ವಿಜಯವಾಣಿ ಸುದ್ದಿಜಾಲ ಕೋಲಾರ
ಅರಣ್ಯ ಭೂಮಿಯ ಗೆಜೆಟ್ ನೋಟಿಫಿಕೇಶನ್ ಸೆಟಲ್ಮೆಂಟ್ ಅಧಿಕಾರಿಯ ಆದೇಶ ಅಂತಿಮ ಎಂದು ಕೋಲಾರ ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ಕೋಲಾರ ಶ್ರೀನಿವಾಸಪುರ ಮತ್ತು ಮುಳಬಾಗಲು ರೈತ ಮುಖಂಡರ ಸಮಸ್ಯೆಗಳನ್ನು ಆಲಿಸಿ ಮಾತನಾಡಿ, ಜಿಲ್ಲೆಯ ರೈತರ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳ ಸಮಸ್ಯೆಗಳು ಮತ್ತು ಸಂಘರ್ಷಗಳು ಇತ್ತೀಚೆಗೆ ಹುಟ್ಟಿಕೊಂಡಿದ್ದು, ಇವುಗಳ ಪರಿಹಾರಕ್ಕಾಗಿ ಸರ್ಕಾರ ರಾಜ್ಯಮಟ್ಟದಲ್ಲಿ ಚರ್ಚೆಗಳು ನಡೆಯುತ್ತಿದೆ.
ಕೋಲಾರ ಜಿಲ್ಲೆಯಲ್ಲಿ ಈ ಹಿಂದೆ ಯಾವುದೇ ಸಮಸ್ಯೆಗಳಿಲ್ಲದೆ ಅರಣ್ಯ ಇಲಾಖೆಯವರು ತಮ್ಮ ಪಾಡಿಗೆ ತಮ್ಮ ಕಾಡನ್ನು ನೋಡಿ ಕೊಳ್ಳುತ್ತಿದ್ದರು. ಕಂದಾಯ ಇಲಾಖೆ ರೈತರಿಗೆ ಕೊಟ್ಟಂತಹ ಸರ್ಕಾರಿ ಗೋಮಾಳ ಜಮೀನುಗಳಲ್ಲಿ ಸಣ್ಣಪುಟ್ಟ ಬೆಳೆಗಳನ್ನು ಬೆಳೆದುಕೊಂಡು ಜೀವನ ಸಾಗಿಸುತ್ತಿದ್ದರು. ಇತ್ತೀಚಿಗೆ ಕೆಲವು ಅರಣ್ಯ ಅಧಿಕಾರಿಗಳು ಅರಣ್ಯ ಇಲಾಖೆಯಲ್ಲಿ ಅರಣ್ಯಕ್ಕೆ ಸಂಬAಧಪಟ್ಟAತೆ ಕಾಯಿದೆಗಳನ್ನು ಎಲ್ಲೋ ಸರಿಯಾಗಿ ತಿಳಿದುಕೊಳ್ಳದೆ ರೈತರ ಜಮೀನುಗಳು, ಅರಣ್ಯ ಜಮೀನುಗಳು ಯಾವುದು ಎನ್ನುವ ಸ್ವಷ್ಟ ಮಾಹಿತಿ ಇಲ್ಲದೆ, ಈ ರೀತಿಯ ಸಂಘರ್ಷಗಳಿಗೆ ಕಾರಣವಾಗಿದೆ.
ಜನಪ್ರತಿನಿಧಿಗಳು ಸಹ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದು, ಇದನ್ನು ಸುಮಾರು ಆರು ತಿಂಗಳಿAದ ಸಭೆಗಳನ್ನು ನಡೆಸಿ ಸರಿಯಾದ ದಾಖಲೆಗಳನ್ನು ಕಲೆಹಾಕಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಹಂತಕ್ಕೆ ಬಂದಿದೆ. ಹಾಗೆಯೇ ಈ ಜಮೀನುಗಳ ಜಂಟಿ ಸರ್ವೆಯು ಸಹ ನಡೆದಿದ್ದು, ಕೋಲಾರ ತಾಲೂಕು ಹುತ್ತೂರು ಹೋಬಳಿ ಶಿಳ್ಳೆಂಗೆರೆ, ಹರಟಿ, ಮಲ್ಲಂಡಳ್ಳಿ, ಕೋಟಿಗಾನಹಳ್ಳಿ, ಅಬ್ಬಿಣಿ, ಅರಳಕುಂಟೆ ಗ್ರಾಮಗಳ ರೈತರ ಜಮೀನುಗಳು ಸರ್ಕಾರಿ ಗೋಮಾಳ ಜಮೀನುಗಳು ಎಂದು ಕಂದಾಯ ಇಲಾಖೆಯ ದಾಖಲೆಗಳಲ್ಲಿ ಇದೆ. ಹಾಗೆಯೇ ಸರ್ಕಾರಿ ಗೋಮಾಳ ಜಮೀನಿನಲ್ಲಿಯೇ ಅರಣ್ಯ ಪ್ರದೇಶವು ಇದೆ. ಇದಕ್ಕೆ ಸಂಬAಧ ಪಟ್ಟಂತೆ ಅಬ್ಬಣಿ ನೋಟಿಫಿಕೇಶನ್ ಪ್ರಕಾರ ೬೧೯ ಎಕರೆ ಜಮೀನು ಅರಣ್ಯವಿದೆ ಎಂದು ಹೇಳುತ್ತಾರೆ.
ಆದರೆ ಪ್ರಸ್ತುತ ಅರಣ್ಯ ನೋಟಿಫಿಕೇಶನ್ ಸೆಟಲ್ಮೆಂಟ್ ಅಧಿಕಾರಿಯು ಮೈಸೂರು ಮಹಾರಾಜರ ಪತ್ರದಂತೆ ಅರಣ್ಯಕ್ಕೆ ೬೧೯ ಎಕರೆಗೆ ಬದಲಾಗಿ ೪೦೯ ಎಕರೆ ೩೫ ಗುಂಟೆ ಮಂಜೂರು ಮಾಡಲಾಗಿದೆ. ಈ ಆದೇಶವೇ ಅಂತಿಮವಾಗಿದ್ದು, ಅರಣ್ಯ ಇಲಾಖೆಯವರು ತಮ್ಮಲ್ಲಿ ಇರುವ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸುವುದು ಒಳ್ಳೆಯದು.
ಹಾಗೆಯೇ ಮುಂದಿನ ದಿನಗಳಲ್ಲಿ ಜಂಟಿ ಸರ್ವೆಯ ಫಲಿತಾಂಶ ಬಂದ ತಕ್ಷಣ ಅಂತಿಮ ವರದಿಯನ್ನು ನೀಡಲಾಗುವುದು. ಕೋಲಾರ ತಾಲೂಕು ರೈತರ ಜಮೀನುಗಳ ಸಮಸ್ಯೆ ಮುಗಿದ ತಕ್ಷಣ ಶ್ರೀನಿವಾಸಪುರ ಹಾಗೂ ಮುಳಬಾಗಿಲು ರೈತರ ಮತ್ತು ಅರಣ್ಯ ಇಲಾಖೆಯವರ ಸಮಸ್ಯೆಗಳನ್ನು ಪರಿಹರಿಸಲಾಗುವುದೆಂದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಕೋಲಾರ ರೈತ ಮುಖಂಡ ಆರ್ ಶ್ರೀನಿವಾಸನ್ ಅರಣ್ಯ ಇಲಾಖೆಯ ಕೆಲವು ಆದೇಶ ಪ್ರತಿಗಳನ್ನು ಈ ಭಾಗದ ಸರ್ಕಾರಿ ಗೋಮಳ ಜಮೀನಿಗೆ ಸಂಬAಧಪಟ್ಟ ಹಳೆಯ ದಾಖಲೆಗಳು, ನಕ್ಷೆಗಳು, ರೈತರ ಜಮೀನುಗಳ ಹಳೆಯ ದಾಖಲೆಗಳನ್ನು ನೀಡಿ, ಆದಷ್ಟು ಬೇಗ ರೈತರಿಗೆ ಅನುಕೂಲ ವಾಗುವಂತೆ ಆದೇಶವನ್ನು ನೀಡಬೇಕೆಂದು ಮನವಿ ಮಾಡಿದರು.
ರೈತರ ನಿಯೋಗದಲ್ಲಿ ಮುಳಬಾಗಿಲಿನ ರೈತ ಮುಖಂಡರಾದ ಗೋಪಾಲ್, ಶ್ರೀನಿವಾಸಪುರ ರೈತ ಮುಖಂಡರಾದ ನವೀನ್, ವೆಂಕಟೇಶ್, ಕೋಲಾರ ರೈತ ಮುಖಂಡರಾದ ಹರಟಿ ಪ್ರಕಾಶ್, ವೆಂಕಟಣಪ್ಪ, ವೆಂಕಟಸ್ವಾಮಿ, ಭಟ್ರಹಳ್ಳಿ ಮಂಜುನಾಥ, ಶ್ರೀನಿವಾಸ, ನಾರಾಯಣಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.
ಚಿತ್ರ ೦೩ ಕೆ.ಎಲ್.ಆರ್. ೦೬ : ಸಂಘರ್ಷಕ್ಕೆ ಒಳಗಾಗಿರುವ ಅರಣ್ಯ ಮತ್ತು ರೈತರ ಜಮೀನುಗಳಿಗೆ ಪರಿಹಾರ ಕಾಣಬೇಕೆಂದು ರೈತ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.