ಮೂಲಭೂತ ಹಕ್ಕುಗಳ ಉಲ್ಲಂಘನೆ / ಸಾಬೀತಾದರೆ ಜೀವಾವಧಿ ಶಿಕ್ಷೆ / ಎಸ್.ಸತೀಶ್

ವಿಜಯವಾಣಿ ಸುದ್ದಜಾಲ ಕೋಲಾರ

ಲೈಂಗಿಕ ಕಿರುಕುಳ, ಬಲತ್ಕಾರ ಇವು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಇದಕ್ಕೆ ೧೦ ವರ್ಷಗಳ ಕಡಿಮೆ ಇರದ ಜೀವಾವಧಿ ಶಿಕ್ಷೆ ಇದೆ ಎಂದು ಕಾನೂನು ಸೇವೆ ಪ್ರಾಧಿಕಾರದ ಉಪ ಪ್ರದಾನ ಮತ್ತು ಕಾನೂನು ನೆರವು ಅಭಿರಕ್ಷಕರಾದ ಎಸ್.ಸತೀಶ್ ತಿಳಿಸಿದರು.

ನಗರದ ಹೊರವಲಯದ ಸಹ್ಯಾದ್ರಿ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ಕಾನೂನು ನೆರವು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, ೧೬ ವರ್ಷಗಳನ್ನು ಪೂರೈಸದ ಮಕ್ಕಳ ಮೇಲೆ ಲೈಂಗಿಕ ಬಲತ್ಕಾರ ಮಾಡಬಾರದು. ಇದಕ್ಕೆ ಶಿಕ್ಷೆ ಮತ್ತು ಜುಲ್ಮಾನೆ ಎರಡನ್ನೂ ವಿಧಿಸಲಾಗುತ್ತದೆ. ಆರೋಪ ಸಾಬೀತಾದರೆ ಜೀವಾವಧಿ ಶಿಕ್ಷೆ ಖಾಯಂಗೊಳಿಸಲಾಗುತ್ತದೆ ಎಂದರು.

ತೊಂದರೆಗೊಳಗಾದ ಮಕ್ಕಳು ಕಾನೂನು ಸೇವಾ ಪ್ರಾಧಿಕಾರದ ಸಹಾಯದಿಂದ ಪರಿಹಾರ ಪಡೆಯಬಹುದು. ಆಕರ್ಷಣೆಗೆ ಒಳಗಾಗಿ ಮಕ್ಕಳು ಈ ಕೃತ್ಯಗಳಲ್ಲಿ ಭಾಗವಹಿಸಬಾರದು. ಏಕೆಂದರೆ ಅದೊಂದು ಸಮಾಜಕ್ಕೆ ಹೊರೆಯಾಗುತ್ತದೆ. ಇತ್ತೀಚೆಗೆ ಮಕ್ಕಳು ಗರ್ಭಧರಿಸುತ್ತಿರುವುದು ಪತ್ರಿಕೆಗಳಲ್ಲಿ ಹಾಗೂ ಇತರೆ ಮಾಧ್ಯಮಗಳಲ್ಲಿ ನೋಡಿರುತ್ತೇವೆ. ಆಟವಾಡಬೇಕಾದ ಸಮಯದಲ್ಲಿ ಮಕ್ಕಳು ಮಕ್ಕಳನ್ನು ಹೊತ್ತುಕೊಂಡು ಓಡಾಡುವುದು ದೇಶದ ಅಭಿವೃದ್ಧಿಗೆ ಮಾರಕ ಎಂದರು.

ಕಾಲೇಜಿನ ಪ್ರಾಂಶುಪಾಲರಾದ ಉದಯ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಅನುರಾಧ, ಸವಿತಾ, ಸುಜಾತ, ಸುನೀತ, ಸುರೇಶ್, ಜಯಶ್ರೀ ಮುಂತಾದವರು ಇದ್ದರು.

ಚಿತ್ರ ೦೧ ಕೆ.ಎಲ್.ಆರ್. ೦೪ : ಸಹ್ಯಾದ್ರಿ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಕ್ಕಳು.