ಲಕ್ಕೂರು: ಆದಾಯ ತೆರಿಗೆ ಪಾವತಿಸುತ್ತಿರುವ ರೈತರು ಪಿಎಂ ಕಿಸಾನ್ ಸನ್ಮಾನ್ ಯೋಜನೆಯಡಿ ಪಡೆದಿರುವ ಹಣವನ್ನು ಸರ್ಕಾರಕ್ಕೆ ಹಿಂತಿರುಗಿಸಬೇಕೆಂದು ಕೃಷಿ ಇಲಾಖೆ ರೈತರಿಗೆ ನೋಟಿಸ್ ಜಾರಿಗೊಳಿಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಹೋಬಳಿ ರೈತರು ಆರೋಪಿಸಿದ್ದಾರೆ.
ರೈತರು ವ್ಯವಸಾಯ ಅಭಿವೃದ್ಧಿಗೆ, ಗೃಹ ನಿರ್ಮಾಣ, ಮಕ್ಕಳ ವಿದ್ಯಾಭ್ಯಾಸ, ಟ್ರ್ಯಾಕ್ಟರ್ ಖರೀದಿ, ಗ್ರೀನ್‌ಗೌಸ್‌ಗೆ ಸಾಲ ಪಡೆಯಲು ಅರ್ಜಿ ಸಲ್ಲಿಸಿದ್ದು, ಬ್ಯಾಂಕ್ ಹಾಗೂ ಇತರ ಹಣಕಾಸು ಸಂಸ್ಥೆಗಳಲ್ಲಿ ಸಾಲ ನೀಡಬೇಕೆಂದರೆ ಆದಾಯ ತೆರಿಗೆ ಹಾಗೂ ಇತರ ದಾಖಲೆ ಕೇಳುತ್ತಾರೆ. ಸಾಲ ಪಡೆಯುವುದಕ್ಕಾಗಿ ಆದಾಯ ತೆರಿಗೆಯನ್ನು ೈಲ್ ಮಾಡುವ ಮೂಲಕ ಸಾಲ ಪಡೆದಿರುವ ರೈತರಿಗೆ ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಅನ್ವಯಿಸುವುದಿಲ್ಲ ಎಂದು ಸರ್ಕಾರದಿಂದ ವಿತರಿಸಿರುವ ಸಹಾಯಧನ ಹಿಂದಿರುಗಿಸುವಂತೆ ರೈತ ಸಂಪರ್ಕ ಕೇಂದ್ರದ ಮೂಲಕ ಹೋಬಳಿ ರೈತರಿಗೆ ನೋಟಿಸ್ ನೀಡಲಾಗುತ್ತಿದೆ.
ಈಗಾಗಲೆ ಬ್ಯಾಂಕಿನಲ್ಲಿ ಮಾಡಿರುವ ಸಾಲ ತೀರಿಸಲು ಆಗುತ್ತಿಲ್ಲ, ಆದಾಯ ತೆರಿಗೆ ನಿರ್ವಹಣೆ ಮಾಡಿಲ್ಲ. ಆದರೂ ನೋಟಿಸ್ ನೀಡಿರುವುದು ಎಷ್ಟು ಸರಿ ಎಂದು ಸ್ಥಳೀಯ ರೈತರು ಕೃಷಿ ಇಲಾಖೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೇಲಿನ ಅಧಿಕಾರಿಗಳ ಆದೇಶದನ್ವಯ ಆದಾಯ ತೆರಿಗೆ ೈಲ್ ಮಾಡಿರುವ ರೈತರಿಗೆ ನಾವು ನೋಟಿಸ್ ಜಾರಿ ಮಾಡುತ್ತಿದ್ದೇವೆ. ಇದರ ಬಗ್ಗೆ ನಮಗೆ ಹೆಚ್ಚಿನ ಮಾಹಿತಿ ಇಲ್ಲ. ಎಂ.ಪೃಥ್ವಿ, ಕೃಷಿ ಅಧಿಕಾರಿ ಲಕ್ಕೂರು ಕಿಸಾನ್ ಸಮ್ಮಾನ್ ಯೋಜನೆಯಡಿ ಎಲ್ಲ ರೈತರ ಖಾತೆಗೆ 2 ಸಾವಿರ ರೂ. ಪಾವತಿಯಾಗಿದೆ. ಆದರೆ ಸಹಾಯಧನ ಪಾವತಿಸುವ ಮೊದಲೇ ತೆರಿಗೆ ಪಾವತಿ ಮಾಡುತ್ತಿರುವವರ ಖಾತೆಗೆ ಹಣ ತಡೆಹಿಡಿಯಬೇಕಿತ್ತು. ಈಗ ಖಾತೆಗೆ ಹಾಕಿ ಮತ್ತೆ ಹಿಂತಿರುಗಿಸಿ ಎಂದು ಹೇಳುತ್ತಿರುವುದು ಸರಿಯಲ್ಲ. ಎಲ್.ಪಿ.ಪ್ರಭಾಕರ್, ಲಕ್ಕೂರು ನಿವಾಸಿ ಯಾರು ಎಷ್ಟು ವರ್ಷಗಳಿಂದ ಸಾಲದಲ್ಲಿ ಇದ್ದಾರೆ, ಯಾಕಾಗಿ ಸಾಲ ಮಾಡಿದ್ದಾರೆ ಎನ್ನುವ ಮಾಹಿತಿ ತಿಳಿದು ನೋಟಿಸ್ ನೀಡಿದರೆ ಉತ್ತಮ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡಬೇಕಾಗುತ್ತದೆ. ಜಿ.ಕೆಂಪಣ್ಣ, ಅಧ್ಯಕ್ಷ, ಕುರಿ ಮತ್ತು ಮೇಕೆ ಸಾಕಾಣಿಕೆ ಹಾಗೂ ಉಣ್ಣೆ ಉತ್ಪಾದಕರ ಸಹಕಾರ ಸಂಘ, ಆಲಂಬಾಡಿ