ಅರಸೀಕೆರೆ: ತಾಲೂಕಿನ ತೋಪೇಗೌಡನಹಳ್ಳಿ ಬಳಿ ರೈಲ್ವೆ ಇಲಾಖೆ ವತಿಯಿಂದ ನಿರ್ಮಿಸಿರುವ ಕೆಳ ಸೇತುವೆ ಅವೈಜ್ಞಾನಿಕವಾಗಿದೆ ಎನ್ನುವ ದೂರಿನ ಹಿನ್ನಲೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶೆ ಜಿ.ಅನಿತಾ ಇತ್ತೀಚೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಅಭಿವೃದ್ಧಿ ಕೆಲಸಗಳ ಅನುಷ್ಠಾನದ ವಿಷಯದಲ್ಲಿ ಅಧಿಕಾರಿಗಳು ನಾಗರಿಕರಿಗೆ ತೊಂದರೆಯಾಗದಂತೆೆ ನೋಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಹರಿಹರಪುರ, ತೋಪೇಗೌಡನಹಳ್ಳಿ ಮತ್ತು ಚಲುವನಹಳ್ಳಿ ರೈತರ ಮನವಿಗೆ ಸ್ಪಂದಿಸಿದ ನ್ಯಾಯಾಧೀಶರು ತಕ್ಷಣವೇ ಮೈಸೂರು ರೈಲ್ವೆ ವಿಭಾಗದ ಸ್ಥಳಿಯ ಅಭಿಯಂತರ ಅಭಿಲಾಷ್‌ರೊಂದಿಗೆ ಮಾತನಾಡಿ, ಸಮಸ್ಯೆ ಕೂಡಲೇ ಸರಿಪಡಿಸಬೇಕು. ಇಂತಹ ಕಾಮಗಾರಿಗಳನ್ನು ಮಾಡಿದ ಸಂಬಂಧಿಸಿದವರಿಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚನೆ ನೀಡಿದರು.
ನ್ಯಾಯಾಧೀಶ ಹೆಚ್.ಆರ್.ರಮ್ಯಾ, ರಫೀಕ್ ಆಹಮ್ಮದ್ ಹಿರಿಯೂರು ಗ್ರಾಮ ಪಂಚಾಯಿತಿ ಪಿಡಿಓ ವೇದಾವತಿ,ವಕೀಲರ ಸಂಘದ ತಾಲೂಕುಅಧ್ಯಕ್ಷ ಬಿ.ಜಿ ರೂಪರಾಜ್, ಕಾರ್ಯದರ್ಶಿ ಜಿ.ಕೃಷ್ಣಕುಮಾರ್, ವಕೀಲರಾದ ಸಿದ್ದಮಲಪ್ಪ, ಗ್ರಾಮಸ್ಥರಾದ ಸಿ.ಟಿ ಲಿಂಗಪ್ಪ, ಸಿದ್ದೇಗೌಡ, ಕೃಷ್ಣಮೂರ್ತಿ, ಕರಿಗೌಡ, ದಾಸೇಗೌಡ, ಕಾರ್ಯಕ್ರಮ ಸಂಯೋಜಕ ಮುದ್ದುರಾಜ್, ರೈಲ್ವೇ ಅಧಿಕಾರಿ ಬಾಬು, ಗ್ರಾಮಸ್ಥರು ಉಪಸ್ಥಿತರಿದ್ದರು.