ನ್ಯೂಸ್

ರುತ್ವಿಕ್ ಸಿ.ರಾಜ್‌ಗೆ 8ನೇ ರ್ಯಾಂಕ್

ಮೈಸೂರು: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 25ನೇ ಘಟಿಕೋತ್ಸವದಲ್ಲಿ ಮಹಾರಾಜ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ರುತ್ವಿಕ್ ಸಿ.ರಾಜ್ ಅವರು 8ನೇ ರ‌್ಯಾಂಕ್ ಮತ್ತು ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.

ಸಿವಿಲ್ ಇಂಜಿನಿಯರಿಂಗ್ ವಿಷಯದಲ್ಲಿ ರುತ್ವಿಕ್ ಈ ಸಾಧನೆ ಮಾಡಿದ್ದಾರೆ. ಶೇ. 0.23 ಅಂಕಗಳಿಂದ ಮೊದಲ ರ‌್ಯಾಂಕ್ ಕೈ ತಪ್ಪಿದೆ. ಈತನ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ ಅಭಿನಂದಿಸಿದೆ. ದಟ್ಟಗಳ್ಳಿ ನಿವಾಸಿ ಸಾವಿತ್ರಿ ಆರ್. ಮತ್ತು ಡಾ.ಚೆಲುವಪ್ಪಾಜಿ ಅವರ ಪುತ್ರ ರುತ್ವಿಕ್ ಅವರು ಅನ್ನ ಸಿನಿಮಾದ ಹಿನ್ನೆಲೆ ಗಾಯಕರಾಗಿದ್ದಾರೆ. ಐಎಎಸ್ ಅಧಿಕಾರಿಯಾಗುವ ಗುರಿ ಹೊಂದಿರುವ ರುತ್ವಿಕ್ ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಾರೆ.