ಹಟ್ಟಿಚಿನ್ನದಗಣಿ: ಇಲ್ಲಿನ ಆರಾಧ್ಯ ದೈವ ಲಿಂಗಾವಧೂತರ ಜಾತ್ರೋತ್ಸವ ಮಂಗಳವಾರ ವಿಜೃಂಭಣೆಯಿಂದ ಜರುಗಿತು. ಸಂಪ್ರದಾಯದಂತೆ ಭೂಪೂರಿನ ಗಜದಂಡ ಶಿವಯೋಗಿಗಳು ರಥಾರೂಢರಾಗಿ ಪೂಜೆ ಸಲ್ಲಿಸಿದರು.
ರಥೋತ್ಸವಕ್ಕೆ ಮಾಜಿ ಶಾಸಕ, ಹಟ್ಟಿಚಿನ್ನದಗಣಿ ಕಂಪನಿ ಅಧ್ಯಕ್ಷ ಮಾನಪ್ಪ ಡಿ.ವಜ್ಜಲ್ ಚಾಲನೆ ನೀಡಿದರು. ದೇವಸ್ಥಾನ ಸಮಿತಿ ಅಧ್ಯಕ್ಷ, ದಳಪತಿ ಗುಂಡಪ್ಪಗೌಡ ಪೊಲೀಸ್ ಪಾಟೀಲ್, ಸಿಪಿಐ ಪ್ರಕಾಶ್ ಎಲ್.ಮಾಳಿ, ಪಿಎಸ್‌ಐ ಸುಬ್ಬಣ್ಣ ಹಾಗೂ ಗಣಿ ಕಂಪನಿ ಅಧಿಕಾರಿಗಳು ಭಾಗವಹಿಸಿದ್ದರು.