ನ್ಯೂಸ್

ರೈಲ್ವೆ ವ್ಯವಸ್ಥಾಪಕರಾಗಿ ಮುದಿತ್ ಮಿತ್ತಲ್ ಅಧಿಕಾರ ಸ್ಪೀಕಾರ

ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾಗಿ ಮುದಿತ್ ಮಿತ್ತಲ್ ಅವರು ಸೋಮವಾರ ಅಧಿಕಾರ ಸ್ಪೀಕರಿಸಿದರು.

ಮೂರು ವರ್ಷಗಳಿಂದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದ್ದ ಶಿಲ್ಪಿ ಅಗರ್‌ವಾಲ್ ಅಧಿಕಾರ ಹಸ್ತಾಂತರಿಸಿದರು.

ಮಿತ್ತಲ್ 1996ರ ಪರೀಕ್ಷಾ ತಂಡದ ಐಆರ್‌ಎಎಸ್ ಸೇವೆಯ ಅಧಿಕಾರಿಯಾಗಿದ್ದಾರೆ. ಅವರು ಪ್ರತಿಷ್ಠಿತ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐ.ಐ.ಟಿ.), ರೂರ್ಕಿಯಿಂದ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಇಂಜಿನಿಯರಿಂಗ್ ಪದವೀಧರರಾಗಿದ್ದು, ಸಿಂಗಾಪುರದ ರಾಷ್ಟ್ರೀಯ ವಿಶ್ವವಿದ್ಯಾಲಯದ ಲೀ ಕ್ವಾನ್ ಯೂ ಸಾರ್ವಜನಿಕ ನೀತಿ ಶಾಲೆಯಿಂದ ಸಾರ್ವಜನಿಕ ಆಡಳಿತದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಅವರು ಭಾರತೀಯ ರೈಲ್ವೆಯಲ್ಲಿ ದೇಶಾದ್ಯಂತ ಹಲವಾರು ಪ್ರಮುಖ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಹುಬ್ಬಳ್ಳಿ, ಮುಂಬೈ, ಭೋಪಾಲ್, ಕೋಲ್ಕತ್ತ, ಗೋರಖ್‌ಪುರ್ ಮತ್ತು ನವದೆಹಲಿ ಸೇರಿದಂತೆ ಅನೇಕ ನಗರಗಳಲ್ಲಿ ಕೆಲಸ ಮಾಡಿದ್ದಾರೆ.