ವಿಜಯವಾಣಿ ಸುದ್ದಿಜಾಲ ಕೋಲಾರ
ರಾಷ್ಟಿçÃಯ ಲೋಕ್ ಅದಾಲತ್‌ನಲ್ಲಿ ಮಾ.೦೮ ರಂದು ವಿವಿಧ ನ್ಯಾಯಾಲಯಗಳಲ್ಲಿ ನಡೆದ ಬೈಠಕ್‌ಗಳಲ್ಲಿ ನ್ಯಾಯಾಲಯದಲ್ಲಿ ಬಾಕಿ ಇದ್ದ ಸಿವಿಲ್, ಕ್ರಿಮಿನಲ್ ಮತ್ತು ವಿಮಾ ಪರಿಹಾರ ಪ್ರಕರಣಗಳು ಸೇರಿ ೬೬೧೫೪ ಪ್ರಕರಣಗಳು ರಾಜಿ ಮೂಲಕ ಇತ್ಯರ್ಥ್ಯಗೊಳಿಸಿರುವುದಾಗಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ಎ.ಮಂಜುನಾಥ್ ತಿಳಿಸಿದರು. '
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿ, ನ್ಯಾಯಾಲಯದಲ್ಲಿ ಚಾಲ್ತಿಯಿರುವ ಪ್ರಕರಣಗಳು ೧೦೨೬೩ ಹಾಗೂ ವ್ಯಾಜ್ಯ ಪೂರ್ವ ಬ್ಯಾಂಕ್, ಟ್ರಾಫಿಕ್ ಪ್ರಕರಣಗಳು ಹಾಗೂ ಇತರೆ ಸಾರ್ವಜನಿಕ ಉಪಯುಕ್ತತಾ ಪ್ರಕರಣಗಳು ೫೫೮೯೧ ಸೇರಿ ಒಟ್ಟು ೬೬೧೫೪ ಪ್ರಕರಣಗಳು ವಿಲೇಯಾಗಿರುತ್ತದೆ. ಅವುಗಳ ಪರಿಹಾರ ಮೊತ್ತ ೩೨,೪೪,೦೪,೫೬೬ ರೂ.ಗಳ ಪರಿಹಾರ ಮೊತ್ತ ಒಳಗೊಂಡಿರುತ್ತದೆ ಎಂದು ನ್ಯಾಯಾಧೀಶರಾದ ಜಿ.ಎ. ಮಂಜುನಾಥ್ ತಿಳಿಸಿದ್ದಾರೆ.
ಕಕ್ಷಿದಾರರು ಹಾಗೂ ವಕೀಲರು ಸೇರಿ ರಾಷ್ಟಿçÃಯ ಲೋಕ್ ಅದಾಲತ್ ಬೈಠಕ್‌ಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಮ್ಮ ತಮ್ಮ ಪ್ರಕರಣಗಳನ್ನು ಪರಸ್ಪರ ಮಾತುಕತೆಯ ಮೂಲಕ ರಾಜೀ ಸಂಧಾನ ಮಾಡಿಕೊಂಡಿರುತ್ತಾರೆ. ಇವುಗಳಲ್ಲಿ ರಾಜೀ ಆಗುವ ಕ್ರಮಿನಲ್ ಪ್ರಕರಣಗಳು ೩೭, ಚೆಕ್ ಬೌನ್ಸ್ ಪ್ರಕರಣಗಳು ೨೪೫, ಕೌಟುಂಬಿಕ ವ್ಯಾಜ್ಯಗಳು ೨೬, ವಿಭಾಗದ ದಾವೆಗಳು ೧೨೩, ಇತರೆ ಸಿವಿಲ್ ಪ್ರಕರಣಗಳು ೨೯೬ ಮೋಟಾರು ವಾಹನ ಅಪಘಾತ ಪರಿಹಾರ ಪ್ರಕರಣಗಳು ೧೫ ಹಾಗೂ ಇತರೆ ಕ್ರಿಮಿನಲ್ ಪ್ರಕರಣಗಳು ೯೫೨೧ ಸೇರಿ ಒಟ್ಟು ೧೦೨೬೩ ನ್ಯಾಯಾಲಯದಲ್ಲಿ ಚಾಲ್ತಿಯಿರುವ ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳು ೫೫೮೯೧ ಸೇರಿ, ಒಟ್ಟು ೬೬೧೫೪ ಪ್ರಕರಣಗಳು ಜಿಲ್ಲೆಯ ಎಲ್ಲಾ ನ್ಯಾಯಾಲಯಗಳಲ್ಲಿ ವಿಲೇಯಾಗಿರುತ್ತವೆ ಎಂದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀ ಜಿ.ಎ ಮಂಜುನಾಥ್ ಅವರ ಮಾರ್ಗದರ್ಶನದಲ್ಲಿ ರಾಷ್ಟಿçÃಯ ಲೋಕ್ ಅದಾಲತ್‌ನ ಯಶಸ್ಸಿಗೆ ಸಹಕರಿಸಿದ ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ಎಂ.ಮುನೇಗೌಡ, ಕಾರ್ಯದರ್ಶಿ ಶ್ರೀ ಬೈರಾರೆಡ್ಡಿ ಹಾಗೂ ಎಲ್ಲಾ ವಕೀಲರಿಗೂ ಹಾಗೂ ಜಿಲ್ಲೆಯ ಎಲ್ಲಾ ನ್ಯಾಯಾಧೀಶರಿಗೆ, ಸಿಬ್ಬಂದಿಗಳಿಗೆ ಹಾಗೂ ಪಕ್ಷಗಾರರಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀ ಸುನಿಲ ಎಸ್ ಹೊಸಮನಿ ರವರು ಅಭಿನಂದನೆಗಳನ್ನು ಸಲ್ಲಿಸಿರುತ್ತಾರೆ.