ವಿಜಯವಾಣಿ ಸುದ್ದಿಜಾಲ ಕೋಲಾರ
ಡಿ.ಸಿ.ಸಿ ಬ್ಯಾಂಕ್ ವತಿಯಿಂದ ರೈತರು ಮತ್ತು ಸ್ತಿçà ಶಕ್ತಿ ಸಂಘಗಳ ಸಾಲ ವಸೂಲಾತಿಗಾಗಿ ನೀಡುತ್ತಿರುವ ನೋಟಿಸ್ ಆದೇಶವನ್ನು ವಾಪಸ್ ಪಡೆದು ಸಾಲ ಮರು ಪಾವತಿ ಮಾಡಲು ಸಮಯಾವಕಾಶ ನೀಡಿ ಬಡವರ ಸ್ವಾಭಿಮಾ£ವನ್ನು ಉಳಿಸುವಂತೆ ರೈತ ಸಂಘದಿAದ ಬ್ಯಾಂಕ್ ಮುಂದೆ ಶುಕ್ರವಾರ ನೋಟಿಸ್‌ಗಳನ್ನು ಹರಿದು ಬಿಸಾಡಿ, ಪ್ರತಿಭಡನೆ ನಡೆಸಿ, ಬ್ಯಾಂಕ್ ವ್ಯವಸ್ಥಾಪಕರಿಗೆ ಮನವಿ ನೀಡಿದರು.
ರೈತರ ಕೈಗೆ ಚಾಟಿ ಮತ್ತು ಮಹಿಳೆಯರ ಕೈಗೆ ಮೊಂಡು ಪೊರಕೆ ಬರುವ ಮೊದಲು ಬ್ಯಾಂಕ್ ಅಧಿಕಾರಿಗಳು ನೀಡಿರುವ ನೋಟಿಸ್ ವಾಪಸ್ ಪಡೆದು ಬಲವಂತದ ಸಾಲ ವಸೂಲಾತಿ ನಿಲ್ಲಿಸದೆ ಹೋದರೆ ಹಳ್ಳಿ ಹಳ್ಳಿಯಲ್ಲೂ ಮಹಿಳೇಯರೇ ಕಾನೂನು ಕೈಗೆತ್ತಿಕೊಂಡು ಅಧಿಕಾರಿಗಳನ್ನು ಕಂಬಗಳಿಗೆ ಕಟ್ಟಿ ಹಾಕುವ ಕಾಲ ದೂರವಿಲ್ಲ ಎಂದು ರೈತ ಸಂಘದ ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ ಡಿ.ಸಿ.ಸಿ ಬ್ಯಾಂಕ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ರಾಜ್ಯಾಂದ್ಯAತ ಖಾಸಗಿ ಮೈಕ್ರೋ ಪೈನಾನ್ಸ್ಗಳಿಂದ ಸಾಲ ಪಡೆದಿರುವ ಗ್ರಾಮೀಣ ಪ್ರದೇಶದ ರೈತರು, ಕೂಲಿಕಾರ್ಮಿಕರು, ಮಹಿಳೆಯರು ಸಾಲ ಮರು ಪಾವತಿಸಲಾಗದೆ ಪೈನಾನ್ಸ್ ಕಂಪನಿಗಳ ಕಿರುಕುಳ ತಡೆದುಕೊಳ್ಳಲಾಗದೆ ಸ್ವಾಭಿಮಾನದ ಬದುಕಿಗೆ ಅವಮಾನವಾಗುತ್ತದೆ ಎಂದು ಮನೆಗಳಿಗೆ ಬೀಗ ಹಾಕಿಕೊಂಡು ರಾತ್ರೋ ರಾತ್ರಿ ಊರುಗಳನ್ನು ಬಿಟ್ಟು ಹೋಗುತ್ತಿದ್ದಾರೆ. ಪೋಷಕರು ಮಾಡಿದ ಸಾಲ ತೀರಿಸಲು ಮಕ್ಕಳು ತನ್ನ ಕಿಡ್ನಿಗಳನ್ನು ಮಾರಾಟ ಮಾಡಲು ಅನುಮತಿಕೊಡಿ ಎಂದು ಸರ್ಕಾರವನ್ನು ಕಣ್ಣೀರಿಟ್ಟು ಬೇಡಿಕೊಳ್ಳುವ ಮನಕುಲಕುವ ಘಟನೆಗಳು ನಡೆಯುತ್ತಿದ್ದರು, ಅಧಿಕಾರಿಗಳಿಗೆ ಮಾನವೀಯತೆ ಎಂಬುದು ಮರಿಚೀಕೆ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಡವರ ಬದುಕನ್ನೇ ಸಾಲ ಬಲಿ ಪಡೆಯುತ್ತಿರುವ ಪ್ರಕರಣಗಳು ರಾಜ್ಯಾಂದ್ಯAತ ಸದ್ದು ಮಾಡುತ್ತಿದ್ದರು, ನಾವೇನೂ ಖಾಸಗಿ ಮೈಕ್ರೋ ಪೈನಾನ್ಸ್ಗಳಿಗೆ ಕಡಿಮೆ ಇಲ್ಲ ಎಂದು ಸಹಕಾರಿ ಬ್ಯಾಂಕ್ ಅಧಿಕಾರಿಗಳು ಸಾಲ ಮರು ಪಾವತಿಸುವಂತೆ ನೋಟಿಸ್ ನೀಡುವ ಮುಖಾಂತರ ನೇರವಾಗಿ ಸಾಲ ಕಟ್ಟಿ ಇಲ್ಲವೇ ನಿಮ್ಮ ಮಾನ ಹರಾಜು ಹಾಕುತ್ತೇವೆಂದು ಹೇಳುವ ಮುಖಾಂತರ ಬಡವರ ಬದುಕನ್ನು ಬಲಿ ತೆಗೆದುಕೊಳ್ಳಲು ಮುಂದಾಗಿರುವುದು ದುರಾದೃಷ್ಠಕರ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಡಿ.ಸಿ.ಸಿ ಬ್ಯಾಂಕ್‌ನಿAದ ಪಡೆದಿರುವ ಸಾಲವನ್ನು ನಿಯತ್ತಾಗಿ ಮರುಪಾವತಿ ಮಾಡುತ್ತೇವೆ. ಆದರೆ ಸಮಯಾವಕಾಶ ಬೇಕು. ಬೆಳೆ ಇಲ್ಲ, ದುಡಿಯುವ ಕೈಗೆ ಕೆಲಸವಿಲ್ಲ, ಹೈನೋದ್ಯಮದಲ್ಲಿ ಲಾಭವಿಲ್ಲ, ನಷ್ಟದಲ್ಲಿರುವ ಬಡವರ ಸ್ವಾಭಿಮಾನವನ್ನು ಡಿ.ಸಿ.ಸಿ ಬ್ಯಾಂಕ್ ಆಡಳಿತ ಮಂಡಳಿ ನೋಟಿಸ್ ನೀಡುವ ಮುಖಾಂತರ ಅಸಲಿಗೆ ಬಡ್ಡಿ, ಬಡ್ಡಿಗೆ ಚಕ್ರಬಡ್ಡಿ ಹಾಕಿ ಬಡವರ ಸ್ವಾಭಿಮಾನದ ಬದುಕನ್ನು ಬಹಿರಂಗವಾಗಿ ಕಾನೂನಿನ ಪ್ರಕಾರ ಸಹಕಾರ ಸಂಘದ ೧೯೫೯ ರ ಕಲಂ ೭೦ರಡಿಯಲ್ಲಿ ನೋಟಿಸ್ ನೀಡಿ ವಾರದೊಳಗೆ ಹಣ ನೀಡದೆ ಇದ್ದರೆ ನಿಮ್ಮ ಆಸ್ತಿ ಹರಾಜು ಆಗುತ್ತದೆ ಎಂದು ಹೇಳುತ್ತಿದ್ದಾರೆ.
ಖಾಸಗಿ ಪೈನಾನ್ಸ್ ಹಾವಳಿಯಿಂದ ನೊಂದು ಬೆಂದಿರುವ ಬಡವರ ಸ್ವಾಭಿಮಾನವನ್ನು ಅಧಿಕಾರಿಗಳೇ ನೇರವಾಗಿ ಎದೆ ಮೇಲೆ ಕಾಲಿಟ್ಟು ಹಣ ಕಟ್ಟಿ ಇಲ್ಲವೇ ನಿಮ್ಮ ಬದುಕನ್ನು ಅಂತ್ಯ ಮಾಡಿಕೊಳ್ಳಿ ಎಂಬ ಉದ್ದೇಶದಿಂದ ಬಡವರನ್ನೇ ಗುರಿಯಾಗಿಸುವ ಅಧಿಕಾರಿಗಳೇ ನಿಮಗೆ ಮಾನವಿಯತೆ ಇದ್ದರೆ ರೈತರ ಪರಿಸ್ಥಿತಿಯನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಿ ಎಂದು ಮನವಿ ಮಾಡಿದರು.
ನೊಂದ ರೈತ ಮಹಿಳೆ ಶೈಲಜ ಮಾತನಾಡಿ, ಕೋಟಿ ಕೋಟಿ ಸಾಲ ಪಡೆದಿರುವ ಜನಪ್ರತಿನಿದಿಗಳಿಗೆ ನೋಟಿಸ್ ನೀಡಲು ತಾಕತ್ತು ಇಲ್ಲದ ಅಧಿಕಾರಿಗಳೇ ಬಡವರು ಕೂಲಿ ಮಾಡುವವರ ಮೇಲೆ ತಮ್ಮ ಪ್ರತಾಪ ಏಕೆ ಎಂದು ಪ್ರಶ್ನೆ ಮಾಡಿದರು.
ಸಹಕಾರಿ ಬ್ಯಾಂಕ್‌ಗಳ ಅವ್ಯವಸ್ಥೆಯನ್ನೇ ಬಂಡವಾಳ ಮಾಡಿಕೊಂಡಿರುವ ಖಾಸಗಿ ಫೈನಾನ್ಸ್ ಕಂಪನಿಗಳವರು ಗ್ರಾಮೀಣ ಪ್ರದೇಶದ ಬಡವರನ್ನು ನಯವಂಚಿತ ಮಾತುಗಳಿಂದ ಮರಳು ಮಾಡಿ ಕಡಿಮೆ ಬಡ್ಡಿದರದಲ್ಲಿ ಶಿಕ್ಷಣ, ಕೃಷಿ, ನೀವೇಶನ, ಮದುವೆ ಮತ್ತಿತರ ಕಾರ್ಯಗಳಿಗೆ ಸಾಲಗಳನ್ನು ಕಂತುಗಳ ರೂಪದಲ್ಲಿ ನೀಡುತ್ತೇವೆಂದು ಬಡವರನ್ನು ವಂಚಿಸಿ ಸಾಲ ಕೊಟ್ಟ ನಂತರ ರಕ್ತ ಹೀರುವ ತಿಗಣೆಗಳಂತೆ ನಡೆದುಕೊಳ್ಳುತ್ತಿದ್ದಾರೆ. ಮೀಟರ್ ಬಡ್ಡಿ ದಂದೆ ನಡೆಸುವ ಖಾಸಗಿ ಪೈನಾನ್ಸ್ಗಳ ಜೊತೆ ಡಿ.ಸಿ.ಸಿ ಬ್ಯಾಂಕ್ ಅಧಿಕಾರಿಗಳು ಶಾಮೀಲು ಆಗಿದ್ದೀರಿಯೇ ಎಂದು ಅನುಮಾನ ವ್ಯಕ್ತವಾಗುತ್ತದೆ ಎಂದು ಆರೋಪಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಬ್ಯಾಂಕ್ ವ್ಯವಸ್ಥಾಪಕ ಕಲೀಂವುಲ್ಲಾ ಮೇಲಾಧಿಕಾರಿಗಳ ಆದೇಶದಂತೆ ರೈತರಿಗೆ ಮಹಿಳೆಯರಿಗೆ ನೋಟಿಸ್ ನೀಡುತ್ತಿದ್ದೇವೆ. ಅದನ್ನು ಬಿಟ್ಟು ಯಾವುದೇ ಉದ್ದೇಶದಿಂದ ರೈತರಿಗೆ ತೊಂದರೆ ಕೊಡುತ್ತಿಲ್ಲ. ಮೇಲಾಧಿಕಾರಿಗಳು ನಿಲ್ಲಿಸುವಂತೆ ಆದೇಶ ಮಾಡಿದರೆ ಕೂಡಲೇ ಕೊಟ್ಟಿರುವ ನೋಟಿಸ್‌ಗಳನ್ನು ವಾಪಸ್ ಪಡೆಯುತ್ತೇವೆಂದು ಭರವಸೆ ನೀಡಿದರು.
ಹೋರಾಟದಲ್ಲಿ ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ, ಈಕಂಬಳ್ಳಿ ಮಂಜುನಾಥ್, ಶಿವಾರೆಡ್ಡಿ, ತಿಮ್ಮಣ್ಣ, ಸುಪ್ರೀಂ ಚಲ, ಹೆಬ್ಬಣಿ ಆನಂದ್‌ರೆಡ್ಡಿ, ಮರಗಲ್ ಶ್ರೀನಿವಾಸ್, ಬಂಗವಾದಿ ನಾಗರಾಜ್‌ಗೌಡ, ರ‍್ನಹಳ್ಳಿ ಆಂಜಿನಪ್ಪ, ಯಲ್ಲಪ್ಪ, ಹರೀಶ್, ಅಪ್ಪೋಜಿರಾವ್, ಲಕ್ಷö??ಣ್, ರತ್ನಮ್ಮ, ಶಶಿಕಲಾ, ರಾಧ, ಸುಗುಣ, ಗೌರಮ್ಮ, ಮುನಿಯಮ್ಮ, ಚೌಡಮ್ಮ, ಮುಂತಾದವರಿದ್ದರು.
ಚಿತ್ರ ೨೪ ಕೆ.ಎಲ್.ಆರ್. ೦೧ : ಸಾಲ ಮರುಪಾವತಿ ಮಾಡುವಂತೆ ನೀಡಿರುವ ನೋಟೀಸ್‌ಗಳನ್ನು ವಾಪಸ್ ಪಡೆಯಬೇಕು ಎಂದು ರೈತ ಸಂಘದ ಮಹಿಳಾ ಘಟಕದಿಂದ ಡಿ.ಸಿ.ಸಿ.ಬ್ಯಾಂಕ್ ಮುಂಭಾಗ ನೋಟೀಸ್‌ಗಳನ್ನು ಹರಿದು ಬ್ಯಾಂಕಿನ ವ್ಯವಸ್ಥಾಪಕರು ಕಲೀಂವುಲ್ಲಾ ರವರಿಗೆ ಮನವಿ ನೀಡುತ್ತಿರುವುದು.