ಜಿಲ್ಲಾ ಕೃಷಿ ತರಬೇತಿ ಕೇಂದ್ರ, ನಾಗನಹಳ್ಳಿ, ಮೈಸೂರು ಇಲ್ಲಿ ಜುಲೈ 23 ರಂದು “ರೈತರು ಮತ್ತು ಕೃಷಿ ಪಂಪು/ ಉಪಕರಣಗಳ ತಂತ್ರಜ್ಞರಿಗೆ ಬಿಇಇ, ಸ್ಟಾರ್ ಲೇಬಲ್‌ವಳ್ಳ ಇಂಧನ ದಕ್ಷ ಪಂಪ್‌ಸೆಟ್ ಮತ್ತು ನೀರಿನ ಸಂರಕ್ಷಣೆ” ಎಂಬ ವಿಷಯದ ಬಗ್ಗೆ ರೈತರು ಮತ್ತು ಕೃಷಿ ಪಂಪು/ ಉಪಕರಣಗಳ ತಂತ್ರಜ್ಞರಿಗೆ ಒಂದು ದಿನದ ತರಬೇತಿ ಮತ್ತು ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ತರಬೇತಿಯಲ್ಲಿ ಭಾಗವಹಿಸುವ ಶಿಬಿರಾರ್ಥಿಗಳಿಗೆ ಊಟದ ವ್ಯವಸ್ಥೆಯನ್ನು ಒದಗಿಸಲಾಗುವುದು. ಆಸ್ತಕರು ತಮ್ಮ ಹೆಸರನ್ನು ಈ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕರು ದೂ.ಸಂ: 8277933116 ಗೆ ಕರೆಮಾಡಿ ತಮ್ಮ ಹೆಸರುಗಳನ್ನು ನೋಂದಾಯಿಸತಕ್ಕದ್ದು, ಮೈಸೂರು ಜಿಲ್ಲೆಯ 80 ರೈತರು/ ಕೃಷಿ ಪಂಪು/ ಉಪಕರಣಗಳ ತಂತ್ರಜ್ಞರಿಗೆ ಮಾತ್ರ ಅವಕಾಶವಿದ್ದು, ಮೊದಲು ನೋಂದಣಿ ಮಾಡಿದವರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಮೈಸೂರು ನಾಗನಹಳ್ಳಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಉಪ ಕೃಷಿ ನಿರ್ದೇಶಕರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.