ಕಂಪಲಾಪುರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ರೋಟರಿ ಕ್ಲಬ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರಕಾಶ್‌ಕಾರಂತ್, ಕೆ.ಎ.ಸತ್ಯನಾರಾಯಯಣ್, ಕೃಷ್ಣಕುಮಾರ್, ನಾರಾಯಣರಾವ್ ಇತರರು ಇದ್ದರು. 
ನ್ಯೂಸ್

ರೋಟರಿಯಿಂದ ಸರ್ಕಾರಿ ಶಾಲೆಗಳ ದತ್ತು

ಕಂಪಲಾಪುರ: ಸರ್ಕಾರಿ ಶಾಲೆಗಳ ಬಗ್ಗೆ ಜನರಲ್ಲಿ ತಾತ್ಸಾರ ಭಾವನೆ ಇರುವ ಸಂದರ್ಭದಲ್ಲಿ ದುಸ್ಥಿತಿಯಲ್ಲಿರುವ ಸರ್ಕಾರಿ ಶಾಲೆಗಳನ್ನು ರೋಟರಿ ಸಂಸ್ಥೆ ದತ್ತು ಪಡೆದು ಅಭಿವೃದ್ಧಿಪಡಿಸುತ್ತಿದೆ ಎಂದು ರೋಟರಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ತಿಳಿಸಿದರು.
ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯನ್ನು ದತ್ತು ಪಡೆದಿರುವ ಪಿರಿಯಾಪಟ್ಟಣ ರೋಟರಿ ಕ್ಲಬ್ ವತಿಯಿಂದ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿದ್ಯೆಗೆ ಮಹತ್ವ ಕಲ್ಪಿಸುವ ಉದ್ದೇಶದಿಂದ ಶಾಲೆಗಳನ್ನು ದತ್ತು ಪಡೆಯಲಾಗುತ್ತಿದೆ. ಇದು ಮುಂದಿನ ಪೀಳಿಗೆಗೆ ಮಾದರಿಯಾಗಬೇಕು. ಇಂತಹ ಅಭಿವೃದ್ಧಿ ಕೆಲಸಗಳಿಗೆ ಸರ್ಕಾರದ ನೆರವನ್ನು ಕಾಯದೆ ಸಂಘ, ಸಂಸ್ಥೆಗಳು ತೊಡಗಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಪಿರಿಯಾಪಟ್ಟಣ ರೋಟರಿ ಕ್ಲಬ್ ಅಧ್ಯಕ್ಷ ಕೆ.ಎ.ಸತ್ಯನಾರಾಯಯಣ್ 80 ಸಾವಿರ ರೂ. ಮೊತ್ತದ ಚೆಕ್‌ನ್ನು ಶಾಲೆಯ ಮುಖ್ಯಶಿಕ್ಷಕ ಕೃಷ್ಣಕುಮಾರ್‌ಗೆ ಹಸ್ತಾಂತರಿಸಿದರು. ದಾನಿಗಳಾದ ನಾರಾಯಣರಾವ್, ಕೆ.ಎಂ.ನಾಗರಾಜ್, ರವಿ, ವಕೀಲ ಬಿ.ವಿ.ಜವರೇಗೌಡ , ರೋಟರಿ ಪದಾಧಿಕಾರಿಗಳಾದ ನರಗುಂದ್, ನಾರಾಯಣ ಹೆಗ್ಡೆ , ಚಂದ್ರು, ಬಸವೇಗೌಡ , ಕೆ.ಎಂ.ವಿನಯ್‌ಶೇಖರ್, ನಟರಾಜ್, ಉದ್ಯಮಿಗಳಾದ ಅಣ್ಣಪ್ಪ, ರಾಜೇಗೌಡ, ಸಿಆರ್‌ಪಿ ಸುದರ್ಶನ್, ಗಣೇಶ್‌ಕುಮಾರ್, ಬಿಆರ್‌ಪಿ ರವೀಂದ್ರ , ಶಿಕ್ಷಕ ದಯಾನಂದ್ ಮತ್ತಿತರರು ಹಾಜರಿದ್ದರು.