ನ್ಯೂಸ್

ಲಿಂಗಮೂರ್ತಿ ರಾಜ್ಯಖನಿಜ ನಿಗಮದ ಹೊಸ ಅಧ್ಯಕ್ಷ

ಚಿತ್ರದುರ್ಗ: ಹೊಸದುರ್ಗ ತಾಲೂಕು ಶಿವಪುರದ ಎಸ್.ಲಿಂಗಮೂರ್ತಿ ಅವರನ್ನು ಕರ್ನಾಟಕ ರಾಜ್ಯ ಖನಿಜ ನಿಗಮದ ನೂತನ ಅಧ್ಯಕ್ಷರನ್ನಾಗಿ ನೇಮಿಸಿ ರಾಜ್ಯಸರ್ಕಾರ ಮಂಗಳವಾರ ಆದೇಶಿಸಿದೆ. ಬಿಜೆಪಿ ಸಕ್ರಿಯ ಕಾರ‌್ಯಕರ್ತರಾಗಿ ಗುರುತಿಸಿಕೊಂಡಿರುವ ಲಿಂಗಮೂರ್ತಿ ಅವರು,ಈ ಹಿಂದೆ ರಾಜ್ಯಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷರಾಗಿ ಹಾಗೂ ಜಿಲ್ಲಾ ಪ್ರಧಾನ ಕಾರ‌್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ. ಮಂಗ ಳವಾರ ನಾನಾ ನಿಗಮ ಮಂಡಳಿಗೆ ಅಧ್ಯಕ್ಷರನ್ನು ನೇಮಿಸಿ ಆದೇಶಿಸಲಾಗಿದ್ದು,ಲಿಂಗಮೂರ್ತಿ ಅವರ ನೇಮಕ ಆದೇಶ ತಡ ರಾತ್ರಿ ಬಿದ್ದಿದೆ. ಇದೀಗ ನೇಮಕವಾಗಿದ್ದೇನೆ,ನಿಗಮದ ವ್ಯಾಪ್ತಿಯಲ್ಲಿ ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಏನೆಲ್ಲ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಬಹುದೆಂಬುದನ್ನು ಅರಿತು ಅನುಷ್ಠಾನಗೊಳಿಸುವುದಾಗಿ ಅಧ್ಯಕ್ಷ ಎಸ್.ಲಿಂಗಮೂರ್ತಿ ತಿಳಿಸಿದ್ದಾರೆ. ಸರ್ಕಾರ ಈ ನೇಮಕಾತಿ ಚಿತ್ರದುರ್ಗ ಜಿಲ್ಲೆ,ಹೊಸದುರ್ಗ ತಾಲೂಕಿನ ಜನರಿಗೆ ಸಂದ ಗೌರವವೆಂದು ನಾನು ಭಾವಿಸುವುದಾಗಿ ಪತ್ರಿಕೆಗೆ ತಿಳಿಸಿದ್ದಾರೆ.