ಸಾಗರ ಸಮೀಪ ಮರಸ ಗ್ರಾಮದ ಬಳಿ ಲಾರಿ ಪಲ್ಟಿಯಾಗಿರುವುದು. 
ನ್ಯೂಸ್

ಲಾರಿ ಪಲ್ಟಿಯಾಗಿ ಚಾಲಕ ಸಾವು

ಸಾಗರ: ಹೆಂಚು ತುಂಬಿಕೊಂಡು ಹೋಗುತ್ತಿದ್ದ ಲಾರಿ ಮಂಗಳವಾರ ರಾತ್ರಿ ಪಲ್ಟಿ ಹೊಡೆದು ಚಾಲಕ ಸೊರಬ ತಾಲೂಕಿನ ಉಸ್ಮಾನ್ ಖಾನ್ (41) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸಾಗರದಿಂದ ಹೆಂಚು ತುಂಬಿಕೊಂಡು ಸೊರಬ ಕಡೆ ಹೊರಟಿದ್ದ ಲಾರಿ ಮರಸ ಗ್ರಾಮದ ಸಮೀಪ ಪಲ್ಟಿ ಹೊಡೆದಿದೆ. ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.