ಕನ್ನಡದ ನಂ.1 ದೈನಿಕ ‘ವಿಜಯವಾಣಿ’ ಮಾಧ್ಯಮ ಸಹಯೋಗದೊಂದಿಗೆ ‘ರೆಡ್ ಎಫ್‌ಎಂ 93.5’ ಆಯೋಜಿಸಿದ್ದ ‘ರೆಡ್ ಪ್ರೀಮಿಯರ್ ಲೀಗ್’ ಕ್ರಿಕೆಟ್ ಪಂದ್ಯಾವಳಿಯಲ್ಲಿ ಎನ್.ಆರ್.ಗ್ರೂಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಎಫ್‌ಎಫ್‌ಎಚ್-1 ತಂಡವನ್ನು 26 ರನ್‌ಗಳಿಂದ ಸೋಲಿಸಿ ಚಾಂಪಿಯನ್ ಪಟ್ಟಕೇರಿತು. ಎನ್.ಆರ್.ಗ್ರೂಪ್ ಇದರೊಂದಿಗೆ ಸತತ ಎರಡನೇ ಬಾರಿಗೆ ರೆಡ್ ಪ್ರೀಮಿಯರ್ ಲೀಗ್’ ಕ್ರಿಕೆಟ್ ಪಂದ್ಯಾವಳಿಯ ಪ್ರಶಸ್ತಿ ತನ್ನದಾಗಿಸಿಕೊಂಡಿತು. 2024ನೇ ಸಾಲಿನಲ್ಲೂ ಪ್ರಶಸ್ತಿ ಪಡೆದಿತ್ತು.
ಮೊದಲ ಬ್ಯಾಟಿಂಗ್ ಮಾಡಿದ ಎನ್.ಆರ್.ಗ್ರೂಪ್ ತಂಡ ನಿಗದಿತ 8 ಓವರ್‌ಗಳಲ್ಲಿ 5 ವಿಕೆಟ್‌ಗೆ 81 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಪ್ರತಿಯಾಗಿ ಎಫ್‌ಎಫ್‌ಎಚ್-1 ತಂಡ 8 ವಿಕೆಟ್‌ಗೆ ಕೇವಲ 55 ರನ್ ಮಾತ್ರ ಕಲೆಹಾಕುವಲ್ಲಿ ಶಕ್ತವಾಯಿತು.
ಎನ್.ಆರ್.ಗ್ರೂಪ್ ತಂಡದ ಪರ ಜಿ.ಮಧು(16 ರನ್), ಚಂದು (13), ಚಂದನ್(*17), ಚಾಲ್ಸ್ ಹೆನ್ರಿ (*19) ರನ್ ಬಾರಿಸಿ ಬೃಹತ್ ಮೊತ್ತ ದಾಖಲಿಸಲಿ ಕಾರಣರಾದರು. ಬೌಲಿಂಗ್‌ನಲ್ಲಿ ಮೊಹಮ್ಮದ್ ರಫಿ 3 ಹಾಗೂ ಚಾಲ್ಸ್ ಹೆನ್ರಿ 2 ವಿಕೆಟ್ ಪಡೆದು ಗಮನ ಸೆಳೆದರು. ಎಫ್‌ಎಫ್‌ಎಚ್-1 ತಂಡದ ಪರ ಎ.ಮಧು(12), ಶರತ್(15) ಉತ್ತಮ ಪ್ರದರ್ಶನ ನೀಡಿದರು.
ಬೆಸ್ಟ್ ಬ್ಯಾಟ್ಸ್‌ಮನ್ ಪ್ರಶಸ್ತಿಯನ್ನು ಎನ್.ಆರ್.ಗ್ರೂಪ್‌ನ ಮಧುಸುದನ್, ಬೆಸ್ಟ್ ಬೌಲರ್ ಪ್ರಶಸ್ತಿಯನ್ನು ಎನ್.ಆರ್.ಗ್ರೂಪ್‌ನ ಚಾಲ್ಸ್ ಹೆನ್ರಿ, ಬೆಸ್ಟ್ ಫೀಲ್ಡರ್ ಪ್ರಸ್ತಿಯನ್ನು ಇಕ್ವಲೈಜ್ ಆರ್‌ಸಿಎಂ ತಂಡದ ಸನತ್, ಬೆಸ್ಟ್ ವಿಕೆಟ್ ಕೀಪರ್ ಪ್ರಶಸ್ತಿಯನ್ನು ಇಕ್ವಲೈಜ್ ಆರ್‌ಸಿಎಂ ತಂಡದ ಸದಾಶಿವ್, ಮ್ಯಾನ್ ಆಫ್ ದ ಸೀರಿಸ್ ಪ್ರಶಸ್ತಿಯನ್ನು ಎಫ್‌ಎಫ್‌ಎಚ್ ತಂಡದ ಮಹೇಶ್ ಹಾಗೂ ಅಂತಿಮ ಪಂದ್ಯದ ಮ್ಯಾನ್ ಆಫ್ ದ ಮ್ಯಾಚ್ ಪ್ರಶಸ್ತಿಯನ್ನು ಎನ್.ಆರ್.ಗ್ರೂಪ್‌ನ ಮೊಹಮ್ಮದ್ ರಫಿ ಪಡೆದರು.
ಲಕ್ಷ್ಮೀಪುರಂ ಸರ್ಕಲ್ ಇನ್ಸ್‌ಪೆಕ್ಟರ್ ರವಿಶಂಕರ್, ‘ವಿಜಯವಾಣಿ’ ದೈನಿಕ ಜಾಹೀರಾತು ವಿಭಾಗದ ವ್ಯವಸ್ಥಾಪಕ ದೀಪಕ್ ಘಾಟ್ಕೆ, ರೆಡ್ ಎಫ್ 93.5 ಸ್ಟೇಷನ್ ಹೆಡ್ ಚೇತನ್‌ಕುಮಾರ್, ಕೌಟಿಲ್ಯ ವಿದ್ಯಾಲಯ ಪ್ರಾಂಶುಪಾಲೆ ವಿ.ಆರ್. ಶಶಿಕಲಾ, ಟೈಟಲ್ ಸ್ಪಾನ್ಸರ್ ರವಿಶರ್ಮ, ಸುಮಯ ಪ್ರಾಪರ್ಟಿನ ರವಿಕುಮಾರ್,ಹೊನ್ನಸಿರಿ ನಿಶಾನ್ ಜನರಲ್ ಮ್ಯಾನೇಜರ್ ಜಗದೀಶ್, ಚಿರಾಗ್ ಆ್ಯಡ್ಸ್ ಆ್ಯಂಡ್ ಇವೆಂಟ್ಸ್‌ನ ವಿವೇಕ್ ಇತರರು ಇದ್ದರು.