ನ್ಯೂಸ್

ಲಾರಿ ಕೆಳಗೆ ಮಲಗಿ ಪ್ರಾಣವನ್ನೇ ಕಳೆದುಕೊಂಡ

ಬೆಂಗಳೂರು: ಲಾರಿ ಕೆಳಗೆ ಮಲಗಿದ್ದ ವ್ಯಕ್ತಿಯನ್ನು ಗಮನಿಸದೆ ಚಾಲಕ ಚಾಲನೆ ಮಾಡಿದ ಪರಿಣಾಮ ಆತ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಮೂಲತಃ ರಾಯಚೂರಿನ ಸಿಂಧನೂರು ನಿವಾಸಿ ಬಸವರಾಜು(೩೭) ಮೃತಪಟ್ಟವರು.

ಪೀಣ್ಯ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ಮುಂಜಾನೆ ೨ ಗಂಟೆಯ ವೇಳೆ ಈ ಘಟನೆ ನಡೆದಿದೆ. ಬಸವರಾಜು ಲಗ್ಗೆರೆಯಲ್ಲಿ ವಾಸವಾಗಿದ್ದು, ಕೂಲಿ ಕೆಲಸ ಮಾಡುತ್ತಿದ್ದರು. ಬಾಲಾಜಿ ಟೋಲ್ ಬಳಿ ಲಾರಿಯನ್ನು ನಿಲ್ಲಿಸಿ ಚಾಲಕ ಟೀ ಕುಡಿಯಲು ಹೋಗಿದ್ದಾರೆ. ಆ ಸಮಯದಲ್ಲಿ ಮಳೆ ಬರುತ್ತಿದ್ದ ಕಾರಣ ಬಸವರಾಜು ಲಾರಿ ಕೆಳಗೆ ಹೋಗಿ ಅಲ್ಲೆ ಮಲಗಿದ್ದಾರೆ. ಕೆಲ ಸಮಯದ ಬಳಿಕ ಲಾರಿ ಚಾಲಕ ಬಂದಿದ್ದು, ಆ ವ್ಯಕ್ತಿ ಕೆಳಗೆ ಮಲಗಿರುವುದನ್ನು ಗಮನಿಸದೇ ಲಾರಿಯನ್ನು ಚಾಲನೆ ಮಾಡಿದ ಪರಿಣಾಮ ಲಾರಿಯ ಚಕ್ರ ತಲೆ ಮೇಲೆ ಹರಿದು ಬಸವರಾಜು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸುದ್ದಿ ತಿಳಿದು ಪೀಣ್ಯ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಅಪರಿತ ಲಾರಿ ಮತ್ತು ಚಾಲಕನಿಗಾಗಿ ಶೋಧ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.