ವಿಜಯವಾಣಿ ಸುದ್ದಿಜಾಲ ಕೋಲಾರ
ಲಕ್ಷ್ಮೀಪತಿ ಕೋಲಾರ ಈ ನೆಲದ ನುಡಿಕಾರ,ಕಲೆ, ನಾಟಕಕಾರ ಸಂಸ್ಕೃತಿಯ ಚಿಂತಕನಾಗಿ ಚಳವಳಿಗಳ ಜೀವಸೆಲೆಯ ಪ್ರಜ್ಞೆಯಾಗಿದ್ದರೆಂದು ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ತಿಳಿಸಿದರು.
ನಗರದ ಟಿ.ಚನ್ನಯ್ಯ ರಂಗಮAದಿರದಲ್ಲಿ ಭಾನುವಾರ ಸಾರಂಗರAಗ, ಆದಿಮ, ಕಸಾಪ ಹಾಗೂ ಜನವಾದಿ ಮಹಿಳಾ ಸಂಘಟನೆ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಚಳವಳಿಗಳ ಸಂಗಾತಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಲಕ್ಷ್ಮೀಪತಿ ಕೋಲಾರ ಅವರ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ದಲಿತ ಚಳವಳಿಯ ತಾಯಗರ್ಭದ ಆಶಯಗಳ ವಕ್ರೀಭವನದಲ್ಲಿ ಮೂಡಿ ಬಂದಿರುವ ಕಾಮನಬಿಲ್ಲಿನಂತ ಕಂಗೊಳಿಸುತ್ತಿರುವ ಲಕ್ಷ್ಮೀಪತಿ ಅವರ ಕುರಿತು ಹೆಮ್ಮೆ ಪಡಲು ಅನೇಕ ಕಾರಣಗಳಿವೆ, ಒಟ್ಟಾರೆಯಾಗಿ ಶ್ರೇಷ್ಟ ವಿದ್ವಾಂಸ ಹಾಗೂ ಸಂಶೋಧನಾಕಾರ ಎಂದು ವಿವರಿಸಿದರು.
ಲಕ್ಷ್ಮೀಪತಿ ಕೋಲಾರ ಅವರಿಂದ ಸಾಮಾಜಿಕ ನ್ಯಾಯದ ಹೋರಾಟಕ್ಕೆ ಬರಹ ನುಡಿ ರೂಪದ ಸ್ಪರ್ಶ ಸಿಕ್ಕಿದೆ, ಪತ್ರಕರ್ತರಾಗಿ ಅವರು ವಿವಿಧ ಪತ್ರಿಕೆಗಳಲ್ಲಿ ಬರೆದಿರುವ ಬರಹಗಳು ಸಾಂಸ್ಕೃತಿಕ ಆಕರಗಳಾಗಿವೆ. ಇತಿಹಾಸದ ಕಪ್ಪು ಕಂದರದಲ್ಲಿ ಸಂಶೋಧನೆ ನಂತರ ಬರೆದಿರುವ ಜನಾಂಗೀಯ ಬರಹಗಳು ಅವರನ್ನು ಶ್ರೇಷ್ಠ ವಿದ್ವಾಂಸರನ್ನಾಗಿಸಿದೆ. ಅವರ ಸಂಶೋಧನೆಯಿAದ ತಾವು ಕಲಿತು ಸಿಂದ್ ಮಾದಿಗರ ಸಂಸ್ಕೃತಿ ಕುರಿತು ಕೃತಿ ರಚಿಸಿದೆ ಎಂದು ಸ್ಮರಿಸಿಕೊಂಡರು.
ತಾವಿಬ್ಬರು ಚಳವಳಿಯ ಸಂಗಾತಿಗಳಾದರೂ ಒಂದೇ ದಿಕ್ಕಿನ ಪಯಣಿಗರಾಗಿರಲಿಲ್ಲ, ತಾವು ಕಣ್ಣಳತೆಗೆ ಧಕ್ಕುವುದಕ್ಕೆ ಸ್ಪಂದಿಸಿದರೆ ಲಕ್ಷ್ಮೀಪತಿ ಕೋಲಾರ ಗತದ ಗಟ್ಟಿ ಪಾಯದ ಮೇಲೆ ಬರವಣಿಗೆ ನಡೆಸಿದರು, ತಮಗಿಂತಲೂ ಹೆಚ್ಚು ಅಸ್ಪೃಶ್ಯತೆ ಲೋಕಕ್ಕೆ ಹತ್ತಿರವಾಗಿದ್ದರೆಂದರು.
ಆದಿಮ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ಎನ್.ಮುನಿಸ್ವಾಮಿ ಮಾತನಾಡಿ, ಮಾನವತಾ ವೇದಿಕೆ ದಲಿತ ಚಳವಳಿಯ ಎಲ್ಲಾ ಸ್ತರಗಳಲ್ಲಿ ಲಕ್ಷ್ಮೀಪತಿ ಕೋಲಾರದಲ್ಲಿ ಪಾಲ್ಗೊಂಡು ಸ್ಪೂರ್ತಿ ನೀಡುತ್ತಿದ್ದರು, ಅಸಮಾನತೆಯ ವಿರುದ್ಧ ತೀವ್ರಗತಿಯ ಹೋರಾಟ ನಡೆಸಿದರೂ ವ್ಯಯಕ್ತಿಕವಾಗಿ ಯಾರನ್ನೂ ನೋಯಿಸಿದ ಅಜಾತ ಶತ್ರುವಾಗಿದ್ದರೆಂದರು. ದಲಿತ ಚಳವಳಿಯ ಮಾರ್ಗದರ್ಶಕರಾಗಿದ್ದರು. ದಲಿತ, ಅಹಿಂದ ಹಾಗೂ ಭಾಷಾ ಸಾಹಿತ್ಯದ ಕ್ಷೇತ್ರಗಳಲ್ಲಿ ಅಪಾರ ಸಾಧನೆ ಮಾಡಿದ್ದಾರೆ, ಇವರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡುವ ಮೂಲಕ ಸರ್ಕಾರಕ್ಕೆ ಗೌರವ ದೊರೆತಿದೆ ಎಂದರು.
ಇದೇ ಸಂದರ್ಭದಲ್ಲಿ ಲಕ್ಷ್ಮೀಪತಿ ಕೋಲಾರ ಚಿತ್ರಕತೆ ಬರೆದು ನಿರ್ದೇಶಿಸಿರುವ ಪದ್ಮಾಲಯ ನಾಗರಾಜ್ ಅವರ ಅಚಲನಡೆ ಕುರಿತ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು.
ಜಾನಪದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್, ಡಿ.ಆರ್.ರಾಜಪ್ಪ, ಮಾಲೂರು ಆನಂದ್ ಮತ್ತು ವಿವಿಧ ಜಾನಪದ ಗಾಯಕರಿಂದ ಅಂಬೇಡ್ಕರ್ ಗೀತೆಗಳು ಹಾಗೂ ಕ್ರಾಂತಿಗೀತೆಗಳ ಗಾಯನ ನೆರವೇರಿತು. ಲಕ್ಷ್ಮೀಪತಿ ಕೋಲಾರ ಅವರೊಂದಿಗೆ ಸಂವಾದ, ಅವರ ಸಾಧನೆ ಕುರಿತು ವಿಚಾರ ಸಂಕಿರಣ ನಡೆಯಿತು.
ಕಾರ್ಯಕ್ರಮದಲ್ಲಿ ದಲಿತ ಹಿರಿಯ ಮುಖಂಡ ಸಿ.ಎ.ಮುನಿಯಪ್ಪ, ಸಾಹಿತಿ ವಿಮರ್ಶಕ ಪ್ರೋ.ಚಂದ್ರಶೇಖರ್ ನಂಗಲಿ, ಅ.ಮ.ರಾಮಚಂದ್ರ, ಜೆ.ಜೆ.ನಾಗರಾಜ್, ಜನವಾದಿ ಮಹಿಳಾ ಸಂಘಟನೆಯ ಮುಂಖAಡ ಗೀತಾ ಇದ್ದರು.
ಚಿತ್ರ ೧೯ ಕೆ.ಎಲ್.ಆರ್. ೦೩ : ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಾಹಿತಿ ಮತ್ತು ವಿಮರ್ಶಕ ಲಕ್ಷಿö್ಮÃಪತಿ ಕೋಲಾರ. ರವರನ್ನು ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಅಭಿನಂದಿಸುತ್ತಿರುವುದು, ಗಾಯಕ ಪಿಚ್ಚಹಳ್ಳಿ ಶ್ರೀನಿವಾಸ್, ಮಹಿಳಾ ಸಂಘಟನೆ ಮುಖಂಡ ಗೀತಾ ಇದ್ದರು.