ನ್ಯೂಸ್

ರೈತರ ಸಮಸ್ಯೆ ಕೇಳದೆ ಕಚೇರಿಯಿಂದ ಕಾಲ್ಕಿತ್ತ ಎಡಿಎಲ್‌ಆರ್ ಹನುಮಂತರಾಯಪ್ಪ / ದಾಖಲೆ ಕೇಳಿದ ರೈತರಿಗೆ ಉಡಾಫೆ ಉತ್ತರ / ಅಧಿಕಾರಿಗೆ ಚಳಿ ಬಿಡಿಸಿದ ರೈತರು

ವಿಜಯವಾಣಿ ಸುದ್ದಿಜಾಲ ಕೋಲಾರ

ತಾಲೂಕಿನ ಅಬ್ಬಣಿ ಅರಣ್ಯ ಒತ್ತುವರಿಗೆ ಸಂಬAಧಿಸಿದAತೆ ರೈತರ ಸಮಸ್ಯೆಗಳನ್ನು ಕೇಳಲು ಕಚೇರಿಗೆ ತೆರಳಿದಾಗ ಕಛೇರಿಯಿಂದ ಕಾಲ್ಕಿತ್ತ ಎಡಿಎಲ್‌ಅರ್ ಹನುಮಂತರಾಯಪ್ಪರನ್ನು ಕೆಲಕಾಲ ರೈತರು ಹಾಗೂ ರೈತ ಸಂಯುಕ್ತ ಹೋರಾಟ ಸಮಿತಿಯ ಮುಖಂಡರು ತರಾಟೆ ತೆಗೆದುಕೊಂಡ ಘಟನೆ ನಗರದ ತಹಶಿಲ್ದಾರ್ ಕಛೇರಿ ಮುಂದೆ ಶುಕ್ರವಾರ ನಡೆಯಿತು.

ಅಧಿಕಾರಿಯ ಬಳಿ ರೈತರ ಸಮಸ್ಯೆ ಮತ್ತು ಅರಣ್ಯ ಒತ್ತುವರಿಗೆ ಸಂಬAಧಿಸಿದAತೆ ಹಾಗೂ ಹೈಕೋರ್ಟ್ ಆದೇಶದಂತೆ ಅರಣ್ಯ ಇಲಾಖೆ, ಕಂದಾಯ ಇಲಾಖೆ, ಹಾಗೂ ರೈತರನ್ನು ಒಳಗೊಂಡAತೆ ಜಂಟಿ ಸರ್ವೇಗೆ ಸಂಬAಧಿಸಿದAತೆ ಮಾತನಾಡುವಾಗ ರೈತರನ್ನು ಕಡೆಗಣಿಸಿ ತೆರಳಿದ ಹನುಮಂತರಾಯಪ್ಪ ಅವರನ್ನು ಅಡ್ಡಗಟ್ಟಿದ ರೈತ ಮುಖಂಡರು ಎಚ್ಚರಿಕೆ ನೀಡಿದರು.

ಕಳೆದ ಮೂರು ದಿನಗಳಿಂದ ಜಿಲ್ಲೆಯಲ್ಲಿ ಅರಣ್ಯ ಇಲಾಖೆ ತೆರವು ಕಾರ್ಯಾಚರಣೆಯಲ್ಲಿ ತೊಡಗಿದೆ. ಆದರೆ ರೈತರು ಸರಿಯಾದ ದಾಖಲೆ ನೀಡಿದರು ಕಾರ್ಯಚರಣೆ ನಿಲ್ಲಿಸಲಾಗುತ್ತಿಲ್ಲ. ಆದರೆ ರೈತರಿಗೆ ಬೇಕಾದ ಜಂಟಿ ಸರ್ವೆ ವರದಿ ಸೇರಿದಂತೆ ಕೆಲವು ದಾಖಲೆಗಳನ್ನು ನೀಡದೆ ನೀವು ಸತಾಯಿಸುತ್ತಿದ್ದೀರಿ. ತಮ್ಮ ಕಷ್ಟ ಹೇಳಿಕೊಳ್ಳಲು ತೆರಳಿದ ರೈತರನ್ನು ಲೆಕ್ಕಿಸದೆ ಎಡಿಎಲ್‌ಅರ್ ಹನುಮಂತರಾಯಪ್ಪ ಊಟಕ್ಕೆಂದು ತೆರಳಲು ಮುಂದಾಗಿದ್ದನ್ನು ರೈತ ಮುಖಂಡರಾದ ಅಬ್ಬಣಿ ಶಿವಪ್ಪ ಮತ್ತಿತರರು ಪ್ರಶ್ನೆ ಮಾಡಿದರು.

ರೈತರಿಗೆ ಉತ್ತರ ನೀಡಿ ಬಳಿಕ ಊಟಕ್ಕೆ ತೆರಳಿ ಎಂದು ರೈತರು ಪಟ್ಟು ಹಿಡಿದರು. ರೈತರ ಆಕ್ರೋಶ ಅರಿತ ಎಡಿಎಲ್‌ಆರ್ ಕೆಲವೇ ಸಮಯ ಬಿಟ್ಟು ವಾಪಸ್ ಬಂದು ರೈತರನ್ನು ಸಮಾಧಾನಪಡಿಸಿ ದಾಖಲೆಗಳನ್ನು ಎರಡು ದಿನದಲ್ಲಿ ಕೊಡುವುದಾಗಿ ಭರವಸೆ ನೀಡಿದರು.

ರೈತ ಹೋರಾಟ ಸಮಿತಿ ಮುಖಂಡರಾದ ಟಿ.ಎಂ.ವೆAಕಟೇಶ್, ಪಾತಕೊಟ ನವೀನ್ ಕುಮಾರ್, ಕೋಟಿಗಾನಹಳ್ಳಿ ಗಣೇಶ್ ಗೌಡ, ಹರಟಿ ಪ್ರಕಾಶ್, ವೆಂಕಟರಾಮಪ್ಪ, ವೆಂಕಟೇಶಗೌಡ ಇದ್ದರು.

ಚಿತ್ರ ೨೮ ಕೆ.ಎಲ್.ಆರ್. ೦೧ : ರೈತರ ಸಮಸ್ಯೆಗಳನ್ನು ಆಲಿಸದೆ ಕಛೇರಿಯಿಂದ ಕಾಲ್ಕಿತ್ತ ಎಡಿಎಲ್‌ಆರ್ ಹನುಮಂತರಾಯಪ್ಪನನ್ನು ಅಡ್ಡಗಟ್ಟಿದ ರೈತ ಮುಖಂಡರಾದ ಅಬ್ಬಣಿ ಶಿವಪ್ಪ, ಟಿ.ಎಂ.ವೆAಕಟೇಶ್ ಮುಂತಾದವರು ತರಾಟೆಗೆ ತೆಗೆದುಕೊಂಡರು.