ನ್ಯೂಸ್

ಲಾಭದಲ್ಲಿ ಹೊಸ ಅಗ್ರಹಾರ ಸಹಕಾರ ಸಂಘ

ಭೇರ್ಯ: ಹೊಸ ಅಗ್ರಹಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 10.95 ಕೋಟಿ ರೂ. ವಹಿವಾಟು ನಡೆಸಿ 5.56 ಲಕ್ಷ ರೂ.ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಗೋಪಾಲಗೌಡ ತಿಳಿಸಿದರು.


ಸಂಘದ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ 2022-23 ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.
ರೈತರಿಂದ ರೈತರಿಗೋಸ್ಕರ ಆರಂಭಿಸಿರುವ ಸಹಕಾರ ಸಂಘ, ರೈತರಿಗೆ ಸಾಲ ಸೌಲಭ್ಯಗಳನ್ನು ಒದಗಿಸುತ್ತಿದೆ, ಇದು ರೈತರ ಸಂಘ, ನಿಮ್ಮ ಸಹಕಾರ ಅಗತ್ಯ ಎಂದರು.


ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ರವಿ ಮಾತನಾಡಿ, ಸಂಘ ಆಡಳಿತ ಮಂಡಳಿಯ ಸಹಕಾರದಿಂದ ಈ ಬಾರಿ 10 ಕೋಟಿ ರೂ.ಗೂ ಹೆಚ್ಚು ವಹಿವಾಟು ನಡೆಸಿದೆ. ಸಂಘದಿಂದ ರೈತರಿಗೆ 8.63 ಕೋಟಿ ರೂ.ಸಾಲ ನೀಡಲಾಗಿದ್ದು, ಶೇ.100 ರಷ್ಟು ವಸೂಲಾತಿ ಮಾಡಿದ್ದೇವೆ ಎಂದು ತಿಳಿಸಿದರು.
2023-24 ಸಾಲಿನಲ್ಲಿ 148 ಸದಸ್ಯರಿಗೆ 2.51 ಕೋಟಿ ರೂ.ಸಾಲ ವಿತರಣೆ ಮಾಡಲಾಗಿದ್ದು, ಇಬ್ಬರು ಸದಸ್ಯರಿಗೆ ತಲಾ 7 ಲಕ್ಷ ರೂ.ಟ್ರಾೃಕ್ಟರ್ ಸಾಲ ಮಂಜೂರಾಗಿದೆ. ಜಿಲ್ಲಾ ಬ್ಯಾಂಕ್‌ನಲ್ಲಿ 42 ಲಕ್ಷ ರೂ.ರೇವಣಿ ಇಡಲಾಗಿದ್ದು, ಸ್ತ್ರೀ ಶಕ್ತಿ ಮಹಿಳಾ 7 ಸಂಘಗಳಿಗೆ 67 ಲಕ್ಷ ರೂ.ಸಾಲ ನೀಡಲಾಗಿದೆ. ಪಡಿತರ ವಿತರಣೆ, ರಸಗೊಬ್ಬರ ಮಾರಾಟ ಉತ್ತಮವಾಗಿ ನಿರ್ವಹಣೆ ಮಾಡಲಾಗಿದ್ದು, ಮುಂದಿನ ಸಾಲಿನಿಂದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ.85 ಅಂಕ ಪಡೆದ ಷೇರುದಾರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಮೂವರು ಪ್ರಗತಿಪರ ರೈತರನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.


ಸಂಘದ ಉಪಾಧ್ಯಕ್ಷ ಚಂದ್ರಶೇಖರ್, ನಿರ್ದೇಶಕರಾದ ಚಂದ್ರೇಗೌಡ, ಎಚ್.ಕೆ.ಓಬೇಗೌಡ, ಡಿ.ಎಸ್.ಯೋಗೇಶ್, ರಾಮೇಗೌಡ, ಎಚ್.ಎಸ್.ಗೋಪಾಲ, ಸ್ವಾಮೀಗೌಡ, ಎಂ.ಜೆ.ಮಂಜೇಗೌಡ, ಸೋಮನಾಯಕ, ಶಾರದಮ್ಮ, ನಾಗಮ್ಮ, ಎಂಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಎಂ.ಸತೀಶ್, ಸಂಘದ ಸಿಬ್ಬಂದಿ ದೊರೆಸ್ವಾಮಿ, ಎಚ್.ಆರ್.ಹರ್ಷಿತಾ, ಮನೋಜ್ ಇದ್ದರು.