ನ್ಯೂಸ್

ಲಿಂಗರಾಜರ ಜಯಂತಿ ಯಶಸ್ಸಿಗೆ ಶ್ರಮಿಸಿ

ಧಾರವಾಡ: ಲಿಂಗರಾಜರ ದಾನದಿಂದ ಸ್ಥಾಪಿತ ನಿಧಿಯಿಂದ ಶಿಕ್ಷಣ ಪಡೆದ ಲಕ್ಷಾಂತರ ವಿದ್ಯಾರ್ಥಿಗಳು ದೇಶ- ವಿದೇಶಗಳಲ್ಲಿ ನೆಲೆ ಕಂಡುಕೊಂಡಿದ್ದಾರೆ. ಅಂಥ ಮಹಾನ್ ವ್ಯಕ್ತಿಯ ಜಯಂತಿಯನ್ನು ಬೆಂಗಳೂರಿನಲ್ಲಿ ಭಾನುವಾರ ಆಚರಿಸಲಾಗುತ್ತಿದೆ. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಅಖಿಲ ಕರ್ನಾಟಕ ಲಿಂಗರಾಜ ವಿವಿಧೋದ್ದೇಶ ಸಂಸ್ಥೆಯ ಗೌರವ ಅಧ್ಯಕ್ಷ ಬಿ.ಬಿ. ಪಾಟೀಲ ಶೇಗುಣಸಿ ಹೇಳಿದರು.

ಇಲ್ಲಿನ ಭಾರತಿನಗರದ ಲಿಂಗರಾಜರ ಸ್ಮಾರಕ ಭವನದಲ್ಲಿ ಮಹಾದಾನಿ ತ್ಯಾಗವೀರ ಶ್ರೀ ಸಿರಸಂಗಿ ಲಿಂಗರಾಜರ 160ನೇ ಜಯಂತಿ ಅಂಗವಾಗಿ ಬುಧವಾರ ಜರುಗಿದ ಕುಡವಕ್ಕಲಿಗ ಸಮಾಜದ ಮುಖಂಡರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಸಂಸ್ಥೆಯ ಅಧ್ಯಕ್ಷ ರವಿ ಕುಡವಕ್ಕಲಿಗೇರ ಮಾತನಾಡಿ, 1904 ಮತ್ತು 1905ರಲ್ಲಿ ಜರುಗಿದ ಅಖಿಲ ಭಾರತ ವೀರಶೈವ ಮಹಾಸಭೆಯ ಅಧಿವೇಶನಗಳ ಅಧ್ಯಕ್ಷರಾಗಿದ್ದ ಲಿಂಗರಾಜರು ಮಾಡಿದ ಭಾಷಣ ಸಮಾಜದಲ್ಲಿ ಬದಲಾವಣೆಗೆ ನಾಂದಿಯಾಗಿತ್ತು. ಅವರ 160ನೇ ಜಯಂತಿಯನ್ನು ರಾಜಧಾನಿ ಬೆಂಗಳೂರಿನಲ್ಲಿ ಆಚರಿಸಲಾಗುತ್ತಿದೆ. ಅದರ ಯಶಸ್ಸಿಗೆ ಸಮಾಜದ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದರು.

ಸಮಾಜದ ಮುಖಂಡರಾದ ಎ.ಎಂ. ಪಾಟೀಲ ಉಕ್ಕಲಿ, ಮಲ್ಲು ಬಿರಾದಾರ ಕೆಸರಟ್ಟಿ, ಎಂ.ಎಂ. ಮೈಲಾರ, ಎಸ್.ಎನ್. ಅಮ್ಮಿನಭಾವಿ, ಇತರರಿದ್ದರು.

ಸಂಸ್ಥೆಯ ಕಾರ್ಯದರ್ಶಿ ಬಿ.ಎಚ್. ಪಾಟೀಲ ವಂದಿಸಿದರು.

==========

ಫೋಟೋ 8 ಕೆಡಿಎಲ್ 2

ಕುಂದಗೋಳ, ಹರ್ಲಾಪುರ ಗ್ರಾಪಂ ಸದಸ್ಯ, ಮಲ್ಲಿಕಾರ್ಜುನ ರೆಡ್ಡಿ, ಗಟಾರ ಸ್ವಚ್ಛ,

ಗಟಾರು ಸ್ವಚ್ಛಗೊಳಿಸಿದ ಗ್ರಾಪಂ ಸದಸ್ಯ

ಕುಂದಗೋಳ: ತಾಲೂಕಿನ ಗುಡೇನಕಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರ್ಲಾಪುರ ಗ್ರಾಮದ ಗಟಾರಗಳು ಕಸ-ಕಡ್ಡಿ, ತ್ಯಾಜ್ಯ ತುಂಬಿಕೊಂಡಿದ್ದರಿಂದ ದಿನನಿತ್ಯದ ಬಳಕೆಯ ನೀರು ಗಟಾರಗಳಲ್ಲಿ ತುಂಬಿ ಕಸಕಡ್ಡಿಯಿಂದಾಗಿ ರಸ್ತೆ ಮೇಲೆ ಹರಿಯುವುದರಿಂದ ಗ್ರಾಮಸ್ಥರಿಗೆ ತೊಂದರೆಯಾಗುತ್ತಿತ್ತು. ಇದನ್ನು ಮನಗಂಡು ನೂತನವಾಗಿ ಆಯ್ಕೆಯಾದ ಗ್ರಾಮದ ಗ್ರಾಪಂ ಸದಸ್ಯ ಮಲ್ಲಿಕಾರ್ಜುನ ರೆಡ್ಡಿ ಹಾಗೂ ಸ್ನೇಹಿತರು ಸೇರಿ ಶುಕ್ರವಾರ ಬೆಳಗ್ಗೆ ಗಟಾರಗಳನ್ನು ಸ್ವಚ್ಛಗೊಳಿಸಿದರು. ಕೆರೆ ಸುತ್ತಲಿರುವ ಕಸಕಡ್ಡಿ ಹಾಗೂ ರ್ಪಾಗೆ ಸುಣ್ಣಬಣ್ಣ ಮತ್ತು ಪೈಪ್​ಲೈನ್ ದುರಸ್ತಿ ಕಾರ್ಯ ಮಾಡಿ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

=======

ಗಿನ್ನೆಸ್ ವಿಶ್ವ ದಾಖಲೆಗೆ ಬಾಲಕಿ ಪ್ರಯತ್ನ

ಹುಬ್ಬಳ್ಳಿ: 3 ಹುಲಾಹೂಪ್ಸ್ (ರಿಂಗ್) ಶರೀರದ ಮೇಲೆ ತಿರುಗಿಸುತ್ತ ಇನ್​ಲೈನ್ ಸ್ಕೇಟಿಂಗ್​ನಲ್ಲಿ 100 ಮೀ. ದೂರವನ್ನು ಅತ್ಯಂತ ವೇಗವಾಗಿ ಕ್ರಮಿಸುವ ಮೂಲಕ ನಗರದ 10 ವರ್ಷದ ಬಾಲಕಿ ಸ್ತುತಿ ಕುಲಕರ್ಣಿ ಗಿನ್ನೆಸ್ ವಿಶ್ವದಾಖಲೆಗೆ ಪ್ರಯತ್ನ ಮಾಡಿದ್ದಾಳೆ.

ಶಿರೂರು ಪಾರ್ಕ್ ಮುಖ್ಯ ರಸ್ತೆಯಲ್ಲಿ ಶುಕ್ರವಾರ ಬೆಳಗ್ಗೆ 3 ಸುತ್ತುಗಳಲ್ಲಿ ಸ್ಕೇಟಿಂಗ್ ಮಾಡಿದ ಬಾಲಕಿ 23.35 ಸೆಕೆಂಡ್​ನಲ್ಲಿ 100 ಮೀ. ಕ್ರಮಿಸಿದ್ದನ್ನು ವಿಡಿಯೋ ಚಿತ್ರೀಕರಣ ಮಾಡಿಕೊಳ್ಳಲಾಯಿತು. ಅದನ್ನೆ ಗಿನ್ನೆಸ್ ವರ್ಲ್ಡ್ ರೆಕಾರ್ಡ್​ಗೆ ಕಳುಹಿಸುವ ಬಗ್ಗೆ ತೀರ್ವನಿಸಲಾಯಿತು.

ಈ ಹಿಂದೆ ಆಸ್ಟ್ರೇಲಿಯನ್ ಲೇಡಿ ಮಾರ್ವಾ ಎಂಬುವವರು 27 ಸೆಕೆಂಡ್​ನಲ್ಲಿ 100 ಮೀ. ಸ್ಕೇಟಿಂಗ್ ಮಾಡಿರುವುದು ಗಿನ್ನೆಸ್ ಪುಸ್ತಕದಲ್ಲಿ ದಾಖಲಾಗಿದೆ. ಸ್ತುತಿ ಕುಲಕರ್ಣಿ ಅದಕ್ಕಿಂತ ಕಡಿಮೆ ಅವಧಿಯಲ್ಲಿ ಗುರಿ ತಲುಪಿದ್ದಾಳೆ. ಹಾಗಾಗಿ ಇದು ವಿಶ್ವದಾಖಲೆಯಾಗಲಿದೆ ಎಂದು ಸ್ಕೇಟಿಂಗ್ ತರಬೇತುದಾರ ಅಕ್ಷಯ ಸೂರ್ಯವಂಶಿ ವಿಶ್ವಾಸ ವ್ಯಕ್ತಪಡಿಸಿದರು.

ನಿತ್ಯ ಒಂದು ತಾಸು ಸ್ಕೇಟಿಂಗ್ ಮಾಡುತ್ತ 2 ವರ್ಷದಿಂದ ಇದಕ್ಕಾಗಿ ಪ್ರಯತ್ನ ಪಟ್ಟಿದ್ದೇನೆ. ಇದೀಗ ಅತ್ಯಂತ ಕಡಿಮೆ ಅವಧಿಯಲ್ಲಿ ಸಾಧನೆ ಮಾಡಿರುವುದು ಖುಷಿ ತಂದಿದೆ. ಇನ್ನಷ್ಟು ಸಾಧನೆ ಮಾಡುವ ಆಸೆ ಇದೆ ಎಂದು ಬಾಲಕಿ ಸ್ತುತಿ ತಿಳಿಸಿದಳು.

ಮಗಳಿಗಾಗಿ ಉತ್ತಮ ಕೋಚ್ ಕೊಡಿಸಿ ಎಲ್ಲ ಪ್ರಯತ್ನ ಮಾಡಿದ್ದೇವೆ. ಇದೀಗ ಗಿನ್ನೆಸ್ ರೆಕಾರ್ಡ್​ಗೆ ಅವಳ ಸಾಧನೆ ಕಳುಹಿಸುತ್ತಿದ್ದೇವೆ. ಸೇರ್ಪಡೆಯಾಗುವ ವಿಶ್ವಾಸವಿದೆ ಎಂದು ತಂದೆ ಕಿಶೋರ ಹಾಗೂ ತಾಯಿ ರಶ್ಮಿ ತಿಳಿಸಿದರು.

* ಮಳೆಯಿಂದ ತೊಂದರೆ

ಶುಕ್ರವಾರ ಬೆಳಗ್ಗೆ 6.30ಕ್ಕೆ ಹುಬ್ಬಳ್ಳಿಯ ಶಿರೂರ ಪಾರ್ಕ್ ಟೆಂಡರ್ ಶ್ಯೂರ್ ರಸ್ತೆಯಲ್ಲಿ ಬಾಲಕಿಯ ಸ್ಕೇಟಿಂಗ್ ಏರ್ಪಡಿಸಲಾಗಿತ್ತು. ಆಯೋಜಕರು ಎಲ್ಲ ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ಬೆಳಗ್ಗೆ ಒಂದಿಷ್ಟು ಮಳೆಯಾಗಿದ್ದರಿಂದ ಒಂದೂವರೆ ತಾಸು ವಿಳಂಬವಾಯಿತು. ಮಳೆಯಿಂದಾಗಿ ಸ್ಕಿಡ್ ಆಗಬಾರದು ಎಂದು ರಸ್ತೆ ಒರೆಸಿ ಪುನರಾರಂಭ ಮಾಡಲಾಯಿತು.

ಟೈಮರ್ ಆಗಿ ಕೆಲಸ ಮಾಡಿದ ಬಸವರಾಜ, ಮಂಜುನಾಥ, ಇತರ ಸಂಘಟಕರು ಉಪಸ್ಥಿತರಿದ್ದರು.

===================================

ಫೋಟೋ ಎಚ್ 8- ಸ್ತುತಿ ಕುಲಕರ್ಣಿ 1

ಹುಬ್ಬಳ್ಳಿ, ಸ್ಕೇಟಿಂಗ್, ಗಿನ್ನೆಸ್ ದಾಖಲೆ, ಸ್ತುತಿ ಕುಲಕರ್ಣಿ