ಬಸವಕಲ್ಯಾಣ: ಹೆಸರು ಖರೀದಿ ಆರಂಭಿಸಿದ್ದು, ಖರೀದಿ ಕೇಂದ್ರಗಳಲ್ಲಿ ಉದ್ದು, ಸೋಯಾಬಿನ್ ಕಟಾವು ಪೂರ್ವದಲ್ಲಿ ಖರೀದಿ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಘಟಕ ಒತ್ತಾಯಿಸಿದೆ.
ನಗರದ ರೈತ ಭವನದಲ್ಲಿ ಬುಧವಾರ ಆಯೋಜಿಸಿದ್ದ ರೈತ ಸಂಘದ ತಾಲೂಕು ಘಟಕದ ಮಾಸಿಕ ಸಭೆಯಲ್ಲಿ ರೈತರ ಸಮಸ್ಯೆಗಳ ಕುರಿತು ಚರ್ಚಿಸಿ ಪರಿಹಾರ ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲು ತೀರ್ಮಾನಿಸಲಾಯಿತು.
ಸೋಯಾಬಿನ್ ಬೆಳೆ ದರ 1 ಕ್ವಿಂಟಾಲ್‌ಗೆ 6 ಸಾವಿರ ರೂ. ನಿಗದಿ ಮಾಡಿ ಖರೀದಿಸಬೇಕು. ಮಾರುಕಟ್ಟೆಯಲ್ಲಿಯೂ ದರ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಬೇಕು. ರೈತರ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಸಬೇಕು. ಬೆಳೆ ವಿಮೆ ಕಟ್ಟಿದ ರೈತರಿಗೆ ಸಮರ್ಪಕವಾಗಿ ಬೆಳೆ ವಿಮೆ ಹಣ ವಿತರಣೆಗೆ ಕ್ರಮ ಕೈಗೊಳ್ಳಬೇಕು. ರೈತರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಬೇಕು ಎಂದು ಒತ್ತಾಯಿಸಲಾಯಿತು.
ಸಂಘದ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಆಣದೂರೆ ಮಾತನಾಡಿ, ರೈತರ ಸಮಸ್ಯೆಗಳ ಕುರಿತು ಚರ್ಚಿಸಿ, ಪರಿಹಾರ ಕಲ್ಪಿಸಲು ಸರ್ಕಾರದ ಗಮನ ಸೆಳೆಯುವ ಉz್ದೆÃಶದಿಂದ ಪ್ರತಿ ತಿಂಗಳು ಮಾಸಿಕ ಸಭೆ ನಡೆಸಲಾಗುತ್ತದೆ. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ತಾಲೂಕು ಅಧ್ಯಕ್ಷ ಸುಭಾಷ ರಗಟೆ, ಜಿಲ್ಲಾ ಉಪಾಧ್ಯಕ್ಷ ಚಂದ್ರಶೇಖರ ಜಮಖಂಡಿ, ಜಿಲ್ಲಾ ಕಾರ್ಯಾಧ್ಯಕ್ಷ ಶ್ರೀಮಂತ ಬಿರಾದಾರ, ತಾಲೂಕು ಕಾರ್ಯದರ್ಶಿ ರೇವಣಸಿದ್ದಪ್ಪ ಯರಬಾಗ, ಕಮಲನಗರ ತಾಲೂಕು ಅಧ್ಯಕ್ಷ ಪ್ರವೀಣ ಕುಲ್ಕರ್ಣಿ ಮಾತನಾಡಿದರು.
ರೈತ ಮುಖಂಡರಾದ ದಯಾನಂದ ಹಳ್ಳೆ, ಚಂದ್ರಕಾAತ ಮಾಸ್ತರ, ನಾಗಶೆಟ್ಟಿ, ಬಾಬುಪೆದ್ದೆ, ಮಡಿವಾಳಪ್ಪ ಪಾಟೀಲ್, ಗುರುನಾಥರೆಡ್ಡಿ ಕಿಟ್ಟಾ, ಜಯಪ್ರಕಾಶ ಸದಾನಂದೆ, ಚಂದ್ರಕಾAತ ಮೋಳಕೆರೆ, ಬಸವರಾಜ, ಶಿವರಾಜ ಪಾರಾ, ಸಂಜೀವಕುಮಾರ ನಾಗರಾಳೆ, ವೆಂಕಟ ದೇಶಪಾಂಡೆ, ಪಿರೋಜಿ ಹಿರನಾಗಾಂವ, ಬಸವರಾಜ ನೇತೆ, ಶಾಂತವಿಜಯ ಪಾಟೀಲ್, ಕಾಶಪ್ಪ ಬಿರಾದಾರ, ಸವಿತಾ ರಗಟೆ, ಮಹಾನಂದಾ ಕಿರುಣಗೆ ಇದ್ದರು.
ತಾಲೂಕು ರೈತ ಸಂಘದ ಮಹಿಳಾ ಘಟಕವನ್ನು ಉದ್ಘಾಟಿಸಿ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಘಟಕದ ಅಧ್ಯಕ್ಷರಾಗಿ ವಿದ್ಯಾವತಿ ಶೇರಿಕಾರ ಅವರನ್ನು ನೇಮಕ ಮಾಡಲಾಯಿತು.