ನ್ಯೂಸ್

ರೈತರಿಗೆ ಬಿತ್ತನೆ ಬೀಜ ವಿತರಣೆ


ಹುಲ್ಲಹಳ್ಳಿ: ರೈತ ಸಂಪರ್ಕ ಕೇಂದ್ರದಲ್ಲಿ ದೊರಕುವ ಬೀತನೆ ಬೀಜಗಳನ್ನು ರೈತರು ಪಡೆದು ಸದುಪಯೋಗಪಡಿಸಿಕೊಳ್ಳಬೇಕು ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.


ಗ್ರಾಮದ ರೈತ ಸಂಪರ್ಕ ಕೇಂದ್ರದಲ್ಲಿ ಇತ್ತೀಚೆಗೆ ರೈತರಿಗೆ ಬೀತನೆ ಬೀಜಗಳನ್ನು ವಿತರಣೆ ಮಾಡಿ ಮಾತನಾಡಿದ ಅವರು, ಉತ್ತಮ ಮಳೆಯಾಗಿರುವುದರಿಂದ ಕೃಷಿ ಚಟುವಟಿಕೆಗೆ ನೆರವಾಗಿದೆ. ಹೀಗಾಗಿ ಬೀತನೆ ಬೀಜಗಳನ್ನು ಸಕಾಲಕ್ಕೆ ವಿತರಿಸಲಾಗುತ್ತಿದ್ದು, ರೈತರು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಸಲಹೆ ನೀಡಿದರು.


ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಬ್ಲಾಕ್ ಅಧ್ಯಕ್ಷರಾದ ಕೆ.ಜಿ.ಮಹೇಶ್, ಶ್ರೀಕಂಠನಾಯಕ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಕೆಂಡಗಣ್ಣಪ್ಪ, ಕೆ.ಮಾದಪ್ಪ, ಸಂಗರಾಜು, ಜಯರಾಂ, ಮಲ್ಲೇಶ್, ದೊರೆಸ್ವಾಮಿನಾಯಕ, ಗೋವಿಂದರಾಜು, ಬಸವಣ್ಣ, ತಾಲೂಕು ಕೃಷಿ ಅಧಿಕಾರಿ ದೀಪಕ್, ಗಿರೀಶ್ ಇತರರು ಇದ್ದರು.