ಮೂಗೂರು: ಗತಕಾಲದಿಂದಲೂ ವೈಭವದ ಜಾತ್ರಾ ಮಹೋತ್ಸವಕ್ಕೆ ಮೆರಗು ನೀಡುತ್ತಿದ್ದ ಶ್ರೀತ್ರಿಪುರ ಸುಂದರಿ ಅಮ್ಮನವರ ಜೀರ್ಣೋದ್ದಾರಗೊಂಡ ರುದ್ರಾಕ್ಷಿ ಮಂಟಪವನ್ನು ವಾಟಾಳು ಮಠದ ಶ್ರೀಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ದೇಗುಲದ ಆವರಣದಲ್ಲಿ ಗುರುವಾರ ಪುಷ್ಪಾರ್ಚನೆ ಮಾಡುವ ಮೂಲಕ ಲೋಕಾರ್ಪಣೆ ಮಾಡಿದರು.
ದೇವಾಲಯಕ್ಕೆ ಸೇರಿದ ರುದ್ರಾಕ್ಷಿ ಮಂಟಪ ಶಿಥಿಲಗೊಂಡ ಹಿನ್ನೆಲೆಯಲ್ಲಿ ಗ್ರಾಮದ ಗೌಡರ ಬೀದಿಯ ನಿವಾಸಿ ಕೆ.ಪಿ.ಪುಟ್ಟಬುದ್ಧಿ, ರಾಜಮ್ಮ ಅವರ ಕುಟುಂಬ ಲಕ್ಷಾಂತರ ರೂ.ಖರ್ಚ ಮಾಡಿ ನೂತನ ರುದ್ರಾಕ್ಷಿ ಮಂಟಪವನ್ನು ಜೀರ್ಣೋದ್ದಾರಗೊಳಿಸಿದ್ದರು. ರುದ್ರಾಕ್ಷಿ ಮಂಟಪಕ್ಕೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಗ್ರಾಮಸ್ಥರ ಸಮ್ಮುಖದಲ್ಲಿ ದೇವಾಲಯಕ್ಕೆ ಸಮರ್ಪಿಸಲಾಯಿತು.
ಗೌಡರ ಎಂ.ಪಿ.ನಾಗರಾಜು, ಹಿರಿಯ ಮುಖಂಡರಾದ ಎಂ.ಪಿ.ಪುಟ್ಟಸ್ವಾಮಿ, ಬಸವಣ್ಣ, ಸುನಂದಮ್ಮ, ಅರ್ಚಕರಾದ ರವಿ, ಶಿಲ್ಪಿ ಪ್ರಕಾಶ್ ಆಚಾರ್ಯ, ಕೆಂಪಣ್ಣ, ವಿಜಯ್‌ಕುಮಾರ್, ಅನುಶ್ರೀ, ಅಭಿಷೇಕ್, ಎಂ.ಬಿ.ಬಾಬು, ಪಿಎಸಿಸಿ ಬ್ಯಾಂಕ್ ಅಧ್ಯಕ್ಷ ರಾದ ಎಂ.ಬಿ.ಮಹೇಂದ್ರ ಕುಮಾರ್, ನಂದರಾಜು, ನಿಜಗುಣ, ಮಹದೇವಪ್ಪ, ಅರ್ಚಕ ಸಮೂಹ ಹಾಗೂ ಗ್ರಾಮಸ್ಥರು ಹಾಜರಿದ್ದರು.